ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಉತ್ಪಾದನೆ! 1 ಲಿಟರ್ ಬೆಲೆ ಕೇವಲ 40 ರೂಪಾಯಿ

ದೇಶದಾದ್ಯಂತ ತೈಲ ದರ ಗಗನಕ್ಕೇರುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ದರ 70 ರೂಪಾಯಿಗಿಂತ ಹೆಚ್ಚಿದೆ.

ದೇಶದಾದ್ಯಂತ ತೈಲ ದರ ಗಗನಕ್ಕೇರುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ದರ 70 ರೂಪಾಯಿಗಿಂತ ಹೆಚ್ಚಿದೆ. ಆದರೆ ಇಲ್ಲಿ ಹೈದರಾಬಾದ್ ನಿವಾಸಿಯೊಬ್ಬರು ಪೆಟ್ರೋಲ್ ಅನ್ನು ಲೀಟರ್ ಗೆ ರೂ. 40 ಕ್ಕೆ ಮಾರಾಟ ಮಾಡುತ್ತಿದ್ದಾರೆ. ಇವರು ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸುತ್ತಿದ್ದು, ಇದೊಂದು ಸುಲಭ ಪ್ರಕ್ರಿಯೆಯಾಗಿದೆ ಎಂದಿದ್ದಾರೆ. ಇದಕ್ಕೆ ನೀರಿನ ಅಗತ್ಯವಿಲ್ಲ. ಜೊತೆಗೆ ಇದರಿಂದ ಗಾಳಿ, ನೀರು ಸೇರಿದಂತೆ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಯಾವುದೇ ವಸ್ತು ಬಿಡುಗಡೆಯಾಗುವುದಿಲ್ಲ.

ಪ್ಲಾಸ್ಟಿಕ್ ನಿಂದ ಪೆಟ್ರೋಲ್

ಪ್ಲಾಸ್ಟಿಕ್ ನಿಂದ ಪೆಟ್ರೋಲ್

ಒಂದು ಲೀಟರ್ ಪೆಟ್ರೋಲ್ ಕೇವಲ 40 ರೂಪಾಯಿಗೆ ಸಿಗುತ್ತದೆ ಎಂದರೆ ಆಶ್ಚರ್ಯವಾಗಬಹುದು. ಹೈದ್ರಾಬಾದ್ ನಿವಾಸಿಯಾದ 45 ವರ್ಷದ ಪ್ರಾಧ್ಯಾಪಕ ಸತೀಶ್ ಕುಮಾರ್ ಎಂಬುವವರು ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಸಿದ್ಧಪಡಿಸಿ ಆಶ್ಚರ್ಯ ಮೂಡಿಸಿದ್ದಾರೆ. ಇವರು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುತ್ತಿದ್ದಾರೆ. ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸತೀಶ್ ಪ್ಲಸ್ಟಿಕ್ ಅನ್ನು ಇಂಧನವನ್ನಾಗಿ ಪರಿವರ್ತಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

ಪೆಟ್ರೋಲ್ ತಯಾರಿಕೆ

ಪೆಟ್ರೋಲ್ ತಯಾರಿಕೆ

ಮೂರು ಹಂತದ ಪ್ರಕ್ರಿಯೆಗಳ ಮೂಲಕ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಅನ್ನು ಸಿದ್ಧಪಡಿಸುತ್ತೇನೆಂದು ಸತೀಶ್ ಕುಮಾರ್ ಹೇಳಿದ್ದಾರೆ. ಈ ಪ್ರಕ್ರಿಯೆಗೆ ಪ್ಲಾಸ್ಟಿಕ್ ಪೈರೋಲಿಸಿಸ್ ಎಂದು ಕರೆದಿದ್ದಾರೆ. ಹೈಡ್ರಾಕ್ಸಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ಸತೀಶ್ ಶುರು ಮಾಡಿದ್ದಾರೆ. ಸುಮಾರು 500 ಕೆಜಿ ಪ್ಲಾಸ್ಟಿಕ್ ಅನ್ನು ಈ ಪ್ರಕ್ರಿಯೆಯಿಂದ 400 ಲೀಟರ್ ಪೆಟ್ರೋಲ್ ಉತ್ಪಾದಿಸಬಹುದು. ಇದೊಂದು ತುಂಬಾ ಸರಳವಾದ ಪ್ರಕ್ರಿಯೆಯಾಗಿದ್ದು, ನೀರನ್ನು ಬಳಸಲಾಗುವುದಿಲ್ಲ, ಅಲ್ಲದೇ ಕೊಳಚೆ ನೀರನ್ನು ಬಿಡುವುದಿಲ್ಲ. ಹೀಗಾಗಿ ಇದು ಪರಿಸರ ಸ್ನೇಹಿ ಪ್ರಕ್ರಿಯೆಯಾಗಿದ್ದು, ವಾಯುಮಾಲಿನ್ಯವಿಲ್ಲ.

ಲೀಟರ್ ಗೆ 40-50 ರೂಪಾಯಿ

ಲೀಟರ್ ಗೆ 40-50 ರೂಪಾಯಿ

2016ನೇ ಸಾಲಿನಿಂದ ಇಲ್ಲಿಯವರೆಗೆ ಮರುಬಳಕೆ ಮಾಡಲಾಗದ ಸುಮಾರು 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿದ್ದಾರೆ. ಪ್ರತಿ ದಿನ 200 ಕೆ.ಜಿ ಪ್ಲಾಸ್ಟಿಕ್ ನಿಂದ 200 ಲೀಟರ್ ಪೆಟ್ರೋಲ್ ಆಗಿ ಪರಿವರ್ತಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿಂದ ಉತ್ಪಾದಿಸುವ ಪೆಟ್ರೋಲ್ ಅನ್ನು ಲೀಟರ್ ಗೆ ರೂ.40-50ಕ್ಕೆ ಮಾರಾಟ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+