ಟೆಲಿಕಾಂ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ZEE5 ಚಂದಾದಾರರಿಕೆಯನ್ನು 'ಏರ್‌ಟೆಲ್ ಥ್ಯಾಂಕ್ಸ್' ರಿವಾರ್ಡ್ಸ್ ಕಾರ್ಯಕ್ರಮದಡಿ ಉಚಿತವಾಗಿ ಘೋಷಿಸಿದೆ.
ಟೆಲಿಕಾಂ ಸೇವಾ ಪೂರೈಕೆದಾರ ಭಾರ್ತಿ ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ZEE5 ಚಂದಾದಾರರಿಕೆಯನ್ನು 'ಏರ್‌ಟೆಲ್ ಥ್ಯಾಂಕ್ಸ್' ರಿವಾರ್ಡ್ಸ್ ಕಾರ್ಯಕ್ರಮದಡಿ ಉಚಿತವಾಗಿ ಘೋಷಿಸಿದೆ.
ಏರ್‌ಟೆಲ್ ವಿ-ಫೈಬರ್ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿರುವ ಎಲ್ಲಾ ಗ್ರಾಹಕರು ರೂ. 1,099 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳ ಮೇಲೆ #ಏರ್‌ಟೆಲ್ ಥ್ಯಾಂಕ್ಸ್ ಕಾರ್ಯಕ್ರಮದ ಭಾಗವಾಗಿ ಆಯ್ದ ಪ್ರಯೋಜನಗಳನ್ನು ಪಡೆಯಲಿದ್ದಾರೆ.
ಸಿಗಲಿರುವ ಪ್ರಯೋಜನಗಳು
ಏರ್ಟೆಲ್ ಘೋಷಿಸಿರುವ ಈ ಪ್ರಯೋಜನಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, Zee5 ಮತ್ತು ಏರ್‌ಟೆಲ್ ಟಿವಿ ಚಂದಾದಾರಿಕೆಗಳು ಸೇರಿವೆ. ಈ ವಾರದ ಆರಂಭದಲ್ಲಿ, ರಿವಾರ್ಡ್ಸ್ ಕಾರ್ಯಕ್ರಮದ ಭಾಗವಾಗಿ ರೂ. 129 ಮತ್ತು ಅದಕ್ಕಿಂತ ಹೆಚ್ಚಿನ ಪ್ಲಾನ್ ಗಳ ಮೇಲೆ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಮೊಬೈಲ್ ಚಂದಾದಾರರಿಗಾಗಿ ಏರ್‌ಟೆಲ್ ಥ್ಯಾಂಕ್ಸ್ ಉಚಿತ ಹಲೋ ಟ್ಯೂನ್‌ಗಳನ್ನು ಘೋಷಿಸಿತ್ತು.
ಕಳೆದ ವರ್ಷದ ಪ್ರಯೋಜನ
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಇದೇ ರೀತಿ ಆಯ್ದ ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಚಂದಾದಾರರಿಗೆ ಪ್ರಯೋಜನಗಳನ್ನು ನೀಡಿತು. ಅಕ್ಟೋಬರ್ ತಿಂಗಳಿನಿಂದ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲು ಪ್ರಾರಂಭಿಸಿದೆ. ಬ್ರಾಡ್‌ಬ್ಯಾಂಡ್ ಬಳಕೆದಾರರು ಬೋನಸ್ ಡೇಟಾ, ನೆಟ್‌ಫ್ಲಿಕ್ಸ್ ಚಂದಾದಾರಿಕೆ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳಂತಹ ಪ್ರಯೋಜನಗಳನ್ನು ಈ ವರ್ಷದ ಜನವರಿಯಲ್ಲಿ ರೂ. 1,299 ಯೋಜನೆಗಳ ಮೇಲೆ ಪಡೆದಿದ್ದಾರೆ.
ವಿ-ಫೈಬರ್ ರೂ. 1,099 ಬ್ರಾಡ್‌ಬ್ಯಾಂಡ್ ಯೋಜನೆ
ರೂ. 1,099 ಯೋಜನೆಯೊಂದಿಗೆ ಬಳಕೆದಾರರು 100Mbps ಇಂಟರ್ನೆಟ್ ವೇಗವನ್ನು ಪಡೆಯುತ್ತಾರೆ. ತಿಂಗಳಿಗೆ 300GB ಡೇಟಾ ಬಳಕೆಯೊಂದಿಗೆ ರೋಲ್‌ಓವರ್ ಪಡೆಯುತ್ತಾರೆ. 500 ಜಿಬಿ ಒನ್ ಟೈಮ್ ಡೇಟಾ ಬೋನಸ್ ಸಹ ಲಭ್ಯವಿದೆ. #AirtelThanks ಪ್ರಯೋಜನಗಳೆಂದರೆ, ರೂ. 1,099 ಯೋಜನೆಯಲ್ಲಿ ಮೂರು ತಿಂಗಳ ನೆಟ್‌ಫ್ಲಿಕ್ಸ್ ಚಂದಾದಾರಿಕೆ, ಒಂದು ವರ್ಷದ ಅಮೆಜಾನ್ ಪ್ರೈಮ್ ಚಂದಾದಾರಿಕೆ ಮತ್ತು Zee5 ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಂ ಚಂದಾದಾರಿಕೆಗೆ ಪೂರ್ಣ ಉಚಿತವಿದೆ.


Click it and Unblock the Notifications