For Quick Alerts
ALLOW NOTIFICATIONS  
For Daily Alerts

2019ನೇ ಹಣಕಾಸು ವರ್ಷಕ್ಕೆ ಶೇ. 8.65 ಇಪಿಎಫ್ ಬಡ್ಡಿದರ ನಿಗದಿ

ಕಾರ್ಮಿಕ ಸಚಿವಾಲಯ ಮತ್ತು ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಓ) 2019ನೇ ಹಣಕಾಸು ವರ್ಷಕ್ಕೆ ಶೇ. 8.65 ಬಡ್ಡಿದರವನ್ನು ನಿಗದಿಪಡಿಸಿದೆ.

|

ಕಾರ್ಮಿಕ ಸಚಿವಾಲಯ ಮತ್ತು ಭವಿಷ್ಯನಿಧಿ ಸಂಸ್ಥೆ (ಇಪಿಎಫ್‌ಓ) 2019ನೇ ಹಣಕಾಸು ವರ್ಷಕ್ಕೆ ಶೇ. 8.65 ಬಡ್ಡಿದರವನ್ನು ನಿಗದಿಪಡಿಸಿದೆ.

2019ನೇ ಹಣಕಾಸು ವರ್ಷಕ್ಕೆ ಶೇ. 8.65 ಇಪಿಎಫ್ ಬಡ್ಡಿದರ ನಿಗದಿ

ನಿವೃತ್ತಿ ಭವಿಷ್ಯ ನಿಧಿ ಸಂಸ್ಥೆಯ ಟ್ರಸ್ಟಿಗಳ ಮಂಡಳಿಯು ಈ ದರವನ್ನು ಪ್ರಸ್ತಾಪಿಸಿದೆ. ಈ ಹಣಕಾಸು ವರ್ಷದ ಆರಂಭದಲ್ಲಿ ಇಪಿಎಫ್ಒ ಶೇ. 8.65 ಬಡ್ಡಿದರ ನೀಡಲು ನಿರ್ಧರಿಸಿದೆ.
2017-18ರ ಸಾಲಿನಲ್ಲಿದ್ದ ಶೇ. 8.55 ದರವನ್ನು ಈಗ ಶೇ 0.10ರಷ್ಟು ಹೆಚ್ಚಿಸಲಾಗಿದೆ. 2019ನೇ ಹಣಕಾಸು ವರ್ಷದಲ್ಲಿ ಇಪಿಎಫ್ಒ ಮಂಡಳಿಯಲ್ಲಿರುವ ಒಟ್ಟು ಠೇವಣಿಗೆ ಈ ಬಡ್ಡಿದರ ಅನ್ವಯವಾಗಲಿದೆ.
ಕಳೆದ ವರ್ಷ ಇಪಿಎಫ್ ಬಡ್ಡಿದರ ಹಿಂದಿನ ಐದು ವರ್ಷಗಳಲ್ಲೇ ಕಡಿಮೆಯಿತ್ತು. ಪ್ರಸ್ತುತ ಶೇ. 0.10ರಷ್ಟು ಹೆಚ್ಚಿಸಿರುವುದರಿಂದ 4.5 ಕೋಟಿ ಪಿಎಫ್‌ ಚಂದಾದಾರರಿಗೆ ಪ್ರಯೋಜನವಾಗಲಿದೆ.
ಆದರೆ ಹಣಕಾಸು ಸಚಿವಾಲಯ ಬಡ್ಡಿದರ ಏರಿಕೆ ಪ್ರಸ್ತಾವವನ್ನು ಆಕ್ಷೇಪಿಸಿ, ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಕಾರ್ಮಿಕ ಸಚಿವಾಲಯ ಮತ್ತು ಇಪಿಎಫ್ಒ ಮಂಡಳಿಗೆ ಸೂಚಿಸಿತ್ತು.
ಪಿಪಿಎಫ್, ಸುಕನ್ಯಾ ಸಮೃದ್ದಿ, ಎಪಿಎಸ್ ನಂತಹ ಸಣ್ಣ ಉಳಿತಾಯ ಮತ್ತು ಇಪಿಎಫ್ ಯೋಜನೆಗಳಿಗೆ ಹೆಚ್ಚಿನ ಬಡ್ಡಿ ನೀಡುವುದರಿಂದ ಇತರ ಠೇವಣಿಗಳ ಮೇಲಿನ ಬಡ್ಡಿಯನ್ನು ಇಳಿಸಬೇಕಾಗುತ್ತದೆ ಎಂದು ಬ್ಯಾಂಕುಗಳು ಹೇಳಿದ್ದವು.

Read more about: epfo epf money savings
English summary

EPFO to stick to 8.65% interest rate on provident fund deposits for FY19

The EPFO earlier this year had decided to provide an interest of 8.65% on the provident fund deposit for the current financial year FY19.
Story first published: Saturday, June 29, 2019, 9:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X