For Quick Alerts
ALLOW NOTIFICATIONS  
For Daily Alerts

ಬಜೆಟ್ 2019: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

ಜುಲೈ 5ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ಪ್ರಸ್ತುತ ಇರುವ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ರೂ. 2.5 ಲಕ್ಷದಿಂದ ಹೆಚ್ಚಿಸುವ ಸಾಧ್ಯತೆ ಇದೆಯೆಂದು ಸಮೀಕ್ಷೆ ತಿಳಿಸಿದೆ.

|

ಜುಲೈ 5ರಂದು ಮಂಡನೆಯಾಗಲಿರುವ ಬಜೆಟ್ ನಲ್ಲಿ ಪ್ರಸ್ತುತ ಇರುವ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ರೂ. 2.5 ಲಕ್ಷದಿಂದ ಹೆಚ್ಚಿಸುವ ಸಾಧ್ಯತೆ ಇದೆಯೆಂದು ಸಮೀಕ್ಷೆ ತಿಳಿಸಿದೆ. ವಾರ್ಷಿಕವಾಗಿ ರೂ. 10 ಕೋಟಿ ಆದಾಯ ಗಳಿಸುವ ವ್ಯಕ್ತಿಗಳಿಗೆ ಶೇಕಡಾ 40 ರಷ್ಟು ಹೆಚ್ಚಿನ ತೆರಿಗೆ ವಿಧಿಸಬೇಕು ಎಂದು ಕೆಪಿಎಂಜಿ ಸಮೀಕ್ಷೆ ಹೇಳಿದೆ.

ಬಜೆಟ್ 2019: ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

ಕೆಪಿಎಂಜಿ (ಇಂಡಿಯಾ) ಕೈಗೊಂಡ ಸಮೀಕ್ಷೆಯಲ್ಲಿ ವಿವಿಧ ಉದ್ಯಮಗಳ ೨೨೬ ಜನ ಭಾಗವಹಿಸಿದ್ದರು. ಇವರಲ್ಲಿ ಶೇ. 74ರಷ್ಟು ಜನರು ಆದಾಯ ತೆರಿಗೆ ವಿನಾಯಿತಿ ಮೀತಿ ಏರಿಕೆಯಾಗಬೇಕು ಎಂದಿದ್ದಾರೆ.
ಗೃಹ ಖರೀದಿ ಪ್ರೋತ್ಸಾಹಿಸಲು ಹಾಗು ಸ್ವಂತದ ವಾಸಕ್ಕೆ ಬಳಸುವ ಗೃಹ ಸಾಲದ ಬಡ್ಡಿದೆ ಸಂಬಂಧಿಸಿದಂತೆ ತೆರಿಗೆ ಕಡಿತ ಮಿತಿಯನ್ನು ರೂ. 2 ಲಕ್ಷದಿಂದ ಹೆಚ್ಚಿಸಬೇಕು ಎಂದು ಶೇಕಡಾ ೬೫ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಕೇವಲ ಶೇಕಡಾ 13ರಷ್ಟು ಜನರು ಮಾತ್ರ ಪಿತ್ರಾರ್ಜಿತ ತೆರಿಗೆಯನ್ನು ಮರಳಿ ತರಬೇಕು ಎಂದಿದ್ದರೆ, ಶೇ. 10 ರಷ್ಟು ಜನರು ಸಂಪತ್ತು ತೆರಿಗೆ/ಎಸ್ಟೇಟ್ ಸುಂಕದ ಮರು ಪರಿಚಯಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜುಲೈ 5 ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ಯಾವುದೇ ಪ್ರಮುಖ ನೇರ ತೆರಿಗೆ ತಿದ್ದುಪಡಿಗಳನ್ನು ನಿರೀಕ್ಷಿಸುವುದಿಲ್ಲ ಎಂದು ಶೇ. 53ರಷ್ಟು ಜನರು ಹೇಳಿದ್ದಾರೆ.

English summary

Budget may hike Income Tax exemption threshold: Survey

The upcoming Budget may hike the tax exemption limit for individuals from the current Rs 2.5 lakh.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X