ಭಾರತದಿಂದ ಜಗತ್ತಿನ 63 ದೇಶಗಳಿಗೆ 28 ಬಿಲಿಯನ್ ಡಾಲರ್ ಸಾಲ, ಚೀನಾಕ್ಕೆ ಸವಾಲು!

ಜಗತ್ತಿನ 63 ದೇಶಗಳಿಗೆ 28 ಬಿಲಿಯನ್ (ಶತಕೋಟಿ) ಸಾಲವನ್ನು ಭಾರತ ನೀಡಿದ್ದು, 63 ದೇಶಗಳಲ್ಲಿನ ಅಭಿವೃದ್ಧಿಗೆ ಶಕ್ತಿ ತುಂಬಿದೆ.

ಜಗತ್ತಿನ 63 ದೇಶಗಳಿಗೆ 28 ಬಿಲಿಯನ್ (ಶತಕೋಟಿ) ಸಾಲವನ್ನು ಭಾರತ ನೀಡಿದ್ದು, 63 ದೇಶಗಳಲ್ಲಿನ ಅಭಿವೃದ್ಧಿಗೆ ಶಕ್ತಿ ತುಂಬಿದೆ.

ಭಾರತದಿಂದ ಜಗತ್ತಿನ 63 ದೇಶಗಳಿಗೆ 28 ಬಿಲಿಯನ್ ಡಾಲರ್ ಸಾಲ

ಚೀನಾ ದೇಶವು ಒಂದು ವಲಯ ಮತ್ತು ಒಂದು ರಸ್ತೆ (BRI) ಯೋಜನೆ ಮೂಲಕ 152 ದೇಶಗಳ ಮೂಲ ಸೌಕರ್ಯ ಅಭಿವೃದ್ಧಿಗೆ ನೆರವು ನೀಡಲು ಮುಂದಾಗಿದೆ. ಆದರೆ ಈ ಪ್ರಯತ್ನ ಕುಂಟುತ್ತಾ ಸಾಗಿದ್ದು, ಜಾಗತಿಕ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸುವ ಚೀನಾದ ತಂತ್ರಕ್ಕೆ ಪ್ರತಿತಂತ್ರವಾಗಿ ಭಾರತ ಯೋಜನೆ ರೂಪಿಸಿದೆ.
ಭಾರತವು 63 ದೇಶಗಳ ಆರ್ಥಿಕ ಅಭಿವೃದ್ಧಿಗಾಗಿ ರಿಯಾಯಿತಿ ನೆಲೆಯಲ್ಲಿ ಸಾಲಗಳನ್ನು(ಎಲ್‌ಒಸಿ) ನೀಡಿದೆ. ಪ್ರಸ್ತುತ, 63 ದೇಶಗಳಿಗೆ 28 ಶತಕೋಟಿ ಡಾಲರ್ 279 ಸಾಲಗಳನ್ನು ಭಾರತ ಒದಗಿಸಿದೆ. ಈ ಯೋಜನೆಗಳು ಏಷ್ಯಾ, ಆಫ್ರಿಕಾ, ಲ್ಯಾಟಿನಾ ಅಮೆರಿಕಾ, ಕೆರಿಬಿಯನ್‌ ಮತ್ತು ಓಷನೀಯಾ ದೇಶಗಳಲ್ಲಿ ಕಾರ್ಯ ರೂಪಕ್ಕೆ ಬಂದಿವೆ.
ಚೀನಾದ ಬಿಆರ್‌ಐನ ಕಾರ್ಯತಂತ್ರ ಮತ್ತು ವಿದೇಶಾಂಗ ನೀತಿಯ ವಿರುದ್ಧ ಭಾರತ ಏನು ಕಾರ್ಯತಂತ್ರ ರೂಪಿಸಿದೆ ಎಂದು ಸರಕಾರವನ್ನು ಕೇಳಲಾಗಿತ್ತು. ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸರ್ಕಾರ ಈ ಮಾಹಿತಿಯನ್ನು ನೀಡಿದ್ದು, ನಾನಾ ದೇಶಗಳಲ್ಲಿ 4.70 ಶತಕೋಟಿ ಡಾಲರ್‌ ವೆಚ್ಚದಲ್ಲಿ ಭಾರತ ಜಾರಿಗೊಳಿಸಿದ 254 ಯೋಜನೆಗಳು ಪೂರ್ಣಗೊಂಡಿವೆ ಎಮದು ಹೇಳಿದೆ.
ಚೀನಾವು ಬಂಡವಾಳಶಾಹಿ ನಿತಿ ಮೂಲಕ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಮುಂದಾಗಿದ್ದು, ದಕ್ಷಿಣ ಏಷ್ಯಾ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ಅಭಿವೃದ್ಧಿ ಯೋಜನೆಗಳಿಗಾಗಿ ಭಾರೀ ಸಾಲಗಳನ್ನು ಒದಗಿಸಿ, ನೆರೆಯ ರಾಷ್ಟ್ರಗಳನ್ನು ಸಾಲದ ಸುಳಿಗೆ ಸಿಲುಕಿಸುವ ಮೂಲಕ ಪ್ರಭುತ್ವ ಸಾಧಿಸುವ ಹುನ್ನಾರ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+