ಬಜೆಟ್ ನಿರೀಕ್ಷೆ: ಚೇತರಿಕೆ ಕಂಡ ಷೇರುಪೇಟೆ
ಕೇಂದ್ರ ಬಜೆಟ್ ಮೇಲೆ ಹೂಡಿಕೆದರರ ಗಮನ ಕೇಂದ್ರೀಕೃತವಾಗಿರುವುದರಿಂದ ಷೇರುಪೇಟೆ ಕೊಂಚ ಚೇತರಿಕೆ ಕಂಡಿದೆ.
ಕೇಂದ್ರ ಬಜೆಟ್ ಮೇಲೆ ಹೂಡಿಕೆದರರ ಗಮನ ಕೇಂದ್ರೀಕೃತವಾಗಿರುವುದರಿಂದ ಷೇರುಪೇಟೆ ಕೊಂಚ ಚೇತರಿಕೆ ಕಂಡಿದೆ.

ಬುಧವಾರದ ವಹಿವಾಟಿನಲ್ಲಿ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕವು 22.77 ಪಾಯಿಂಟ್ ಅಲ್ಪ ಏರಿಕೆಯೊಂದಿಗೆ ದಿನದ ವಹಿವಾಟನ್ನು 39,934.99 ಅಂಶಗಳಲ್ಲಿ ಕೊನೆಗೊಳಿಸಿದೆ. ನಿಪ್ಟಿ ಸೂಚ್ಯಂಕವು 6.45 ಅಂಕಗಳ ಏರಿಕೆ ಕಂಡು ದಿನದ ವಹಿವಾಟನ್ನು 11,916.75 ಪಾಯಿಂಟ್ ಗಳಲ್ಲಿ ಕೊನೆಗೊಳಿಸಿದೆ.
ಇಂಡಿಯಾಬುಲ್ಸ್ ಹೌಸಿಂಗ್, ಇಂಡಸ್ ಲ್ಯಾಂಡ್ ಬ್ಯಾಂಕ್, ಐಟಿಸಿ, ಜೀ ಎಂಟರ್‌ಟೈನ್‌ಮೆಂಟ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿವೆ. ಐಷರ್ ಮೋಟಾರ್ಸ್, ಗೇಲ್, ಟೆಕ್ ಮಹೀಂದ್ರಾ, ವೇದಾಂತ ಮತ್ತು ಡಾ. ರೆಡ್ಡಿ ಲ್ಯಾಬ್ಸ್ ನಷ್ಟ ಅನುಭವಿಸಿವೆ.
ನಷ್ಟ ಕಂಡ ಪ್ರಮುಖ ಕಂಪನಿಗಳಾದ ಟೆಕ್ ಮಹೀಂದ್ರಾ, ವೇದಾಂತ, ಇನ್‌ಫೋಸಿಸ್, ಯೆಸ್ ಬ್ಯಾಂಕ್, ಟಾಟಾ ಮೋಟರ್, ಟಿಸಿಎಸ್, ಎಚ್‌ಸಿಎಲ್ ಟೆಕ್, ಮಾರುತಿ ಷೇರುಗಳು ಶೇ.1.44ರ ನಷ್ಟಕ್ಕೆ ಗುರಿಯಾದವು.


Click it and Unblock the Notifications