ಆರ್ಥಿಕ ಸಮೀಕ್ಷೆ 2019: ವರದಿಯಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ..
2019-20 ಹಣಕಾಸು ವರ್ಷದಲ್ಲಿ ದೇಶ ಆರ್ಥಿಕ ಅಭಿವೃದ್ಧಿ (ಜಿಡಿಪಿ) ಶೇ.7 ರಷ್ಟು ಸಾಧಿಸಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಆಡಳಿತಾರೂಢ ಸರ್ಕಾರದ ಗುರಿಯನ್ನು ಪೂರೈಸಲು ಅಗತ್ಯವಾದ ಸುಧಾರಣೆಗಳ ಮಾರ್ಗಸೂಚಿಯನ್ನು ಆರ್ಥಿಕ ಸಮೀಕ್ಷೆ ವಿವರವಾಗಿ ತಿಳಿಸುವ ಸಾಧ್ಯತೆಯಿದೆ.

2019-20 ಹಣಕಾಸು ವರ್ಷದಲ್ಲಿ ದೇಶ ಆರ್ಥಿಕ ಅಭಿವೃದ್ಧಿ (ಜಿಡಿಪಿ) ಶೇ.7 ರಷ್ಟು ಸಾಧಿಸಲಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.
ಮುಖ್ಯ ಆರ್ಥಿಕ ಸಲಹೆಗಾರರಾದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ತಯಾರಿಸಿದ ಆರ್ಥಿಕ ಸಮೀಕ್ಷೆ ವರದಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಿದರು. ಹಣಕಾಸು ನೀತಿ ಸಾಲದ ಬಡ್ಡಿದರಗಳನ್ನು ಕಡಿತಗೊಳಿಸಲು ಸಹಾಯಕವಾಗಲಿದೆ. ಲೋಕಸಭಾ ಚುನಾವಣೆಯಿಂದಾಗಿ ಜನವರಿ-ಮಾರ್ಚ್ ತಿಂಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಕುಸಿತ ಕಂಡಿದೆ. ಆದರೆ ಆರ್ಥಿಕ ಬೆಳವಣಿಗೆ ಕುಸಿತವು ತಾತ್ಕಾಲಿಕವಾಗಿದ್ದು, ಜಿಡಿಪಿ ಮತ್ತೆ ಬೆಳವಣಿಗೆಯಾಗಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.
ಸಾಮಾನ್ಯ ಹಣಕಾಸು ಕೊರತೆಯು ಹಣಕಾಸು ವರ್ಷ 2019ರಲ್ಲಿ ಶೇ. 5.8 ರಷ್ಟಿದ್ದರೆ, ಹಣಕಾಸು ವರ್ಷ 2018 ರಲ್ಲಿ ಶೇ. 6.4 ರಷ್ಟಿತ್ತು.
ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ವಲಯದಲ್ಲಿನ ಒತ್ತಡವೂ ಹಣಕಾಸು ವರ್ಷ 2019 ಬೆಳವಣಿಗೆ ಕುಂಠಿತಕ್ಕೆ ಒಂದು ಕಾರಣವಾಗಿತ್ತು.
ಹನಕಾಸು ವರ್ಷ 2025 ರ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯನ್ನಾಗಿಸಲು ಪ್ರತಿ ವರ್ಷಕ್ಕೆ ಶೇ. 8ರಷ್ಟು ಆರ್ಥಿಕ ಬೆಳವಣಿಗೆಯಾಗಬೇಕಿದೆ.
ಕಡಿಮೆ ಜಾಗತಿಕ ಬೆಳವಣಿಗೆ ಮತ್ತು ವಾಣಿಜ್ಯ ಸಮರದ ಉದ್ವಿಗ್ನತೆಯ ಮೇಲಿನ ಅನಿಶ್ಚಿತತೆ ರಫ್ತಿಗೆ ಕಾರಣವಾಗಬಹುದು. ನಿಧಾನಗತಿಯ ಬೆಳವಣಿಗೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಕೃಷಿ ಯೋಜನೆಗಳು ಮುಖ್ಯವಾಗಿ ಸವಾಲುಗಳನ್ನು ಒಡ್ಡುತ್ತವೆ.
ಆರ್ಥಿಕ ಸಮೀಕ್ಷೆ 2019 ಪ್ರಕಾರ, ಹಣಕಾಸು ವರ್ಷ 2020 ರಲ್ಲಿ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರಗಳಿಗೆ ಶೇ. 2.9 ರಷ್ಟು ಬೆಳವಣಿಗೆಯ ದರವನ್ನು ತಾತ್ಕಾಲಿಕವಾಗಿ ಅಂದಾಜು ಮಾಡಿದೆ.
2018-19ನೇ ಸಾಲಿನಲ್ಲಿ ಆಮದು ಶೇ. 15.4ರಷ್ಟು ಏರಿಕೆಯಾಗಲಿದ್ದು, ರಫ್ತು ಶೇ. 12.5 ಕ್ಕೆ ಏರಿಕೆಯಾಗಲಿದೆ. 2018-19ರ ಹಣಕಾಸು ವರ್ಷದಲ್ಲಿ ವಿದೇಶಿ ವಿನಿಮಯ ಸಂಗ್ರಹವನ್ನು 412.9 ಬಿಲಿಯನ್ ಯುಎಸ್ ಡಾಲರ್ ಗೆ ನಿಗದಿಪಡಿಸಿದೆ.


Click it and Unblock the Notifications