ಶಿಯೋಮಿ ರೆಡ್ ಮಿ 7ಎ ಸ್ಮಾರ್ಟ್ಫೋನ್ ಕಡಿಮೆ ಬೆಲೆಗೆ ಲಭ್ಯ
ಶಿಯೋಮಿ ಕಂಪನಿ ಭಾರತದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದ್ದು, ಇದು ತನ್ನ ಬೇರೆ ಬೇರೆ ಸರಣಿಯ ಮೊಬೈಲ್ ಗಳನ್ನು ಬಿಡುಗಡೆ ಮಾಡಿ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ.
ಶಿಯೋಮಿ ಕಂಪನಿ ಭಾರತದಲ್ಲಿ ಉತ್ತಮ ಮಾರುಕಟ್ಟೆ ಹೊಂದಿದ್ದು, ಇದು ತನ್ನ ಬೇರೆ ಬೇರೆ ಸರಣಿಯ ಮೊಬೈಲ್ ಗಳನ್ನು ಬಿಡುಗಡೆ ಮಾಡಿ ಸಾಕಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ.

ಭಾರತದಲ್ಲಿ ಸರ್ವೆಸಾಮಾನ್ಯವಾಗಿರುವ ರೆಡ್ ಮಿ ಕಳೆದ ಸಾಲಿನಲ್ಲಿ ಬಿಡುಗಡೆಯಾದ ರೆಡ್ ಮಿ6 ಎಯ ಉತ್ತರಾಧಿಕಾರಿಯಾಗಿ ರೆಡ್ ಮಿ 7ಎ ಬಿಡುಗಡೆಯಾಗುತ್ತಿದೆ.
ಶಿಯೋಮಿಯ ರೆಡ್ ಮಿ 7ಎ ಮೊಬೈಲ್ 2ಜಿಬಿ ರ್ಯಾಮ್, 16 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ ರೂ. 5,999ಕ್ಕೆ ಲಭ್ಯವಿದೆ. ಇನ್ನು 2ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಮೊಬೈಲ್ ರೂ. 6,199 ಬೆಲೆಗೆ ಲಭ್ಯವಿದೆ.
ಜುಲೈ 11ರ ನಂತರ ರೆಡ್ ಮಿ 7ಎ ಸ್ಮಾರ್ಟ್ಫೋನನ್ನು ಫ್ಲಿಪ್ಕಾರ್ಟ್, ಮಿ ಡಾಟ್ ಕಾಂ ಹಾಗೂ ಮಿ ಹೋಮ್ ನಲ್ಲಿ ಖರೀದಿಸಬಹುದಾಗಿದೆ.
ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಸಂಸ್ಥೆ ರೆಡ್ ಮಿ 7ಎ ಸ್ಮಾರ್ಟ್ಫೋನ್ ಬಿಡುಗಡೆಗೊಳಿಸಿದೆ. ಜುಲೈನಲ್ಲಿ ರೆಡ್ ಮಿ 7ಎ ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ ರೂ. 200 ರಿಯಾಯಿತಿ ಸಿಗಲಿದೆ. 2ಜಿಬಿ ರ್ಯಾಮ್ ಹಾಗೂ 16 ಜಿಬಿ ಸ್ಟೋರೇಜ್ ಮೊಬೈಲ್ ರೂ. 5799 ಹಾಗೂ 2ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ರೂ. 5,999ಕ್ಕೆ ಖರೀದಿಸಬಹುದು.
ರೆಡ್ ಮಿ 7ಎ ಪೋನ್, 5.45 ಇಂಚಿನ ಪರದೆ, 10 ಡಬ್ಲ್ಯೂ ಚಾರ್ಜಿಂಗ್ ಜೊತೆ 4,000 mAh ಬ್ಯಾಟರಿ ನೀಡಲಾಗಿದೆ. 12 ಮೆಗಾಪಿಕ್ಸಲ್ ಕ್ಯಾಮರಾ ಹಾಗೂ ಸೆಲ್ಫಿಗಾಗಿ 5 ಮೆಗಾ ಪಿಕ್ಸಲ್ ಕ್ಯಾಮರಾ ನೀಡಲಾಗಿದೆ.


Click it and Unblock the Notifications