ಟೆಲಿಕಾಂ ವಲಯದಲ್ಲಿ ಜಿಯೋ ಪ್ರವೇಶಾತಿ ನಂತರ ದರ ಸಮರ ಏರ್ಪಟ್ಟಿದ್ದು, ಪ್ರಮುಖ ಕಂಪನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೊಸ ಹೊಸ ಆಫರ್ ಗಳನ್ನು ಪರಿಚಯಿಸುವುದರ ಮೂಲಕ ಹೆಣಗಾಡುತ್ತಿವೆ.
ಟೆಲಿಕಾಂ ವಲಯದಲ್ಲಿ ಜಿಯೋ ಪ್ರವೇಶಾತಿ ನಂತರ ದರ ಸಮರ ಏರ್ಪಟ್ಟಿದ್ದು, ಪ್ರಮುಖ ಕಂಪನಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೊಸ ಹೊಸ ಆಫರ್ ಗಳನ್ನು ಪರಿಚಯಿಸುವುದರ ಮೂಲಕ ಹೆಣಗಾಡುತ್ತಿವೆ. ಏರ್ಟೆಲ್ ರೂ. 148 ಹೊಸ ರೀಚಾರ್ಜ್ ಪ್ಲಾನ್ ಅನ್ನು ಘೋಷಿಸಿದ್ದು, ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
3ಜಿಬಿ ಡೇಟಾ, ಅನಿಯಮಿತ ಕರೆ
ಏರ್ಟೆಲ್ ಘೋಷಿಸಿರುವ ರೂ. 148 ಪ್ಲಾನ್ ಅಡಿಯಲ್ಲಿ ಗ್ರಾಹಕರು ಅನ್ ಲಿಮಿಟೆಡ್ ಕರೆ ಸೌಲಭ್ಯ, 3GB ಡೇಟಾ ಸಿಗಲಿದೆ. ಈ ಯೋಜನೆ 28 ದಿನಗಳ ವ್ಯಾಲಿಟಿಡಿ ಹೊಂದಿದೆ. ವಿಶೇಷವಾಗಿ ಈ ಪ್ಲ್ಯಾನ್ನಲ್ಲಿ ಉಚಿತ ಏರ್ಟೆಲ್ ಟಿವಿ ಚಂದಾದಾರಿಕೆ ಹಾಗು ವಿಂಕ್ ಮ್ಯೂಸಿಕ್ ಆ್ಯಪ್ ಉಚಿತವಾಗಿ ಬಳಸಿಕೊಳ್ಳಬಹುದಾಗಿದೆ.
ಪ್ಲಾನ್ ಎಲ್ಲಿ ಲಭ್ಯ
ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆ, ರೂ. 148 ಪ್ರಿಪೇಡ್ ರೀಚಾರ್ಜ್ ಯೋಜನೆ ಪ್ರಸ್ತುತ ಆಂಧ್ರಪ್ರದೇಶ ಮತ್ತು ತೆಲಂಗಾಣ ಮತ್ತು ಕರ್ನಾಟಕ ವಲಯಗಳಲ್ಲಿ ಸಿಗಲಿದೆ. ಆದರೂ ಮುಂಬರುವ ದಿನಗಳಲ್ಲಿ ಇದನ್ನು ಇತರ ವಲಯಗಳಿಗೆ ವಿಸ್ತರಿಸುವ ಸಾಧ್ಯತೆಯಿದೆ.
ಉಚಿತ ಹಲೋ ಟ್ಯೂನ್ಸ್
ರೂ. 148 ಪ್ಲ್ಯಾನ್ನಲ್ಲಿ ಉಚಿತ ಹಲೋ ಟ್ಯೂನ್ ಆಯ್ಕೆ ಅವಕಾಶವನ್ನು ಏರ್ಟೆಲ್ ನೀಡಿದೆ. ಈ ಹಿಂದೆ ಹಲೋ ಟ್ಯೂನ್ ಆಯ್ಕೆಗಾಗಿ ರೂ. 36 ಪಾವತಿಸಬೇಕಿತ್ತು. ಆದರೆ ರೂ. 148 ರೀಚಾರ್ಜ್ ನಲ್ಲಿ ವಿಂಕ್ ಮ್ಯೂಸಿಕ್ ಆ್ಯಪ್ ಮೂಲಕ 15 ಭಾಷೆಗಳಲ್ಲಿನ ಗೀತೆಯನ್ನು ಹಲೋ ಟ್ಯೂನ್ ಆಗಿ ಉಚಿತವಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದ್ದು,ಈ ಆಫರ್ 28 ದಿನಗಳಿಗೆ ಮಾತ್ರ ಅನ್ವಯಿಸುತ್ತದೆ. ಆ ಬಳಿಕ ಹಲೋ ಟ್ಯೂನ್ ನವೀಕರಿಸಲು ತಿಂಗಳಿಗೆ ರೂ. 30 ಪಾವತಿಸಬೇಕಾಗುತ್ತದೆ.
ದೀರ್ಘಾವಧಿ-ಅಲ್ಪಾವಧಿ ಪ್ಲಾನ್
ಈಗಾಗಲೇ ಏರ್ಟೆಲ್ ರೂ. 1699 ಒಂದು ವರ್ಷದ ಪ್ಲ್ಯಾನ್ ಅನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು ಪ್ರತಿದಿನ 1.4 ಡೇಟಾ ಸಿಗುತ್ತಿದೆ. ಜೊತೆಗೆ ಪ್ರತಿದಿನ 100 ಎಸ್ಎಂಎಸ್ ಸೌಲಭ್ಯವಿದೆ.
ದೀರ್ಘಾವಧಿಯ ಪ್ಲಾನ್ ಬಯಸದ ಗ್ರಾಹಕರಿಗೆ ಏರ್ಟೆಲ್ ರೂ. 148 ಯೋಜನೆ ಹೇಳಿ ಮಾಡಿಸಿದಂತಿದೆ. ತಿಂಗಳಾವಧಿಯ ಬಳಕೆದಾರರಿಗೆ ಇದು ಅನುಕೂಲವಾಗಲಿದೆ ಎಂದು ಏರಟೆಲ್ ಹೇಳಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications