ವಿಮಾನ ಪ್ರಯಾಣಿಕರಿಗೆ ಗೋ ಏರ್ ಘೋಷಿಸಿದೆ ಬಂಪರ್ ಆಫರ್
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಗೋಏರ್ ಅಂತಾರಾಷ್ಟ್ರೀಯ ಪ್ರಯಾಣ ಮಾಡುವ ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಹೊಸ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಿರುವ ಗೋಏರ್ ಆರಂಭಿಕ ದರ ರೂ. 8,299 ನಿಗದಿ ಪಡಿಸಿದೆ.
ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಗೋಏರ್ ಅಂತಾರಾಷ್ಟ್ರೀಯ ಪ್ರಯಾಣ ಮಾಡುವ ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್ ಘೋಷಿಸಿದೆ. ಹೊಸ ಅಂತಾರಾಷ್ಟ್ರೀಯ ವಿಮಾನಯಾನ ಆರಂಭಿಸಿರುವ ಗೋಏರ್ ಆರಂಭಿಕ ದರ ರೂ. 8,299 ನಿಗದಿ ಪಡಿಸಿದೆ.

ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ವೈಮಾನಿಕ ಸೇವೆ ಒದಗಿಸುತ್ತಿರುವ ಗೋ ಏರ್ ಇದೀಗ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಸೇವೆಗಳನ್ನು ಆರಂಭಿಸುತ್ತಿದೆ.
ಜೂನ್ 19, 2019 ರಿಂದ ಮುಂಬೈ - ಅಬುಧಾಬಿ, ಕಣ್ಣೂರು - ಅಬುಧಾಬಿ ಮಾರ್ಗಗಳ ಮಧ್ಯೆ ಗೋ ಏರ್ ವಿಮಾನಯಾನ ಆರಂಭಿಸಲಿದೆ.
ಗೋಏರ್ ಅಧಿಕೃತ ವೆಬ್ಸೈಟ್ ನಲ್ಲಿ ವಿಮಾನ ಬುಕಿಂಗ್ ಮುಕ್ತವಾಗಿದೆ ಎಂದು ತಿಳಿಸಿದೆ. ಜೆಟ್ ಏರ್ವೇಸ್ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಸಮಯದಲ್ಲಿ ಗೋ ಏರ್ ನಿಂದ ಈ ಪ್ರಕಟಣೆ ಬಂದಿದ್ದು, ಇದು ದೇಶದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ವಿಮಾನಗಳಿಗೆ ಹೆಚ್ಚುವರಿ ಬೇಡಿಕೆಗೆ ಕಾರಣವಾಗಿದೆ.
ಜೊತೆಗೆ, ಸ್ಪೈಸ್ ಜೆಟ್ ಹೊಸದಾಗಿ ದೇಶೀ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಟಿಕೆಟ್ ದರಗಳನ್ನು ಬಿಡುಗಡೆ ಮಾಡಿದ್ದು, ಕ್ರಮವಾಗಿ ರೂ. 888 ಮತ್ತು ರೂ. 3,499 ರಿಂದ ಆರಂಭವಾಗಲಿವೆ. ಸೆಪ್ಟೆಂಬರ್ 25, 2019 ರ ವರೆಗೂ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸ್ಪೈಸ್ ಜೆಟ್ ಮುಂಬೈ ಹಾಗೂ ದೆಹಲಿಗಳಿಂದ ಢಾಕಾ ಹಾಗೂ ಜೆಡ್ಡಾಗಳಿಗೆ ನೇರ ವಿಮಾನ ಸೇವೆ ಘೋಷಿಸಿದೆ.


Click it and Unblock the Notifications