For Quick Alerts
ALLOW NOTIFICATIONS  
For Daily Alerts

ಬಾಡಿಗೆ ಮನೆಯಲ್ಲಿರುವವರಿಗೆ ಗುಡ್ ನ್ಯೂಸ್! ಬರಲಿದೆ ಹೊಸ ಬಾಡಿಗೆ ಕಾನೂನು..

|

ಕೇಂದ್ರ ಸರ್ಕಾರವು ಬಾಡಿಗೆ ನೀತಿಯಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಮಾದರಿ ಬಾಡಿಗೆದಾರ ಅಧಿನಿಯಮ ಅಂತಿಮ ಹಂತದಲ್ಲಿದ್ದು, ಆಗಸ್ಟ್ ತಿಂಗಳಿನಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಲಿದೆ.

ಬಾಡಿಗೆ ಮನೆಯಲ್ಲಿರುವವರಿಗೆ ಗುಡ್ ನ್ಯೂಸ್! ಹೊಸ ಬಾಡಿಗೆ ಕಾನೂನು..

 

ಛಿದ್ರಗೊಂಡ ಬಾಡಿಗೆ ವಸತಿ ಮಾರುಕಟ್ಟೆಯನ್ನು ಸುದಾರಿಸಲು ಮತ್ತು 2022 ರ ವೇಳೆಗೆ ಎಲ್ಲರಿಗೂ ವಸತಿ ಗುರಿಯನ್ನು ಸಾಧಿಸುವ ಪ್ರಯತ್ನಕ್ಕೆ ಅನುಗುಣವಾಗಿ ಹೊಸ ಮಾದರಿ ಬಾಡಿಗೆ ಕಾನೂನು ಹಾಗು ನೂತನ ತೆರಿಗೆ ಬದಲಾವಣೆಗಳನ್ನು ಸರ್ಕಾರ ಪರಿಚಯಿಸಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

ಪ್ರಸ್ತುತ ಇರುವ ಬಾಡಿಗೆ ಕಾನೂನು ಹಳತಾಗಿದ್ದು, ಬಾಡಿಗೆದಾರ ಮತ್ತು ಗುತ್ತಿಗೆದಾರರ ನಡುವಿನ ಸಂಬಂಧವನ್ನು ವಾಸ್ತವಿಕವಾಗಿ ಪರಿಹರಿಸುವುದಿಲ್ಲ ಎಂದು ಸೀತಾರಾಮನ್ ಹೇಳಿದರು. ಹೊಸ ಕಾನೂನು ಮಾದರಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು. ದೇಶದಲ್ಲಿ ಆದಷ್ಟು ಬೇಗ ಮನೆ ಹಾಗೂ ಅಂಗಡಿ ಬಾಡಿಗೆ ಪಡೆಯುವುದು ಸುಲಭವಾಗಲಿದೆ. ಹಿಂದಿನ ಮನೆ ಬಾಡಿಗೆ ಕಾನೂನು ಹಳೆಯದಾಗಿದ್ದು, ಬಾಡಿಗೆದಾರ ಹಾಗೂ ಮಾಲೀಕನಿಗೆ ಕಷ್ಟವಾಗುತ್ತಿದೆ. ಹಾಗಾಗಿ ಬಾಡಿಗೆ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ ಎಂದು ಬಜೆಟ್ ನಲ್ಲಿ ಹೇಳಿದ್ದರು.

ಬಾಡಿಗೆ ಕಾನೂನಿನ ಹೊಸ ನಿಯಮದ ಪ್ರಕಾರ, ಮನೆ ಮಾಲೀಕ ಮೂರು ತಿಂಗಳಿಗಿಂತ ಹೆಚ್ಚು ಭದ್ರತಾ ಠೇವಣಿಯನ್ನು ಇಟ್ಟುಕೊಳ್ಳುವಂತಿಲ್ಲ. ಮನೆ ಖಾಲಿ ಮಾಡುವ ವೇಳೆ ಒಂದು ತಿಂಗಳಲ್ಲಿ ಭದ್ರತೆ ಠೇವಣಿಯನ್ನು ಹಿಂತಿರುಗಿಸಬೇಕು. ಮನೆ ಮಾಲೀಕ ಮನೆ ನವೀಕರಣದ ನಂತರ ಬಾಡಿಗೆಯನ್ನು ಹೆಚ್ಚಿಸಬಹುದು. ಹೀಗೆ ಹೊಸ ಕಾನೂನಿನಲ್ಲಿ ಅನೇಕ ಹೊಸ ನಿಯಮಗಳಿರಲಿವೆ. ಬಾಡಿಗೆದಾರ ಹಾಗೂ ಮಾಲೀಕ ಇಬ್ಬರ ಸಮಸ್ಯೆಗೂ ಹೊಸ ಕಾನೂನಿನಲ್ಲಿ ಪರಿಹಾರ ಸಿಗಲಿದೆ ಎನ್ನಲಾಗಿದೆ.

ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್! 2.94 ಲಕ್ಷ ಹುದ್ದೆಗಳಿಗೆ ನೇಮಕಾತಿ

Read more about: money finance news
English summary

New tenancy law to bring relief to those who live on rent

Finance Minister Nirmala Sitharaman has brought some good news for tenants who live in rented accommodations in her Union Budget 2019 speech.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more