For Quick Alerts
ALLOW NOTIFICATIONS  
For Daily Alerts

ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟವರ ಮಾಹಿತಿ ಲಭ್ಯ

ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಖಾತೆದಾರರ ಮಾಹಿತಿ ವಿನಿಮಯಕ್ಕೆ ಸೆಪ್ಟಂಬರ್ ನಲ್ಲಿ ವೇದಿಕೆ ಸಜ್ಜಾಗಿದ್ದು, ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವೆ ಬ್ಯಾಂಕಿಂಗ್ ಮಾಹಿತಿ ಮೊದಲ ವಿನಿಮಯವಾಗಲಿದೆ.

|

ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಖಾತೆದಾರರ ಮಾಹಿತಿ ವಿನಿಮಯಕ್ಕೆ ಸೆಪ್ಟಂಬರ್ ನಲ್ಲಿ ವೇದಿಕೆ ಸಜ್ಜಾಗಿದ್ದು, ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವೆ ಬ್ಯಾಂಕಿಂಗ್ ಮಾಹಿತಿ ಮೊದಲ ವಿನಿಮಯವಾಗಲಿದೆ.

 

ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಇಟ್ಟವರ ಮಾಹಿತಿ ಲಭ್ಯ

ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಕಪ್ಪುಹಣ ಹೊಂದಿರುವ ಎಲ್ಲ ಹಣಕಾಸಿಕ ಮಾಹಿತಿ ವಿವರಗಳು ಸೆಪ್ಟೆಂಬರ್ ನಿಂದ ಲಭ್ಯವಾಗಲಿದ್ದು, ಕಳೆದ ವರ್ಷ ಮುಚ್ಚಲ್ಪಟ್ಟ ಮಾಹಿತಿಗಳ ವಿವರ ಕೂಡ ಲಭ್ಯವಾಗಲಿದೆ.
ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ದೇಶಗಳ ನಡುವೆ ಸ್ವಯಂ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಈ ಮಾಹಿತಿ ಲಭ್ಯವಾಗಲಿದೆ.
ಸ್ವಿಸ್ ಸರ್ಕಾರ ಆದಾಯ ತೆರಿಗೆ ಪ್ರಾದಿಕಾರಕ್ಕೆ ಬ್ಯಾಂಕ್ ಖಾತೆ ಸಂಖ್ಯೆ, ಕ್ರೆಡಿಟ್ ಬ್ಯಾಲೆನ್ಸ್ ಮತ್ತು ಹಣಕಾಸು ಆದಾಯದ ವಿವರಗಳನ್ನು ಒದಗಿಸಲಿದೆ.
ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದೇಶಗಳ ನಡುವೆ ಒಪ್ಪಂದ ಇದ್ದು, ಈಗಾಗಲೇ ಸ್ವಿಸ್ ಸರ್ಕಾರವು 100 ಭಾರತೀಯ ಉದ್ಯಮಿಗಳ ಬಗೆಗಿನ ಮಾಹಿತಿ ನೀಡಿದೆ.
ಎರಡು ಸ್ವಿಸ್ ಏಜೆನ್ಸಿಗಳ ಪ್ರಕಾರ, ಈ ವರ್ಷ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಹಂಚಿಕೊಳ್ಳುವ 73 ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ಬ್ಯಾಂಕಿಂಗ್ ಮಾಹಿತಿ ವಿನಿಮಯಕ್ಕೆ ಮುಂಚಿತವಾಗಿ ಕೈಗೊಳ್ಳಬೇಕಾದ ಶಾಸಕಾಂಗ ಮತ್ತು ಸಂಸತ್ತಿನ ಕಾರ್ಯವಿಧಾನಗಳು ಮುಕ್ತಾಯಗೊಂಡಿವೆ ಎಂದು ಸ್ವಿಸ್ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ಬ್ಯಾಂಕಿಂಗ್ ವಿವರಗಳ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ. ಸೆಪ್ಟೆಂಬರ್ ತಿಂಗಳಿನಿಂದ ಸ್ವಯಂ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಖಾತೆದಾರರ ಮಾಹಿತಿ ಸಿಗಲಿದೆ.

Read more about: banking money finance news india
English summary

Swiss banks accounts: Indian details to be transferred

The stage is set for the first exchange of banking information between India and Switzerland before the September 30 deadline.
Story first published: Thursday, July 11, 2019, 12:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X