ದೊಡ್ಡ ಮೌಲ್ಯದ ವಹಿವಾಟುಗಳಿಗೆ ಸಂಬಂಧಿಸಿದಂತೆ ತಪ್ಪು ಆಧಾರ್ ಸಂಖ್ಯೆಯನ್ನು ನೀಡಿದರೆ ರೂ. 10,000 ದಂಡವನ್ನು ಕಟ್ಟಬೇಕಾಗುತ್ತದೆ.
ದೊಡ್ಡ ಮೌಲ್ಯದ ವಹಿವಾಟುಗಳಿಗೆ ಸಂಬಂಧಿಸಿದಂತೆ ತಪ್ಪು ಆಧಾರ್ ಸಂಖ್ಯೆಯನ್ನು ನೀಡಿದರೆ ರೂ. 10,000 ದಂಡವನ್ನು ಕಟ್ಟಬೇಕಾಗುತ್ತದೆ.
ಕಾರು, ಮನೆ ಖರೀದಿ, ವಿದೇಶ ಪ್ರವಾಸ, ಹೂಡಿಕೆಗಳು ಸೇರಿದಂತೆ ದೊಡ್ಡ ಮೊತ್ತದ ವ್ಯವಹಾರಗಳನ್ನು ಮಾಡಿದಾಗ ಆಧಾರ್ ನೀಡಬೇಕಾಗುತ್ತದೆ. ಒಂದು ವೇಳೆ ಸುಳ್ಳಿನ ಅಥವಾ ತಪ್ಪು ಆಧಾರ್ ಸಂಖ್ಯೆ ನಮೂದಿಸಿದರೆ ದಂಡ ಭರಿಸಬೇಕಾಗುತ್ತದೆ. ಆಧಾರ್ ತಪ್ಪು ಮಾಹಿತಿ ಪ್ರಕರಣಗಳಲ್ಲಿ ಪ್ರತಿಯೊಂದು ಸಲ ರೂ. 10,000 ದಂಡ ತೆರಬೇಕಾಗುತ್ತದೆ.
ಸೆಪ್ಟೆಂಬರ್ 1ರಿಂದ ಜಾರಿ
2019ರ ಸೆಪ್ಟೆಂಬರ್ 1ರಿಂದ ಈ ನಿಯಮ ಜಾರಿಗೆ ಬರುವ ನಿರೀಕ್ಷೆ ಇದೆ. ಈ ಸಂಬಂಧ ಕಾನೂನು ತಿದ್ದುಪಡಿಗಳು ಆಗಲಿದ್ದು, ಆ ಬಳಿಕ ದಂಡ ನಿಯಮ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಸಂಬಂಧಿತ ಕಾನೂನುಗಳಿಗೆ ತಿದ್ದುಪಡಿ ಮಾಡಿದ ನಂತರ ಮತ್ತು ಅಧಿಸೂಚನೆ ಹೊರಡಿಸಿದ ನಂತರ ಈ ವರ್ಷದ ಸೆಪ್ಟೆಂಬರ್ 1 ರಿಂದ ದಂಡ ವಿಧಿಸುವಿಕೆಯು ಅನ್ವಯವಾಗಲಿದೆ.
ಆಧಾರ್-ಪ್ಯಾನ್ ಪರ್ಯಾಯ ಬಳಕೆ
ಈಗಾಗಲೇ ಸರ್ಕಾರವು ಆಧಾರ್ ಮತ್ತು ಪ್ಯಾನ್ ಕಾರ್ಡ್ಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಬಳಸುವ ಅವಕಾಶವನ್ನು ನೀಡಿದೆ. ಬಜೆಟ್ ಮಂಡನೆಯ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಪ್ರಕಟಿಸಿದ್ದಾರೆ.
ಸೆಕ್ಷನ್ 272 ಬಿ ತಿದ್ದುಪಡಿ
ಸೆಕ್ಷನ್ 139 ಎ ಯ ನಿಬಂಧನೆಗಳನ್ನು ಪಾಲಿಸಲು ವಿಫಲವಾದರೆ ದಂಡವನ್ನು ವಿಧಿಸುವ ಐ-ಟಿ ಕಾಯ್ದೆಯ ಸೆಕ್ಷನ್ 272 ಬಿ ತಿದ್ದುಪಡಿ ಮಾಡಬೇಕೆಂದು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಸ್ತುತ, ದೇಶದಲ್ಲಿ 120 ಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳನ್ನು ನೀಡಲಾಗಿದೆ ಮತ್ತು ಸುಮಾರು 41 ಕೋಟಿ ಪ್ಯಾನ್ ಕಾರ್ಡ್ ಗಳನ್ನು ಒದಗಿಸಲಾಗಿದೆ. ಈ ಪೈಕಿ 22 ಕೋಟಿ ಪ್ಯಾನ್‌ಗಳನ್ನು ಆಧಾರ್‌ನೊಂದಿಗೆ ಜೋಡಿಸಲಾಗಿದೆ. ದೊಡ್ಡ ಪ್ರಮಾಣದ ವಹಿವಾಟುಗಳ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕೇಳಲಾಗುತ್ತದೆ. ಅಂತಹ ಸಂದರ್ಭದಲ್ಲಿ ತಪ್ಪು/ಸುಳ್ಳಿನ ಆಧಾರ್ ನೀಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಂಡ ನಿಯಮ ಜಾರಿಗೊಳಿಸಲು ಸರಕಾರ ಮುಂದಾಗಿದೆ.


Click it and Unblock the Notifications