For Quick Alerts
ALLOW NOTIFICATIONS  
For Daily Alerts

ಉಜ್ವಲಾ ಯೋಜನೆ, 7.34 ಕೋಟಿ ಎಲ್ಪಿಜಿ ಸಂಪರ್ಕ

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (ಪಿಎಂಯುವೈ) ಫಲಾನುಭವಿಗಳಲ್ಲಿ ಎರಡನೇ ಎಲ್ಪಿಜಿ ಸಿಲಿಂಡರ್ ಅನ್ನು ಶೇ. 86 ರಷ್ಟು ಫಲಾನುಭವಿಗಳು ಖರೀದಿಸಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ.

|

ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ (ಪಿಎಂಯುವೈ) ಫಲಾನುಭವಿಗಳಲ್ಲಿ ಎರಡನೇ ಎಲ್ಪಿಜಿ ಸಿಲಿಂಡರ್ ಅನ್ನು ಶೇ. 86 ರಷ್ಟು ಫಲಾನುಭವಿಗಳು ಖರೀದಿಸಿದ್ದಾರೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ತೈಲ ಮಾರುಕಟ್ಟೆ ಕಂಪನಿಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿದ್ದಾರೆ.

 

ಉಜ್ವಲಾ ಯೋಜನೆ, 7.34 ಕೋಟಿ ಎಲ್ಪಿಜಿ ಸಂಪರ್ಕ

ಪಿಎಂಯುವೈ ಅನುಷ್ಠಾನ ಮತ್ತು ಎಲ್‌ಪಿಜಿ ಬಳಕೆ ಉತ್ತೇಜನಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳಿಗೆ ಸಂಬಂಧಿಸಿದಂತೆ ಅವರು ವಿಷಯ ಮಂಡಿಸಿದರು. ಯೋಜನೆಯ ಯಶಸ್ಸಿನ ಬಗ್ಗೆ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದ ಸಚಿವರು, ಪಿಎಂಯುವೈ ಮೂಲಕ ಉಚಿತವಾಗಿ ಎಲ್ಪಿಜಿ ಸಂಪರ್ಕ ಪಡೆದ ಫಲಾನುಭವಿಗಳಲ್ಲಿ ಶೇ. 86 ರಷ್ಟು ಜನರು ಒಂದು ವರ್ಷದಲ್ಲಿ ಎರಡನೇ ಸಿಲಿಂಡರ್‌ ನ್ನು ಸಬ್ಸಿಡಿ ದರದಲ್ಲಿ ಖರೀದಿಸಿದ್ದಾರೆ ಎಂದು ಹೇಳಿದ್ದಾರೆ. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಉಜ್ವಲಾ ಯೋಜನೆ ಫಲ ನೀಡುತ್ತಿದೆ. ಪರಿಸರದ ನೈರ್ಮಲ್ಯ ಕಾಪಾಡಲೂ ಸಹಾಯಕವಾಗಿದೆ ಎಂದಿದ್ದಾರೆ.
ನರೇಂದ್ರ ಮೋದಿ ಸರ್ಕಾರವು 2016ರಲ್ಲಿ ಬಡ ಮಹಿಳೆಯರಿಗೆ ಹೊಗೆ ರಹಿತ ಎಲ್ಪಿಜಿ ವ್ಯವಸ್ಥೆಯನ್ನು ತಲುಪಿಸಲು ಉಜ್ವಲಾ ಯೋಜನೆಗೆ ಚಾಲನೆ ನೀಡಿತ್ತು. ಯೋಜನೆಯಡಿ ಕಳೆದ 3 ವರ್ಷಗಳಲ್ಲಿ 5 ಕೋಟಿ ಬಡ ಮಹಿಳೆಯರ ಮನೆಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಒಟ್ಟು 7.34 ಕೋಟಿ ಎಲ್ಪಿಜಿ ಸಂಪರ್ಕಗಳನ್ನು ನೀಡಲಾಗಿದೆ.
14.2 ಕೆಜಿ ಸಿಲಿಂಡರ್ ಗೆ ಪರ್ಯಾಯವಾಗಿ ಅಗತ್ಯಕ್ಕೆ ಅನುಗುಣವಾಗಿ ಸಣ್ಣ 5 ಕೆಜಿ ಸಿಲಿಂಡರ್ ಪೂರೈಸಲಾಗುತ್ತಿದೆ.

Read more about: money finance news
English summary

86% of Ujjwala beneficiaries have returned for a second refill: Pradhan

Nearly 86 per cent of Pradhan Mantri Ujjwala Yojana (PMUY) beneficiaries, who are at least one year old have returned for the second refill of LPG cylinder.
Story first published: Tuesday, July 16, 2019, 14:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X