For Quick Alerts
ALLOW NOTIFICATIONS  
For Daily Alerts

ಉಚಿತ ವಿದ್ಯುತ್ ಇಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್!

ಭಾರತವು ಹೊಸ ಆಡಳಿತದತ್ತ ಸಾಗುತ್ತಿದ್ದು, ಅಲ್ಲಿ ವಿದ್ಯುತ್ ಗ್ರಾಹಕರು ಮೊದಲು ಪಾವತಿಸುತ್ತಾರೆ ಮತ್ತು ನಂತರ ವಿದ್ಯುತ್ ಸರಬರಾಜು ಪಡೆಯುತ್ತಾರೆ. ಇದು ವಿದ್ಯುತ್ ವಲಯದಲ್ಲಿ ಬಿಲ್ ಪಾವತಿಸದೇ ಇರುವ ಸಮಸ್ಯೆಯನ್ನು ನಿಭಾಯಿಸುತ್ತದೆ.

|

ಭಾರತವು ಹೊಸ ಆಡಳಿತದತ್ತ ಸಾಗುತ್ತಿದ್ದು, ಅಲ್ಲಿ ವಿದ್ಯುತ್ ಗ್ರಾಹಕರು ಮೊದಲು ಪಾವತಿಸುತ್ತಾರೆ ಮತ್ತು ನಂತರ ವಿದ್ಯುತ್ ಸರಬರಾಜು ಪಡೆಯುತ್ತಾರೆ. ಇದು ವಿದ್ಯುತ್ ವಲಯದಲ್ಲಿ ಬಿಲ್ ಪಾವತಿಸದೇ ಇರುವ ಸಮಸ್ಯೆಯನ್ನು ನಿಭಾಯಿಸುತ್ತದೆ ಎಂದು ಕೇಂದ್ರ ಸಚಿವ ಆರ್ ಕೆ ಸಿಂಗ್ ಹೇಳಿದ್ದಾರೆ.

 

ಉಚಿತ ವಿದ್ಯುತ್ ಇಲ್ಲ, ಬಿಲ್ ಪಾವತಿಸದಿದ್ದರೆ ಕರೆಂಟ್ ಕಟ್!

ಗ್ರಾಹಕರು ವಿದ್ಯುತ್ ಬಿಲ್ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು 20 ನೇ ಪಿಟಿಸಿ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಎಚ್ಚರಿಕೆ ರವಾನಿಸಿದ್ದಾರೆ.
ವಿದ್ಯುತ್ ವಲಯದಲ್ಲಿ ಪಾವತಿಯಾಗದ ಬಿಲ್ ಮೊತ್ತ ಏರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ವಿದ್ಯುತ್ ಬಿಲ್ ಮೊತ್ತ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದಿದ್ದಾರೆ.
ಗ್ರಾಹಕರಿಗೆ ವಿದ್ಯುತ್ ಸೌಕರ್ಯ ಒದಗಿಸಲು ಮೊದಲು ಹಣ ಪಾವತಿಸಿ ಬಳಿಕ ಸೇವೆ ಪಡೆಯಬೇಕು.ಸಮಾಜದ ಕೆಲ ಬಡ ವರ್ಗಗಳಿಗೆ ರಾಜ್ಯಗಳು ಉಚಿತ ವಿದ್ಯುತ್ ಪೂರೈಸಬಹುದು. ಆದರೆ ರಾಜ್ಯಗಳು ತಮ್ಮ ಸ್ವಂತ ಬಜೆಟ್ ನಿಂದ ಉಚಿತ ವಿದ್ಯುತ್ ಸೇವೆಗಳನ್ನು ಒದಗಿಸಬಹುದು. ಬಂಡವಾಳ ಹೂಡಿಕೆ ಇಲ್ಲದೆ ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ. ವಿದ್ಯುತ್ ಪೂರೈಕೆ ಖರ್ಚು ಬಯಸುತ್ತದೆ.ವಿದ್ಯುತ್ನ್ನು ಹಣಕೊಟ್ಟು ಪಡೆಯಬೇಕೆ ವಿನಹ ಉಚಿತವಾಗಿ ಪಡೆಯುವುದಲ್ಲ ಎಂದು ಹೇಳಿದ್ದಾರೆ.
ಪಾವತಿಯಾಗದ ಬಿಲ್ ಗಳಿಂದಾಗಿ ವಿದ್ಯುತ್ ಕ್ಷೇತ್ರ ಒತ್ತಡಕ್ಕೆ ಒಳಗಾಗಿದ್ದು, ಹಲವು ರಾಜ್ಯಗಳಲ್ಲಿ ರಾಜಕೀಯ ಲಾಭಕ್ಕಾಗಿ ವಿದ್ಯುತ್ ಶುಲ್ಕವನ್ನು ಸರಿಯಾಗಿ ಸಂಗ್ರಹಿಸುತ್ತಿಲ್ಲ. ಹೀಗಾಗಿ ವಿದ್ಯುತ್ ಸರಬರಾಜು ಮತ್ತು ಬಿಲ್ ಪಾವತಿ ನಡುವೆ ಸಾಕಷ್ಟು ವ್ಯತ್ಯಾಸವಿದೆ.

Read more about: money finance news
English summary

No free power, first pay and then get electricity, says R K Singh

India is moving towards a new regime where a power consumer would pay first and then get power supplies.
Story first published: Wednesday, July 17, 2019, 12:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X