For Quick Alerts
ALLOW NOTIFICATIONS  
For Daily Alerts

ದೀವಾಳಿತನ ಕಾಯಿದೆ (ಐಬಿಸಿ) ತಿದ್ದುಪಡಿಗೆ ಸಂಪುಟ ಅನುಮೋದನೆ

|

ಕೇಂದ್ರ ಸಚಿವ ಸಂಪುಟ ಬುಧವಾರ ನಡೆದ ಸಭೆಯಲ್ಲಿ ಕಂಪನಿಗಳ ದಿವಾಳಿತನ ಸಂಹಿತೆ (ಐಬಿಸಿ) ಕಾಯಿದೆಗೆ ಏಳು ತಿದ್ದುಪಡಿಗಳನ್ನು ಅನುಮೋದಿಸಿದೆ.

ದೀವಾಳಿತನ ಕಾಯಿದೆ (ಐಬಿಸಿ)  ತಿದ್ದುಪಡಿಗೆ ಸಂಪುಟ ಅನುಮೋದನೆ

 

ಸಚಿವ ಸಂಪುಟವು ಒಟ್ಟು 7 ತಿದ್ದುಪಡಿಗಳನ್ನು ಅನುಮೋದಿಸಿದ್ದು, ಇದು ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಐಬಿಸಿ ತಿದ್ದುಪಡಿಯ ಪ್ರಕಾರ, ಮೊಕದ್ದಮೆ ಮತ್ತು ಇತರ ನ್ಯಾಯಾಂಗ ಪ್ರಕ್ರಿಯೆಗಳುಸೇರಿದಂತೆ ಕಂಪನಿಗಳ ದಿವಾಳಿ ಪ್ರಕ್ರಿಯೆಯನ್ನು 330 ದಿನಗಳಲ್ಲಿ ಪೂರ್ಣಗೊಳಿಸಬೇಕಿದೆ. ಪ್ರಸ್ತುತ ತಕರಾರು ಮತ್ತು ಇತರ ನ್ಯಾಯಾಂಗ ಪ್ರಕ್ರಿಯೆಗೆ ಕಾಲಾವಕಾಶ ಹೆಚ್ಚಿಸಲಾಗಿದ್ದು, ಈಗ 270 ದಿನಗಳ ಮಿತಿ ಇದೆ. ಈ ತಿದ್ದುಪಡಿಯಿಂದಾಗಿ ದಿವಾಳಿಯಾಗಿರುವ ಕಂಪನಿಗಳಿಗೆ ಸಕಾಲದಲ್ಲಿ ಕಾಯಕಲ್ಪ ನೀಡಲು ಸಹಾಯಕವಾಗಲಿದೆ.

ಜೊತೆಗೆ ಸಾಲ ಕೊಟ್ಟಿರುವ ಬ್ಯಾಂಕುಗಳಿಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಇದರಿಂದ ಅನುಕೂಲವಾಗಲಿದೆ.

ರೆಸಲ್ಯೂಶನ್ ಅಥವಾ ದಿವಾಳಿಯಿಂದ ಬರುವ ಆದಾಯವನ್ನು ವಿತರಿಸುವಾಗ, ಈ ಪ್ರಕ್ರಿಯೆಗಳ ವೆಚ್ಚವನ್ನು ಪೂರೈಸಲು ಮಧ್ಯಂತರ ಹಣಕಾಸು ಸಾಲಗಾರರಿಗೆ ಐಬಿಸಿ ಕಾಯಿದೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ. ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಕಾರ್ಮಿಕರ ಬಾಕಿ ಮತ್ತು ಸುರಕ್ಷಿತ ಸಾಲಗಾರರಿಗೆ ಬಾಕಿ ಇರುವ ಹಣವನ್ನು ತೆರವುಗೊಳಿಸಲು ಒತ್ತು ನೀಡಲಾಗಿದೆ.

Read more about: money banking finance news
English summary

Cabinet approves amendments to Insolvency and Bankruptcy Code (IBC)

The Union Cabinet cleared seven amendments to the Insolvency and Bankruptcy Code (IBC) during its meeting on Wednesday which will allow the government to stick to strict timelines.
Story first published: Thursday, July 18, 2019, 12:57 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more