ಸ್ಮಾರ್ಟ್ರ್ಟ್ಫೋನ್ ಮತ್ತು ಟೆಲಿಕಾಂ ನಂತರ ದರ ಸಮರ ಡಿಟಿಎಚ್ ಮತ್ತು ಕೇಬಲ್ ಆಪರೇಟರ್ ಗಳ ನಡುವೆ ಆರಂಭವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಡಿಟಿಎಚ್ ಸಂಪರ್ಕ ಪಡೆಯುವುದು ಮೊದಲಿಗಿಂತಲೂ ಕೈಗೆಟುಕುವಂತಾಗಿದೆ.
ಸ್ಮಾರ್ಟ್ ಫೋನ್ ಮತ್ತು ಟೆಲಿಕಾಂ ನಂತರ ದರ ಸಮರ ಡಿಟಿಎಚ್ ಮತ್ತು ಕೇಬಲ್ ಆಪರೇಟರ್ ಗಳ ನಡುವೆ ಆರಂಭವಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಡಿಟಿಎಚ್ ಸಂಪರ್ಕ ಪಡೆಯುವುದು ಮೊದಲಿಗಿಂತಲೂ ಕೈಗೆಟುಕುವಂತಾಗಿದೆ. ಟಾಟಾ ಸ್ಕೈ, ಏರ್‌ಟೆಲ್ ಡಿಜಿಟಲ್ ಟಿವಿ, ಡಿ2ಹೆಚ್ ಡಿಶ್ ಟಿವಿ ಎಲ್ಲಾ ತಮ್ಮ ಸೆಟ್-ಟಾಪ್-ಬಾಕ್ಸ್‌ಗಳ ಬೆಲೆಯನ್ನು ಕಡಿತಗೊಳಿಸಿವೆ. ಏರ್ಟೆಲ್ ಡಿಜಿಟಲ್ ಟಿವಿ ಬೆಲೆಯನ್ನು ಕಡಿಮೆಗೊಳಿಸಿ ತನ್ನ ಚಂದಾದಾರರಿಗೆ ಪ್ರಯೋಜನಗಳನ್ನು ಮತ್ತಷ್ಟು ವಿಸ್ತರಿಸಿದ್ದು, ಅದರ ಮಾಹಿತಿ ಇಲ್ಲಿದೆ ನೊಡಿ.
ಏರ್ಟೆಲ್ ಸೆಟ್ ಟಾಪ್ ಬಾಕ್ಸ್ ಬೆಲೆ
ಸಾಮಾನ್ಯವಾಗಿ ಏರ್ಟೆಲ್ ಡಿಜಿಟಲ್ ಟಿವಿ ಸೆಟ್-ಟಾಪ್-ಬಾಕ್ಸ್ ರೂ. 1,953 ಗಳಿಗೆ ಲಭ್ಯವಿತ್ತು. ಆದರೆ ಇದೀಗ ರೂ. 500 ಬೆಲೆ ಕಡಿತದ ನಂತರ ಅದನ್ನು 1,453 ರೂಗಳಿಗೆ ಪಡೆಯಬಹುದು.
ಅಲ್ಲದೇ ಏರ್ಟೆಲ್ ಸಾವಿರ ರೂಪಾಯಿ ಬೆನಿಫಿಟ್ ನೀಡುತ್ತಿದೆ. ಅಂದರೆ ರೂ. 769ಗಳಿಗೆ ಸೆಟ್ ಟಾಪ್ ಬಾಕ್ಸ್ ಪಡೆಯಬಹುದಾಗಿದೆ. ಇದರಲ್ಲಿ 150 ಚಾನೆಲ್ ಗ್ರಾಹಕರಿಗೆ ಉಚಿತವಾಗಿ ಸಿಗಲಿದೆ.
ತಿಂಗಳ ವೆಚ್ಚ ರೂ. 452
ಈ ಚಾನಲ್ ಪ್ಯಾಕ್‌ನ ಸಾಮಾನ್ಯ ವೆಚ್ಚವು ತಿಂಗಳಿಗೆ ರೂ. 452 ಆಗಿದ್ದು, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಚಾನೆಲ್ ಪ್ಯಾಕ್‌ಗಳನ್ನು ಸಹ ಆಯ್ಕೆ ಮಾಡಬಹುದು. ಗಮನಿಸಬೇಕಾದ ಅಂಶವೆಂದರೆ, ರೂ. 769 ಬೆಲೆಯಲ್ಲಿ ಎನ್‌ಸಿಎಫ್ (ನೆಟ್‌ವರ್ಕ್ ಸಾಮರ್ಥ್ಯ ಶುಲ್ಕ), ಸ್ಥಾಪನೆ ಮತ್ತು ಸಕ್ರಿಯಗೊಳಿಸುವ ಶುಲ್ಕಗಳು ಇರುವುದಿಲ್ಲ. ಇದನ್ನು ನೀವು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.
ಎಚ್ಡಿ ಸೆಟ್-ಟಾಪ್-ಬಾಕ್ಸ್ ವೈಶಿಷ್ಟ್ಯ
ಎಚ್ಡಿ ಸೆಟ್-ಟಾಪ್-ಬಾಕ್ಸ್ ಕೆಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿದೆ. ಮೊದಲನೆಯದಾಗಿ, ನೀವು ಪೂರ್ಣ ಎಚ್ಡಿ ಪಿಕ್ಚರ್ ಗುಣಮಟ್ಟವನ್ನು ಪಡೆಯುತ್ತೀರಿ. ಅದು ಪ್ರಕಾಶಮಾನವಾದ ಕಲರ್ ನೊಂದಿಗೆ ವೀಡಿಯೊಗಳನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಫಾಸ್, ಫಾರ್ವರ್ಡ್ ಮತ್ತು ರಿವೈಂಡ್ ವೈಶಿಷ್ಟ್ಯಗಳ ಜೊತೆಗೆ ನಿಮ್ಮ ನೆಚ್ಚಿನ ಟಿವಿ ಶೋಗಳನ್ನು ರೆಕಾರ್ಡ್ ಮಾಡಲು ಏರ್ಟೆಲ್ ಸೌಲಭ್ಯ ಒದಗಿಸಿದೆ.
ಎಚ್‌ಡಿ ಅಪ್‌ಗ್ರೇಡ್ ಸೇವೆ
ಎಚ್ಡಿ ಸೆಟ್-ಟಾಪ್ ಬಾಕ್ಸ್ ಹೊಂದಿರುವ ಮತ್ತು ಸೆಟ್-ಟಾಪ್ ಬಾಕ್ಸ್ ಎಚ್‌ಡಿಗೆ ಅಪ್‌ಗ್ರೇಡ್ ಮಾಡಲು ಬಯಸುವ ಏರ್‌ಟೆಲ್ ಡಿಜಿಟಲ್ ಟಿವಿ ಚಂದಾದಾರರು ರೂ. 699(ಸೆಟ್-ಟಾಪ್ ಬಾಕ್ಸ್) ಮತ್ತು ರೂ. 150 ರೂ (ಎಂಜಿನಿಯರ್ ವಿಸಿಟ್ ಚಾರ್ಜ್) ಪಾವತಿಸುವ ಪಡೆಯಬಹುದು.


Click it and Unblock the Notifications