ಹೆಚ್‌ಡಿಎಫ್‌ಸಿ ಬಡ್ಡಿದರ ಬದಲಾವಣೆ

ಹೆಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸ್ಥಿರ ಠೇವಣಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಹೊಸ ಬಡ್ಡಿದರ ಜುಲೈ 22 ರಿಂದ ಜಾರಿಗೆ ಬಂದಿದೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸ್ಥಿರ ಠೇವಣಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದ್ದು, ಹೊಸ ಬಡ್ಡಿದರ ಜುಲೈ 22 ರಿಂದ ಜಾರಿಗೆ ಬಂದಿದೆ.

ಹೆಚ್‌ಡಿಎಫ್‌ಸಿ ಬಡ್ಡಿದರ ಬದಲಾವಣೆ

ಭಾರತದ ಅತಿದೊಡ್ಡ ಖಾಸಗಿ ಸಾಲದಾತ ಹೆಚ್‌ಡಿಎಫ್‌ಸಿ ಏಳು ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ವಿವಿಧ ಕಾಲಾವಧಿಯ ಠೇವಣಿಗಳ ಮೇಲೆ ಶೇ. 3.50% ರಿಂದ ಶೇ. 7.30 ವರೆಗೆ ವಾರ್ಷಿಕ ಬಡ್ಡಿದರ ನೀಡುತ್ತದೆ.
ಹೆಚ್ಡಿಎಫ್ಸಿ 30 ದಿನಗಳಿಂದ 6 ತಿಂಗಳವರೆಗೆ ಹಾಗೂ 6 ತಿಂಗಳಿಂದ 1 ವರ್ಷದವರೆಗಿನ ಸ್ಥಿರ ಠೇವಣಿ ಬಡ್ಡಿ ದರದ ಜೊತೆ ದೀರ್ಘ ಕಾಲದ ದರದಲ್ಲಿಯೂ ಬದಲಾವಣೆ ಮಾಡಿದೆ. ಮೊದಲು 30 ರಿಂದ 45 ದಿನಗಳ ಠೇವಣಿಗಳ ಮೇಲೆ ಸಾಮಾನ್ಯ ಜನರಿಗೆ ಶೇ. 5.75 ಮತ್ತು ಹಿರಿಯ ನಾಗರಿಕರಿಗೆ ಶೇ. 6.25 ರಷ್ಟು ಬಡ್ಡಿ ಸಿಗುತ್ತಿತ್ತು. ಆದರೆ ಈಗ ಸಾಮಾನ್ಯ ಜನರಿಗೆ ಶೇ. 5.50 ಹಾಗೂ ಹಿರಿಯ ನಾಗರಿಕರಿಗೆ ಶೇ. 6.00 ರಷ್ಟು ಬಡ್ಡಿದರ ಸಿಗಲಿದೆ.
ಒಂದು ವರ್ಷದ ಅವಧಿಯ ಎಫ್ಡಿ ಬಡ್ಡಿ ದರವನ್ನು ಶೇ. 0.20 ರಷ್ಟು ಇಳಿಕೆ ಮಾಡಿದ್ದು, ಗ್ರಾಹಕರಿಗೆ ಶೇ. 7.10ರಷ್ಟು ಬಡ್ಡಿ ಸಿಗಲಿದೆ. ಎರಡು ವರ್ಷದ ಎಫ್ಡಿ ಮೇಲೆ ಶೇ. 7.30ರ ಬದಲು ಶೇ. 7.20 ರಷ್ಟು ಬಡ್ಡಿ ಸಿಗಲಿದೆ.
ಟರ್ಮ್ ಡಿಪಾಸಿಟ್ 5 ರಿಂದ 10 ವರ್ಷಗಳ ಅವಧಿಯ ಮೆಚುರಿಟಿ ಮೇಲೆ, ಅಸ್ತಿತ್ವದಲ್ಲಿರುವ ದರವನ್ನು 50 ಬೇಸಿಸ್ ಪಾಯಿಂಟ್‌ ಹೆಚ್ಚಿಸಿದೆ. ಈ ದೀರ್ಘಕಾಲೀನ ಠೇವಣಿಗಳ ಮೇಲೆ ಬ್ಯಾಂಕ್ ಶೇ. 7.00 ಬಡ್ಡಿದರವನ್ನು ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+