ಮೋಟಾರು ವಾಹನ ತಿದ್ದುಪಡಿ ಮಸೂದೆ: ಯಾವುದಕ್ಕೆ ಎಷ್ಟು ದಂಡ?

ಮೋಟಾರು ವಾಹನ ತಿದ್ದುಪಡಿ ಮಸೂದೆ, 2019 ಅನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದ್ದು, ಇನ್ನೂ ರಾಜ್ಯಸಭೆಯಲ್ಲಿಯೂ ವಿಧೇಯಕಕ್ಕೆ ಅಂಗೀಕಾರ ಸಿಗುವುದು ಖಚಿತವಾಗಿದೆ.

ಮೋಟಾರು ವಾಹನ ತಿದ್ದುಪಡಿ ಮಸೂದೆ, 2019 ಅನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದ್ದು, ಇನ್ನೂ ರಾಜ್ಯಸಭೆಯಲ್ಲಿಯೂ ವಿಧೇಯಕಕ್ಕೆ ಅಂಗೀಕಾರ ಸಿಗುವುದು ಖಚಿತವಾಗಿದೆ.
ಈ ಮಸೂದೆಯೂ ಸಂಚಾರ ನಿಯಮ ಉಲ್ಲಂಘನೆಗೆ ಹೆಚ್ಚಿನ ದಂಡವನ್ನು ವಿಧಿಸುತ್ತದೆ, ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಿ ರಕ್ಷಿಸುವುದು ಮತ್ತು ವಾಹನ ಖರೀದಿದಾರರಿಗೆ ಸೇವೆಗಳನ್ನು ಒದಗಿಸಲಿದೆ.

ಮೋಟಾರು ವಾಹನ ತಿದ್ದುಪಡಿ ಮಸೂದೆ: ಯಾವುದಕ್ಕೆ ಎಷ್ಟು ದಂಡ?

ಕೇಂದ್ರ ಸರ್ಕಾರವು 2017 ರಲ್ಲಿ ಮೋಟಾರು ವಾಹನ ಮಸೂದೆ ತಿದ್ದುಪಡಿಗೆ ಮುಂದಾಗಿತ್ತು. ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ರೂ. 5000 ದಂಡ, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ ರೂ. 10,000 ದಂಡ ವಿಧಿಸಲಾಗುವುದು. ಅಂಬುಲೆನ್ಸ್ ಗೆ ದಾರಿ ಬಿಡದಿದ್ದರೆ ರೂ. 10,000 ದಂಡ ನಿಗದಿ ಮಾಡಲಾಗಿದೆ.
ಅಪ್ರಾಪ್ತರಿಗೆ ವಾಹನ ಚಾಲನೆ ಮಾಡಲು ಅವಕಾಶ ಮಾಡಿಕೊಟ್ಟರೆ ಬಾಲಪರಾಧ ಕಾನೂನು ಪ್ರಕಾರ ವಿಚಾರಣೆ ನಡೆಸಿ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಿ 3 ವರ್ಷ ಶಿಕ್ಷೆ, ರೂ. 25,000 ದಂಡ ವಿಧಿಸಲಾಗುವುದು.

ವಾಹನ ತಿದ್ದುಪಡಿ ಮಸೂದೆಯ ದಂಡದ ಪ್ರಮಾಣ
ಮೋಟಾರು ವಾಹನ ತಿದ್ದುಪಡಿ ಮಸೂದೆಯ ಹೊಸ ಕಾಯಿದೆಯ ಪ್ರಕಾರ, ಬೇರೆ ಬೇರೆ ಉಲ್ಲಂಘನೆಗಳಿಗೆ ವಿಧಿಸ್ಪಡುವ ನೂತನ ದಂಡದ ಪ್ರಮಾಣ ಇಂತಿದೆ.
ಸಾಮಾನ್ಯ ಉಲ್ಲಂಘನೆ ರೂ. 500
ರಸ್ತೆ ನಿಯಮ ಉಲ್ಲಂಘನೆ ರೂ. 500
ಲೈಸೆನ್ಸ್ ಇಲ್ಲದೆ ವಾಹನ ಬಳಕೆ ರೂ. 5000
ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ರೂ. 5000 ದಂಡ ವಿದಿಸಲಾಗುವುದು.
ನಿಗದಿಗಿಂತ ಹೆಚ್ಚಿನ ಜನರು ವಾಹನದಲ್ಲಿ ಪ್ರಯಾಣಿಸುತ್ತಿದ್ದಲ್ಲಿ ರೂ. 5000
ಅತಿ ವೇಗದ ಚಾಲನೆಗೆ ರೂ. 1000 -2000
ಅಪಾಯಕಾರಿ ಚಾಲನೆಗೆ ರೂ. 5000
ಮದ್ಯ ಸೇವಿಸಿ ವಾಹನ ಚಾಲನೆಗೆ ರೂ. 10,000
ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್ ನಡೆಸಿದರೆ ರೂ. 5000
ಓವರ್ ಲೋಡ್ ವಾಹನಕ್ಕೆ ರೂ. 20,000
ಪ್ರತಿ ಹೆಚ್ಚುವರಿ ಟನ್ ತೂಕಕ್ಕೆ ರೂ. 2000
ಕಾರ್ ಸೀಟಿನ ಬೆಲ್ಟ್ ಹಾಕದಿದ್ದರೆ ರೂ. 1000
ಇನ್ಶೂರೆನ್ಸ್ ಇಲ್ಲದ್ದರೆ ರೂ. 2000 ಹೀಗೆ ದಂಡದ ಪ್ರಮಾಣವನ್ನು ನಿಗದಿ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+