ವೋಡಾಫೋನ್ ನಿಂದ ಹೆಚ್ಚುವರಿ ಡೇಟಾ ಆಫರ್!
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಷ್ಕರಿಸಿ ಹೆಚ್ಚಿನ ಸೌಲಭ್ಯಗಳನ್ನು ಘೋಷಿಸುತ್ತಿವೆ.
ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪರಿಷ್ಕರಿಸಿ ಹೆಚ್ಚಿನ ಸೌಲಭ್ಯಗಳನ್ನು ಘೋಷಿಸುತ್ತಿದ್ದು, ಅವುಗಳಲ್ಲಿ ವೋಡಾಫೊನ್ ಕೂಡ ಒಂದು.

ಪ್ರಸ್ತುತ ವೋಡಾಫೋನ್ ಸಂಸ್ಥೆಯು ರೂ. 1699 ಪ್ರಿಪೇಡ್ ರೀಚಾರ್ಜ್ ಪ್ಲಾನ್ ಅನ್ನು ಬದಲಾವಣೆ ಮಾಡಿದೆ.
ರೂ. 1699 ಪ್ರಿಪೇಡ್ ಪ್ಲಾನ್ ನಲ್ಲಿ ಪ್ರತಿ ದಿನ 1.5GB ಡೇಟಾವನ್ನು 365 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ.
ಇದು ಅನಿಯಮಿತ ಧ್ವನಿ ಕರೆಗಳು, ಪ್ರತಿ ದಿನ 100 ಎಸ್ಎಂಎಸ್ ಸೌಲಭ್ಯ ಒಳಗೊಂಡಿರಲಿದೆ. ಈ ಹಿಂದೆ ರೂ. 1699 ಪ್ಲಾನ್ ನಲ್ಲಿ ದಿನಕ್ಕೆ 1 ಜಿಬಿ ಡೇಟಾ ನೀಡುತ್ತಿತ್ತು.
ವೋಡಾಫೋನ್ ನ ಪರಿಷ್ಕೃತ ರೂ.1699 ಪ್ಲಾನ್ ಮೊದಲಿಗಿಂತ 500MB ಹೆಚ್ಚುವರಿ 3g/4g ಡೇಟಾ ಪ್ರತಿದಿನ ಒದಗಿಸಲಿದೆ.
ಜೊತೆಗೆ, ವೊಡಾಫೋನ್ ತನ್ನ ವೆಬ್ಸೈಟ್‌ನಲ್ಲಿ ತಿಳಿಸಿರುವಂತೆ ರೂ. 365 ಪ್ರಿಪೇಡ್ ಯೋಜನೆಯನ್ನು ಅಪ್ಡೇಟ್ ಮಾಡಿದ್ದು, ಅನಿಯಮಿತ ಸ್ಥಳೀಯ, ಎಸ್‌ಟಿಡಿ ಮತ್ತು ರೋಮಿಂಗ್ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯ ಒಳಗೊಂಡಿದೆ.


Click it and Unblock the Notifications