For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ಗುಡ್ ನ್ಯೂಸ್! ಇನ್ನುಮುಂದೆ 'ಜಿಯೋ ಸಾರಥಿ' ವಿಶೇಷ ಸೌಲಭ್ಯ

ಇದೀಗ ಜಿಯೋ ಸಾರಥಿ ಯೋಜನೆಯನ್ನು ಪರಿಚಯಿಸಿದೆ. ಇದು ಅಪ್ಲಿಕೇಶನ್‌ನಲ್ಲಿನ ಡಿಜಿಟಲ್ ಸಹಾಯಕವಾಗಿದ್ದು, ಡಿಜಿಟಲ್ ರೀಚಾರ್ಜ್‌ಗಳನ್ನು ಸುಲಭಗೊಳಿಸಲು ಅಭಿವೃದ್ಧಿಗೊಳಿಸಲಾಗಿದೆ.

|

ರಿಲಯನ್ಸ್ ಜಿಯೋ ದೂರಸಂಪರ್ಕ ಕ್ಷೇತ್ರದಲ್ಲಿ ತನ್ನ ವ್ಯಾಪಕ ಜಾಲವನ್ನು ವಿಸ್ತರಿಸುತ್ತಾ ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಪರಿಚಯಿಸುವುದರಲ್ಲಿ ಮೊದಲ ಸ್ಥಾನದಲ್ಲಿದೆ! ಇದೀಗ ಜಿಯೋ ಸಾರಥಿ ಯೋಜನೆಯನ್ನು ಪರಿಚಯಿಸಿದೆ. ಇದು ಅಪ್ಲಿಕೇಶನ್‌ನಲ್ಲಿನ ಡಿಜಿಟಲ್ ಸಹಾಯಕವಾಗಿದ್ದು, ಡಿಜಿಟಲ್ ರೀಚಾರ್ಜ್‌ಗಳನ್ನು ಸುಲಭಗೊಳಿಸಲು ಅಭಿವೃದ್ಧಿಗೊಳಿಸಲಾಗಿದೆ. ಜಿಯೋ ಚಂದಾದಾರರಿಗೆ ಡಿಜಿಟಲ್ ರೀಚಾರ್ಜ್ ಮಾಡಲು ಅನುಕೂಲವಾಗುವಂತೆ ಮೈಜಿಯೊ ಅಪ್ಲಿಕೇಶನ್‌ನಲ್ಲಿ ಸಂಯೋಜಿಸಿದೆ.

ಡಿಜಿಟಲ್ ರೀಚಾರ್ಜ್

ಡಿಜಿಟಲ್ ರೀಚಾರ್ಜ್

ಆನ್ಲೈನ್ ರೀಚಾರ್ಜ್‌ಗಳನ್ನು ಹೆಚ್ಚಿಸಲು ಮತ್ತು ಇಲ್ಲಿಯವರೆಗೆ ಆನ್ಲೈನ್ ರೀಚಾರ್ಜ್ ಮಾಡದ ಬಳಕೆದಾರರಿಗೆ ಡಿಜಿಟಲ್ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶವನ್ನು ಈ ಸಾರಥಿ ಹೊಂದಿದೆ. ವಿಶೇಷವೆಂದರೆ, ಈ ಮೊದಲು ಡಿಜಿಟಲ್ ರೀಚಾರ್ಜ್ ಮಾಡದವರಿಗೆ ಮಾತ್ರ ಈ ವೈಶಿಷ್ಟ್ಯವು ಲಭ್ಯವಿದೆ. ಆದ್ದರಿಂದ, ಡಿಜಿಟಲ್ ರೀಚಾರ್ಜ್ ಮಾಡಿದವರು ತಮ್ಮ ಸ್ಮಾರ್ಟ್‌ಫೋನ್‌ ಮೈಜಿಯೊದಲ್ಲಿ ಸಾರಥಿ ಸೇವೆ ಲಭ್ಯವರುವುದಿಲ್ಲ.

ಏನಿದು ಜಿಯೋ ಸಾರಥಿ?

ಏನಿದು ಜಿಯೋ ಸಾರಥಿ?

ಮೈಜಿಯೊ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಆಯ್ಕೆಗಳನ್ನು ಹಂತ-ಹಂತವಾಗಿ ಧ್ವನಿ ನಿರ್ದೇಶನಗಳನ್ನು ಒದಗಿಸಲು ಸಹಾಯಕವಾಗುತ್ತದೆ. ಜೊತೆಗೆ, ಪಾವತಿ ವಿವರಗಳನ್ನು ತಿಳಿಯಲು ಮತ್ತು ಡಿಜಿಟಲ್ ರೀಚಾರ್ಜ್‌ಗಳಿಗಾಗಿ ಅವರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಲು ಸಹಾಯ ಮಾಡಲು ಜಿಯೋ ಸಾರಥಿ ವಿನ್ಯಾಸಗೊಳಿಸಲಾಗಿದೆ. ಆರಂಭದಲ್ಲಿ ಜಿಯೋ ಸಾರಥಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಾಗಲಿದೆ. ಆದರೆ ಕ್ರಮೇಣವಾಗಿ ಇದನ್ನು ಭಾರತದಲ್ಲಿನ ಎಲ್ಲಾ ಚಂದಾದಾರರಿಗೆ ರೀಚಾರ್ಜ್ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕ್ರಮೇಣ 12 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಯೋಜಿಸುತ್ತಿದೆ.

ಜಿಯೋ ಸಾರಥಿ ಬಳಕೆ ಹೇಗೆ?
 

ಜಿಯೋ ಸಾರಥಿ ಬಳಕೆ ಹೇಗೆ?

ಜಿಯೋ ಸಾರತಿ ಜುಲೈ 27 ರಿಂದ ಮೈಜಿಯೊ ಆಪ್ ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಡಿಜಿಟಲ್ ಜಿಯೋ ರೀಚಾರ್ಜ್ ಮಾಡದ ಬಳಕೆದಾರರಿಗೆ ಮಾತ್ರ ಹೊಸ ವೈಶಿಷ್ಟ್ಯವು ಲಭ್ಯವಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇತ್ತೀಚಿನ ಮೈಜಿಯೊ ಅಪ್ಲಿಕೇಶನ್ ಹೊಂದಿರಬೇಕು. ಬಳಕೆದಾರರು ರೀಚಾರ್ಜ್ ಬಟನ್ ಒತ್ತಿದ ನಂತರ ಅಪ್ಲಿಕೇಶನ್ ಫ್ಲೋಟಿಂಗ್ ಐಕಾನ್ ರೂಪದಲ್ಲಿ ಕಾಣುತ್ತದೆ. ಬಳಕೆದಾರರು ಡಿಜಿಟಲ್ ರೀಚಾರ್ಜ್ ಗಾಗಿ ಧ್ವನಿ ಆಧಾರಿತ ನಿರ್ದೇಶನಗಳನ್ನು ಸ್ವೀಕರಿಸಲು ಈ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

Read more about: jio reliance jio telecom
English summary

Jio Saarthi digital recharge service: Here is how it works

Reliance Jio has introduced Jio Saarthi, an in-app digital assistant that is designed to make digital recharges easier.
Story first published: Monday, July 29, 2019, 12:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X