ಕಹಿಸುದ್ದಿ! ಎಸ್ಬಿಐ ಬಡ್ಡಿದರ ಕಡಿತ, ಪ್ರಸ್ತುತ ದರ ಇಲ್ಲಿ ಚೆಕ್ ಮಾಡಿ

ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸಾಲಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಲ್ಲಾ ಅವಧಿಗಳ ತನ್ನ ಸ್ಥಿರ ಠೇವಣಿ (ಎಫ್‌ಡಿ) ದರಗಳನ್ನು ಪರಿಷ್ಕರಿಸಿದೆ.

ದೇಶದ ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಸಾಲಗಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಲ್ಲಾ ಅವಧಿಗಳ ತನ್ನ ಸ್ಥಿರ ಠೇವಣಿ (ಎಫ್‌ಡಿ) ದರಗಳನ್ನು ಪರಿಷ್ಕರಿಸಿದೆ. ಎಲ್ಲಾ ಅವಧಿಗಳ ಮೇಲಿನ ಹೊಸ ಪರಿಷ್ಕೃತ ದರಗಳು ಆಗಸ್ಟ್ 1 ರಿಂದ ಠೇವಣಿಗಳ ಮೇಲೆ ಅನ್ವಯವಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ.

ಕಹಿಸುದ್ದಿ! ಎಸ್ಬಿಐ ಬಡ್ಡಿದರ ಕಡಿತ, ಪ್ರಸ್ತುತ ದರ ಇಲ್ಲಿ ಚೆಕ್ ಮಾಡಿ

45 ದಿನಗಳಿಂದ ಹತ್ತು ವರ್ಷಗಳವರೆಗಿನ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಬ್ಯಾಂಕ್ ಕಡಿತಗೊಳಿಸಿದೆ. ಎಸ್‌ಬಿಐ, ಏಳು ದಿನಗಳಿಂದ 45 ದಿನಗಳಿಗೆ ಪಕ್ವವಾಗುವಾಗ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಶೇ. 5.75 ರಿಂದ 5.00ಕ್ಕೆ ಇಳಿಸಿದೆ. 46 ದಿನಗಳಿಂದ 179 ದಿನಗಳವರೆಗಿನ ಅವಧಿಯ ಠೇವಣಿಗಳ ಮೇಲೆ ಬ್ಯಾಂಕ್ ಬಡ್ಡಿದರವನ್ನು ಶೇ. 5.75ಕ್ಕೆ ಇಳಿಸಿದ್ದು, ಈ ಮೊದಲು ಶೇ. 6.25ರಷ್ಟು ಬಡ್ಡಿದರ ನೀಡುತ್ತಿತ್ತು. 180 ರಿಂದ 210 ದಿನಗಳವರೆಗೆ ಮುಕ್ತಾಯಗೊಳ್ಳುವ ಠೇವಣಿಗಳ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ. ಈಗ ಬ್ಯಾಂಕ್ ಶೇ. 6.25 ಬಡ್ಡಿದರವನ್ನು ನೀಡುತ್ತದೆ.
211 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಅಲ್ಪಾವಧಿಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ. 6.40 ರಿಂದ 6.25 ಕ್ಕೆ ಇಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಒಂದು ವರ್ಷದ ಅವಧಿಯಿಂದ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಬಡ್ಡಿದರ ಬಡ್ಡಿದರಗಳನ್ನು 20 ಬೇಸಿಸ್ ಪಾಯಿಂಟ್‌ ಕಡಿಮೆ ಮಾಡಿದ್ದು, ಶೇ. 6.80ರಷ್ಟು ಬಡ್ಡಿದರವನ್ನು ನಿಗದಿಪಡಿಸಿದೆ.
ಜೊತೆಗೆ ಎಸ್‌ಬಿಐ ತನ್ನ ದೀರ್ಘಕಾಲೀನ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಎರಡು ವರ್ಷದಿಂದ ಮೂರು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಬ್ಯಾಂಕ್ ಬಡ್ಡಿದರವನ್ನು 5 ಬೇಸಿಸ್ ಪಾಯಿಂಟ್‌ಗಳಿಂದ ಕಡಿತಗೊಳಿಸಿ, ಶೇ. 6.70ರಷ್ಟು ಬಡ್ಡಿದರವನ್ನು ನೀಡುತ್ತದೆ.
ಮೂರು ವರ್ಷಗಳಿಂದ ಐದು ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿಗಳಿಗೆ ಶೇ. 6.60 ಬಡ್ಡಿದರವನ್ನು ನೀಡುತ್ತದೆ. ಈ ಮೊದಲು ಬಡ್ಡಿದರ ಶೇ. 6.70 ರಷ್ಟಿತ್ತು. ಐದರಿಂದ ಹತ್ತು ವರ್ಷಕ್ಕೆ ಪಕ್ವವಾಗುವ ಠೇವಣಿಗಳಿಗೆ ಬಡ್ಡಿದರವನ್ನು ಶೇ. 6.60 ರಿಂದ ಶೇ. 6.50 ಕ್ಕೆ ಇಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+