ವಿ.ಜಿ. ಸಿದ್ದಾರ್ಥ ನಾಪತ್ತೆ ಬೆನ್ನಲ್ಲೇ ಕೆಫೆ ಕಾಫಿ ಡೇ ಷೇರು ಮೌಲ್ಯ ಶೇ. 20ರಷ್ಟು ಕುಸಿತ
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕರಾಗಿರುವ ವಿ. ಜಿ ಸಿದ್ದಾರ್ಥ ಸೋಮವಾರ ಸಂಜೆಯಿಂದ ನಾಪತ್ತೆಯಾಗಿರುವ ಪರಿಣಾಮ ಮಂಗಳವಾರ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಷೇರುಗಳ ಮೌಲ್ಯ ಶೇ. 20 ಕುಸಿತ ಕಂಡಿವೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ ಕೆಫೆ ಕಾಫಿ ಡೇ ಸಂಸ್ಥಾಪಕರಾಗಿರುವ ವಿ. ಜಿ ಸಿದ್ದಾರ್ಥ ಸೋಮವಾರ ಸಂಜೆಯಿಂದ ನಾಪತ್ತೆಯಾಗಿರುವ ಪರಿಣಾಮ ಮಂಗಳವಾರ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಷೇರುಗಳ ಮೌಲ್ಯ ಶೇ. 20 ಕುಸಿತ ಕಂಡಿವೆ. ವಿ. ಜಿ ಸಿದ್ದಾರ್ಥ ಅವರನ್ನು ಪತ್ತೆ ಮಾಡಲು ದಕ್ಷಿಣ ಕನ್ನಡ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ವರದಿಗಳ ಪ್ರಕಾರ, ಬೆಂಗಳೂರಿನಿಂದ ಸುಮಾರು 375 ಕಿ.ಮೀ ದೂರದಲ್ಲಿರುವ ಮಂಗಳೂರು ಬಳಿಯ ನೇತ್ರಾವತಿ ನದಿಯ ಸೇತುವೆಯೊಂದರ ಬಳಿ ತನ್ನ ಕಾರಿನಿಂದ ಇಳಿದ ಒಂದು ಗಂಟೆಯ ನಂತರವೂ ಹಿಂತಿರುಗಲಿಲ್ಲ. ಇದರಿಂದ ಭಯಭೀತರಾದ ಚಾಲಕನು ಅವರನ್ನು ಹುಡುಕಾಡಿದರು. ಆದರೆ ಎಲ್ಲಿಯೂ ಕಾಣದಿದ್ದಾಗ ಅವರ ಕುಟುಂಬ ಸದಸ್ಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಇಂದು ಬೆಳಿಗ್ಗೆ 9.19ಕ್ಕೆ ಕಾಫಿ ಡೇ ಷೇರುಗಳು ಶೇರುಗಳು ಶೇ. 20ರಷ್ಟು ಕುಸಿತ ಕಂಡು 153.40ಕ್ಕೆ ಸರ್ಕೂಟ್ ಆಗಿದ್ದವು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯನೂ ಆಗಿರುವ ಸಿಸಿಡಿ ಸಂಸ್ಥಾಪಕ ಮತ್ತು ಏಷ್ಯಾದ ಏಕೈಕ ಅತಿದೊಡ್ಡ ಕಾಫಿ ಎಸ್ಟೇಟ್ ಮಾಲೀಕ ಸಿದ್ಧಾರ್ಥ ಅವರು ಇತ್ತೀಚೆಗೆ ಮೈಂಡ್‌ಟ್ರೀನಲ್ಲಿದ್ದ ತನ್ನ ಶೇ. 20.41ರಷ್ಟು ಪಾಲನ್ನು ಎಲ್ & ಟಿ ಸಂಸ್ಥೆಗೆ ಮಾರಿದಾಗ ಸುದ್ದಿಯಲ್ಲಿದ್ದರು. ಈ ವಹಿವಾಟಿನಿಂದ ಅವರು ಸುಮಾರು 2,858 ಕೋಟಿ ರೂ. ಲಾಭ ಗಳಿಸಿದ್ದರು.
ಚಿಕ್ಕಮಗಳೂರಿನಲ್ಲಿ ಜನಿಸಿದ ಸಿದ್ಧಾರ್ಥ, ಮುಂಬೈನ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಜೆಎಂ ಫೈನಾನ್ಷಿಯಲ್‌ನಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು 1984 ರಲ್ಲಿ ಶಿವನ್ ಸೆಕ್ಯುರಿಟೀಸ್ ಅನ್ನು ಖರೀದಿಸಿದರು ಮತ್ತು ಅದನ್ನು ಅತ್ಯಂತ ಯಶಸ್ವಿ ಹೂಡಿಕೆ ಬ್ಯಾಂಕಿಂಗ್ ಮತ್ತು ಸ್ಟಾಕ್ ಬ್ರೋಕಿಂಗ್ ಕಂಪನಿಯಾಗಿ ಪರಿವರ್ತಿಸಿದರು. 2000 ರಲ್ಲಿ ವೇ 2 ವೆಲ್ತ್ ಸೆಕ್ಯುರಿಟೀಸ್ ಎಂದು ಮರುನಾಮಕರಣ ಮಾಡಲಾಯಿತು.


Click it and Unblock the Notifications