ಜಿಯೋ ಗಿಗಾಫೈಬರ್ ಧಮಾಕಾ! ಒಂದೇ ಪ್ಲಾನ್ ನಲ್ಲಿ ಬ್ರಾಡ್‌ಬ್ಯಾಂಡ್, ಲ್ಯಾಂಡ್‌ಲೈನ್, 600 ಟಿವಿ ಚಾನೆಲ್ ಉಚಿತ

ರಿಲಾಯನ್ಸ್ ಜಿಯೋ ಗಿಗಾಫೈಬರ್ ಮೂಲಕ 1ಜಿಬಿಪಿಎಸ್ ವೇಗ, 600 ಟಿವಿ ಚಾನೆಲ್ ಗಳು ಮತ್ತು ಒಂದು ಲ್ಯಾಂಡ್ ಲೈನ್ ಸೇವೆಯನ್ನು ಸದ್ಯದಲ್ಲೇ ಆರಂಭಿಸಲಿದೆ. ಜಿಯೋಗಿಗಾ ಫೈಬರ್‌ನ ಯೋಜನೆಗಳು ಪ್ರೀ ಪೇಡ್ಮತ್ತು ಪೋಸ್ಟ್ ಪೇಡ್ ಪ್ಲಾನ್ ಗಳಲ್ಲಿ ಲಭ್ಯ.

ರಿಲಯನ್ಸ್ ಸಂಸ್ಥೆ ತನ್ನ ಕೊನೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಗಿಗಾ ಫೈಬರ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಕಂಪನಿಯು ಶೀಘ್ರದಲ್ಲೇ ಸೇವೆಯನ್ನು ಪ್ರಾರಂಭಿಸುವ ಸಾಧ್ಯತೆಯಿದ್ದು, ಜಿಯೋ ಗಿಗಾಫೈಬರ್ ಸೇವೆಯು ಬ್ರಾಡ್‌ಬ್ಯಾಂಡ್, ಲ್ಯಾಂಡ್‌ಲೈನ್ ಮತ್ತು ಟಿವಿ ಸಂಪರ್ಕಗಳ ಜೊತೆಗೆ ಬರಲಿದೆ. ಇದು ಪ್ರಿಪೇಡ್ ಮತ್ತು ಪೋಸ್ಟ್‌ಪೇಡ್ ಎರಡು ಯೋಜನೆಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಜಿಯೋ ಗಿಗಾಫೈಬರ್

ಜಿಯೋ ಗಿಗಾಫೈಬರ್

ಜಿಯೋಗಿಗಾ ಫೈಬರ್‌ನ ಯೋಜನೆಗಳು ಸ್ಪರ್ಧಾತ್ಮಕವಾಗಿ ಬೆಲೆಯಲ್ಲಿ ಸಿಗಲಿದ್ದು, ಮತ್ತೆ ದರ ಸಮರ ಎದುರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ರಿಲಾಯನ್ಸ್ ಜಿಯೋ ಗಿಗಾಫೈಬರ್ ಮೂಲಕ 1ಜಿಬಿಪಿಎಸ್ ವೇಗ, 600 ಟಿವಿ ಚಾನೆಲ್ ಗಳು ಮತ್ತು ಒಂದು ಲ್ಯಾಂಡ್ ಲೈನ್ ಸೇವೆಯನ್ನು ಸದ್ಯದಲ್ಲೇ ಆರಂಭಿಸಲಿದೆ. ಜಿಯೋಗಿಗಾ ಫೈಬರ್‌ನ ಯೋಜನೆಗಳು ಪ್ರೀ ಪೇಡ್ಮತ್ತು ಪೋಸ್ಟ್ ಪೇಡ್ ಪ್ಲಾನ್ ಗಳಲ್ಲಿ ಲಭ್ಯವಾಗುವುದು ವಿಶೇಷ.

ಸಂಚಲನ ಸಾಧ್ಯತೆ

ಸಂಚಲನ ಸಾಧ್ಯತೆ

ಜಿಯೋ ಯೋಜನೆಗಳ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ದರಸಮರ ಏರ್ಪಡಿಸಿದ್ದ ರಿಲಯನ್ಸ್ ಜಿಯೋ ಇದೀಗ ಜಿಯೋ ಗಿಗಾಫೈಬರ್ ಮುಖಾಂತರ ಸ್ಪರ್ಧಾತ್ಮಕ ಬೆಲೆಯಲ್ಲಿ ಪೈಪೋಟಿ ನೀಡಲಿದೆ. ಇದು ಮಲ್ಟಿಮೀಡಿಯಾ ಮತ್ತು ಸಂವಹನ ರಂಗದಲ್ಲಿ ಹೆಚ್ಚು ಬಳಕೆಯಾಗುವ ಮೂರು ಸೇವೆಗಳನ್ನು ಒಂದೇ ಪ್ಲಾನ್ ಅಡಿಯಲ್ಲಿ ಒದಗಿಸುವ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲಿದೆ ಎನ್ನಲಾಗಿದೆ.

ಆಗಸ್ಟ್ 12 ರಂದು ಆರಂಭ

ಆಗಸ್ಟ್ 12 ರಂದು ಆರಂಭ

ದೇಶದಾದ್ಯಂತ ಜಿಯೋ ಗಿಗಾಫೈಬರ್ ಸೇವೆಯು ಇದೇ ಆಗಸ್ಟ್ 12 ರಂದು ಆರಂಭವಾಗಲಿದೆ. ಆದರೆ ಎಷ್ಟು ದರ ನಿಗದಿ ಪಡಿಸಲಿದೆ ಎಂಬುದನ್ನುರಿಲಯನ್ಸ್ ಬಹಿರಂಗಪಡಿಸಿಲ್ಲ. ಒಂದು ಸೆಕೆಂಡಿಗೆ 1 ಜಿಬಿ ಡೌನ್ಲೋಡ್ ವೇಗದೊಂದಿಗೆ ಇಂಟರ್ನೆಟ್ ಸೇವೆಯನ್ನು ಹಾಗು ೬೦೦ ಚಾನೆಲ್ ಸೇವೆಗಳನ್ನು ಈ ಪ್ಲಾನ್ ನಲ್ಲಿ ನೀಡಲಾಗುತ್ತದೆ.
ಜಿಯೋ ಇತ್ತೀಚೆಗೆ ಭಾರತದಾದ್ಯಂತ 1,600 ನಗರಗಳಲ್ಲಿ ಎಫ್‌ಟಿಟಿಎಚ್ (ಫೈಬರ್-ಟು-ದಿ-ಹೋಮ್) ಗ್ರೌಂಡ್‌ವರ್ಕ್ ಹಾಕುವ ಯೋಜನೆಯನ್ನು ಪ್ರಕಟಿಸಿದೆ. ರಿಲಯನ್ಸ್ ಈ ಸೇವೆಗಾಗಿ ಯಾವುದೇ ಅಂತಿಮ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+