ಗುರುವಾರ ದಿನಪೂರ್ತಿ ಮಾರಾಟದ ಒತ್ತಡಕ್ಕೆ ಸಿಲುಕಿದ ಷೇರುಪೇಟೆಯು ದಿನದ ವಹಿವಾಟಿನ ಅಂತ್ಯಕ್ಕೆ ನಿಫ್ಟಿ ಸೂಚ್ಯಂಕ ಹಾಗು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಭಾರೀ ನಷ್ಟ ಕಂಡವು.

ಸೆನ್ಸೆಕ್ಸ್ ಸೂಚ್ಯಂಕವು 462.80 ಪಾಯಿಂಟ್‌ಗಳ ಕುಸಿತದೊಂದಿಗೆ 37,018.32 ಮಟ್ಟದಲ್ಲೂ ಹಾಗು ನಿಫ್ಟಿ ಸೂಚ್ಯಂಕ 138 ಪಾಯಿಂಟ್‌ಗಳ ಕುಸಿತದೊಂದಿಗೆ 10,980 ಮಟ್ಟಕ್ಕೆ ದಿನದ ವಹಿವಾಟನ್ನು ಅಂತ್ಯಗೊಳಿಸಿದವು.
ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ದರ ಕಡಿತದ ಬಗ್ಗೆ ನೀಡಿದ ಕಾಮೆಂಟ್‌ಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಮನೋಭಾವವನ್ನು ಕುಂಠಿತಗೊಳಿಸಿದವು. ಇದರಿಂದ ಭಾರತೀಯ ಷೇರುಗಳು ಗುರುವಾರ ಇಸ್ಪೀಟ್ ಎಲೆಗಳಂತೆ ಮುಳುಗುತ್ತ ಐದು ತಿಂಗಳ ಕನಿಷ್ಠ ಮಟ್ಟದಲ್ಲಿ ಕೊನೆಗೊಂಡಿವೆ.
ಇಂದಿನ ವಿವಾಟಿನಲ್ಲಿ ವೇದಾಂತ, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಎಸ್‌ಬಿಐ ಮತ್ತು ಟಾಟಾ ಮೋಟಾರ್ಸ್ ನಿಫ್ಟಿಯಲ್ಲಿ ನಷ್ಟ ಅನುಭವಿಸಿದವು. ವಿಪ್ರೋ, ಭಾರತಿ ಇನ್ಫ್ರಾಟೆಲ್, ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಪವರ್ ಗ್ರಿಡ್ ಕಾರ್ಪ್ ಲಾಬ ಗಳಿಸಿದವು.
ಜಾಗತಿಕ ಮಾರುಕಟ್ಟೆಗಳಲ್ಲಿನ ನಷ್ಟದ ಪರಿಣಾಮ ಗುರುವಾರದ ವಹಿವಾಟಿನ ಸಂದರ್ಭದಲ್ಲಿ ಸೆನ್ಸೆಕ್ಸ್ ಸೂಚ್ಯಂಕ ಸುಮಾರು 800 ಪಾಯಿಂಟ್‌ಗಳವರೆಗೆ ಕುಸಿತ ಕಂಡು ದಿನದ ಕನಿಷ್ಠ ಮಟ್ಟ 36,694ಕ್ಕೆ ತಲುಪಿತ್ತು. ಆದರೆ ದಿನದ ಅಂತ್ಯಕ್ಕೆ 462 ಪಾಯಿಂಟ್‌ಗಳಷ್ಟು ಕಡಿಮೆಯಾಗಿ, 37,000 ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿದ್ದು ಕೊಂಚ ಸಮಾಧಾನ ನೀಡಿತು. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ಐದು ವಾರಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.
ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಬೀರಿರುವ ಪ್ರಮುಖ ಅಂಶಗಳು ಇಲ್ಲಿವೆ:
ಬುಧವಾರದ ಕನಿಷ್ಠ ರೂ. 68.79 ಕ್ಕೆ ಹೋಲಿಸಿದರೆ ಇಂದು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ರೂ. 69.20 ಕ್ಕೆ ಇಳಿದಿದೆ. ವಹಿವಾಟಿನ ಕೊನೆಯಲ್ಲಿ, ರೂಪಾಯಿ 69.10 ಕ್ಕೆ ವಹಿವಾಟು ನಡೆಸುತ್ತಿದೆ.
ಇಂದು ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಎಲ್ಲಾ ವಲಯದ ಸೂಚ್ಯಂಕಗಳು ಮಾರಾಟ ಒತ್ತಡವನ್ನು ಎದುರಿಸಿದವು.
ಸೆನ್ಸೆಕ್ಸ್ ಷೇರುಗಳಲ್ಲಿ, ವೇದಾಂತ ಶೇ. 6ರಷ್ಟು ಕುಸಿದಿದ್ದರೆ, ಎಸ್‌ಬಿಐ ಮತ್ತು ಟಾಟಾ ಮೋಟಾರ್ಸ್ ಇವೆರಡೂ ಶೇ. 4ಕ್ಕಿಂತ ಹೆಚ್ಚು ಕುಸಿದವು. ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಎಲ್ ಅಂಡ್ ಟಿ, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್ ಮತ್ತು ಯೆಸ್ ಬ್ಯಾಂಕ್ ಇತರೆ ಕಂಪನಿಗಳು ಪ್ರಮುಖವಾಗಿ ನಷ್ಟ ಕಂಡವು.
ಯುಎಸ್ ಮೂಲದ ಸಾಫ್ಟ್‌ವೇರ್ ಕಂಪನಿ ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ವರ್ಷದ ದ್ವಿತೀಯಾರ್ಧದಲ್ಲಿ ಪ್ರಮುಖ ಬ್ಯಾಂಕಿಂಗ್ ಕ್ಲೈಂಟ್‌ಗಳ ಕಡಿಮೆ ಖರ್ಚನ್ನು ಫ್ಲ್ಯಾಗ್ ಮಾಡಿದ ನಂತರ ಎನ್‌ಎಸ್‌ಇ ಐಟಿ ಸೂಚ್ಯಂಕವು ಸುಮಾರು ಶೇ. 2ರಷ್ಟು ಕುಸಿದಿದೆ. ಇದು ಆದಾಯಕ್ಕಾಗಿ ಬ್ಯಾಂಕಿಂಗ್ ಗ್ರಾಹಕರ ಮೇಲೆ ಹೆಚ್ಚು ಅವಲಂಬಿತವಾಗಿರುವ ದೇಶೀಯ ಐಟಿ ಕಂಪನಿಗಳಿಗೆ ಕಳವಳವನ್ನುಂಟು ಮಾಡಿತು.
ಜೂನ್ ತ್ರೈಮಾಸಿಕದಲ್ಲಿ ದುರ್ಬಲ ಫಲಿತಾಂಶಗಳು ಹೂಡಿಕೆದಾರರ ಮನೋಭಾವದ ಮೇಲೆ ಪರಿಣಾಂ ಬೀರಿದವು. ಯುಪಿಎಲ್ ಲಿಮಿಟೆಡ್ ಷೇರುಗಳು ಶೇ. 2.5ರಷ್ಟು ಕುಸಿದರೆ, ಭಾರತಿ ಏರ್‌ಟೆಲ್ ಸುಮಾರು ಶೇ. 4ರಷ್ಟು ಕುಸಿತ ಕಂಡಿದೆ.
ಜುಲೈ ಮಾರಾಟದಲ್ಲಿ ದೊಡ್ಡ ಕುಸಿತವನ್ನು ಕಂಡರು ಮಾರುತಿ ಸುಜುಕಿ ಶೇ. 2ರಷ್ಟು ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಆಟೋ, ಮತ್ತು ಹೀರೋ ಮೊಟೊಕಾರ್ಪ್ ಕೂಡ ಲಾಭ ಕಂಡವು.
ಬೇರೆ ಬೇರೆ ಕ್ಷೇತ್ರಗಳಲ್ಲಿನ ಮಿಶ್ರ ಆದಾಯದ ಪ್ರಕಟಣೆಗಳು ಮತ್ತು ಋಣಾತ್ಮಕ ಎಫ್‌ಐಐ ಒಳಹರಿವು ದೇಶೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications