ವೊಡಾಫೋನ್ ಐಡಿಯಾದಿಂದ ರೂ. 45 ಹೊಸ ಮಾಸಿಕ ಪ್ಲಾನ್ ಬಿಡುಗಡೆ

ದೂರಸಂಪರ್ಕ ವಲಯಕ್ಕೆ ಜಿಯೋ ಪ್ರವೇಶದ ನಂತರ ಈಗಾಗಲೇ ಇರುವ ಗ್ರಾಹಕರನ್ನು ಉಳಿಸಲು ಹಾಗು ಹೊಸ ಗ್ರಾಹಕರನ್ನು ಸೆಳೆಯಲು ಪ್ರಮುಖ ಟೆಲಿಕಾಮ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಅವುಗಳಲ್ಲಿ ವೊಡಾಫೋನ್-ಐಡಿಯಾ ಕೂಡ ಒಂದಾಗಿದೆ.

ದೂರಸಂಪರ್ಕ ವಲಯಕ್ಕೆ ಜಿಯೋ ಪ್ರವೇಶದ ನಂತರ ಈಗಾಗಲೇ ಇರುವ ಗ್ರಾಹಕರನ್ನು ಉಳಿಸಲು ಹಾಗು ಹೊಸ ಗ್ರಾಹಕರನ್ನು ಸೆಳೆಯಲು ಪ್ರಮುಖ ಟೆಲಿಕಾಮ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಅವುಗಳಲ್ಲಿ ವೊಡಾಫೋನ್-ಐಡಿಯಾ ಕೂಡ ಒಂದಾಗಿದೆ.

ವೊಡಾಫೋನ್ ಐಡಿಯಾದಿಂದ ರೂ. 45 ಹೊಸ ಮಾಸಿಕ ಪ್ಲಾನ್ ಬಿಡುಗಡೆ

ವೊಡಾಫೋನ್ ಐಡಿಯಾ ಕಂಪನಿಯು ಕಡಿಮೆ ಮೊತ್ತದ ಮಾಸಿಕ ಯೋಜನೆಯನ್ನು ಪರಿಚಯಿಸಿದೆ. ೪ಜಿ ಸೇವೆಗೆ ವೇಗ ನೀಡಲು ಮತ್ತು ಆದಾಯ ಸುಧಾರಿಸಿ ತಮ್ಮ ನೆಟ್ವರ್ಕ್ ತೊರೆಯುವ ಗ್ರಾಹಕರನ್ನು ಕಡಿಮೆ ಯೋಜನೆಯ ಮೂಲಕ ಹಿಡಿದಿಡಲು ಹೊಸ ಕನಿಷ್ಟ ಮೊತ್ತದ ಮಾಸಿಕ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಕಂಪನಿಯು 22 ವಲಯಗಳಲ್ಲಿ 11 ರಲ್ಲಿ ನೆಟ್‌ವರ್ಕ್ ಏಕೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಉಳಿದವುಗಳನ್ನು 2020 ರ ಜೂನ್ ವೇಳೆಗೆ ಸಾಧಿಸುವ ಆಶಯವನ್ನು ಹೊಂದಿದೆ.
ಈಗಾಗಲೇ ನಾಲ್ಕು ಮಾರುಕಟ್ಟೆಗಳಲ್ಲಿ ರೂ. 45 ಯೋಜನೆಯನ್ನು ಪರೀಕ್ಷಿಸಿದ್ದು, ಉತ್ತೇಜಕ ಪ್ರತಿಕ್ರಿಯೆಯನ್ನು ಲಭಿಸಿದೆ. ಇದು 35 ಪ್ಯಾಕ್‌ಗೆ ಹೋಲಿಸಿದರೆ ಈ ಪ್ಯಾಕ್ ಹೆಚ್ಚಿನ ಸೌಲಭ್ಯ (70 ನಿಮಿಷಗಳ ಟಾಕ್-ಟೈಮ್) ನೀಡುತ್ತದೆ. ನಾವು ಶೀಘ್ರದಲ್ಲೇ ಭಾರತದಾದ್ಯಂತ ರೂ. 45 ಪ್ಲಾನ್ ನ್ನು ಹೊರತರುತ್ತೇವೆ ಎಂದು ವೊಡಾಫೋನ್ ಐಡಿಯಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಲೇಶ್ ಶರ್ಮಾ ತಿಳಿಸಿದ್ದಾರೆ.
೨೦೧೬ರಲ್ಲಿ ಜಿಯೋ ಪ್ರವೇಶ ಕೊಟ್ಟ ಬಳಿಕ ಪೈಪೋಟಿ ಎದುರಿಸಲಾಗದೆ ವೊಡಾಫೊನ್ ಮತ್ತು ಐಡಿಯಾ ಕಂಪನಿಗಳು ೨೦೧೭ರ ಮಾರ್ಚ್ ನಲ್ಲಿ ವಿಲೀನವಾಗುವುದಾಗಿ ಘೋಷಿಸಿ, ೨೦೧೮ರಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+