ತೆರಿಗೆ ಭಯೋತ್ಪಾದನೆ ತಡೆಗೆ ಕೇಂದ್ರ ವಿಫಲ: ಮೋಹನದಾಸ್ ಪೈ
ದೇಶದಲ್ಲಿನ ತೆರಿಗೆ ಭಯೋತ್ಪಾದನೆ ಬಗ್ಗೆ ಕೇಂದ್ರಕ್ಕೆ ತಿಳಿದಿದೆ. ಆದರೆ ತೆರಿಗೆದಾರರು ಮತ್ತು ಉದ್ಯಮಿಗಳಿಗೆ ಕಿರುಕುಳ ನೀಡುವುದನ್ನು ತಡೆಯಲು ಕ್ರಮಕೈಗೊಂಡಿಲ್ಲ ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ.ಮೋಹನ್‌ದಾಸ್ ಪೈ ಹೇಳಿದ್ದಾರೆ.
ದೇಶದಲ್ಲಿನ ತೆರಿಗೆ ಭಯೋತ್ಪಾದನೆ ಬಗ್ಗೆ ಕೇಂದ್ರಕ್ಕೆ ತಿಳಿದಿದೆ. ಆದರೆ ತೆರಿಗೆದಾರರು ಮತ್ತು ಉದ್ಯಮಿಗಳಿಗೆ ಕಿರುಕುಳ ನೀಡುವುದನ್ನು ತಡೆಯಲು ಕ್ರಮಕೈಗೊಂಡಿಲ್ಲ ಎಂದು ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿ.ವಿ.ಮೋಹನ್‌ದಾಸ್ ಪೈ ಹೇಳಿದ್ದಾರೆ.

ವಿ.ಜಿ. ಸಿದ್ದಾರ್ಥ ಅವರ ಸಾವಿನ ನಂತರ ತೆರಿಗೆ ಭಯೋತ್ಪಾದನೆ ಎಂಬ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆವಾಗುತ್ತಿದೆ.
ತೆರಿಗೆ ಭಯೋತ್ಪಾದನೆ ಬಹಳ ಗೊಂದಲದ ವಿಷಯ ವಾಗಿದ್ದು, ಕೇಂದ್ರ ಸರ್ಕಾರಕ್ಕೆ ತೆರಿಗೆ ಕಿರುಕುಳದ ಬಗ್ಗೆ ತಿಳಿದಿದೆ. ಆದರೆ ಅದನ್ನು ತಡೆಯಲು ಇನ್ನೂ ಪರಿಣಾಮಕಾರಿಯಾಗಿ ಯಶಸ್ವಿಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿನ ವಿಳಂಬವು ತೆರಿಗೆ ಪ್ರಾಧಿಕಾರಕ್ಕೆ ಹೆಚ್ಚುವರಿ ಅಧಿಕಾರವನ್ನು ನೀಡಿದೆ. ತೆರಿಗೆ ಸಂಗ್ರಹಣೆ ಮಾಡುವಾಗ ತೆರಿಗೆದಾರರು ಜನರನ್ನು ಭಯಭೀತರನ್ನಾಗಿಸುತ್ತಿದ್ದಾರೆ.
ನಿರಾಶಭಾವ ವ್ಯಕ್ತಪಡಿಸಿರುವ ಪೈ ವ್ಯವಸ್ಥೆಯಲ್ಲಿ ನಂಬಿಕೆ ಕುಸಿಯುತ್ತಿದೆ ಎಂದಿದ್ದಾರೆ. ತೆರಿಗೆ ಮೌಲ್ಯಮಾಪನ ವ್ಯವಸ್ಥೆಯು ಕುಸಿದಿದೆ. ನ್ಯಾಯ ವ್ಯವಸ್ಥೆ ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಎರಡೂ ಪ್ರಮುಖ ವ್ಯವಸ್ಥೆಗಳು ಶೋಚನೀಯವಾಗಿ ವಿಫಲವಾದ ಕಾರಣ ಕಾನೂನು ಪಾಲಿಸುವ ನಾಗರಿಕರು ಮತ್ತು ಉದ್ಯಮಿಗಳು ತತ್ತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಉದ್ಯಮಿಯಾಗಿದ್ದ ವಿ.ಜಿ. ಸಿದ್ಧಾರ್ಥ ಅವರು ತಮ್ಮ ಸಾವಿಗೆ ಮುನ್ನ ಉದ್ಯಮಿಗಳು ಎದುರಿಸುತ್ತಿರುವ ತೆರಿಗೆ ಅಧಿಕಾರಿಗಳ ಕಿರುಕುಳದ ಬಗ್ಗೆ ಮಾತನಾಡಿದ್ದರು. ಈಗ ಮೋಹನ್ ದಾಸ್ ಪೈ ಮತ್ತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ತೆರಿಗೆ ಭಯೋತ್ಪಾದನೆ ಬಗ್ಗೆ ಪುನರುಚ್ಚರಿಸಿದ್ದಾರೆ.


Click it and Unblock the Notifications