ಷೇರುಪೇಟೆಯಲ್ಲಿ ಕರಡಿ ಕುಣಿತ, ಡಾಲರ್ ಎದುರು ರೂಪಾಯಿ ಮೌಲ್ಯ ಭಾರೀ ಕುಸಿತ
ಸೋಮವಾರದ ದಿನದ ವಹಿವಾಟಿನ ಅಂತ್ಯಕ್ಕೆ ಭಾರತೀಯ ಸೂಚ್ಯಂಕಗಳು ಋಣಾತ್ಮಕವಾಗಿ ಕೊನೆಗೊಂಡವು. ಯುಎಸ್-ಚೀನ ವಾಣಿಜ್ಯ ಸಮರ, ಜಮ್ಮು ಕಾಶ್ಮೀರ 370ನೇ ವಿಧಿ ಉದ್ವಿಗ್ನತೆ ಹಾಗು ರೂಪಾಯಿ ಮೌಲ್ಯ ಕುಸಿತ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದವು.
ಸೋಮವಾರದ ದಿನದ ವಹಿವಾಟಿನ ಅಂತ್ಯಕ್ಕೆ ಭಾರತೀಯ ಸೂಚ್ಯಂಕಗಳು ಋಣಾತ್ಮಕವಾಗಿ ಕೊನೆಗೊಂಡವು. ಯುಎಸ್-ಚೀನ ವಾಣಿಜ್ಯ ಸಮರ, ಜಮ್ಮು ಕಾಶ್ಮೀರ 370ನೇ ವಿಧಿ ಉದ್ವಿಗ್ನತೆ ಹಾಗು ರೂಪಾಯಿ ಮೌಲ್ಯ ಕುಸಿತ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದವು.

ಒಂದು ದಶಕದಲ್ಲಿ ಯುವಾನ್ ತನ್ನ ಕನಿಷ್ಠ ಮಟ್ಟಕ್ಕೆ ಕುಸಿತ ದಾಖಲಿಸಿದ ನಂತರ ಡಾಲರ್ ಎದುರು ರೂಪಾಯಿ ಮೌಲ್ಯವು 70 ರಷ್ಟು ಕುಸಿದಿದೆ. ಸೆನ್ಸೆಕ್ಸ್ ಸೂಚ್ಯಂಕವು 701 ಪಾಯಿಂಟ್ ಗಳವರೆಗೆ ಕುಸಿದರೆ, ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು 11,800 ಮಟ್ಟಕ್ಕಿಂತ ಕಡಿಮೆ ಇಳಿಕೆ ಕಂಡಿತು. ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 418 ಪಾಯಿಂಟ್ ಅಥವಾ ಶೇ. 1.1 ಇಳಿಕೆಯೊಂದಿಗೆ 36,700 ಮಟ್ಟದಲ್ಲಿ ಮತ್ತು ಎನ್ಎಸ್ಇ ನಿಫ್ಟಿ ಸುಚ್ಯಂಕ 135 ಪಾಯಿಂಟ್ ಕುಸಿದು 10,863 ಮಟ್ಟಕ್ಕೆ ತಲುಪಿದೆ.
ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರಾ, ಕೋಲ್ ಇಂಡಿಯಾ, ಟಿಸಿಎಸ್ ಮತ್ತು ಬಜಾಜ್ ಆಟೋ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದವು. ಆದರೆ ಯೆಸ್ ಬ್ಯಾಂಕ್, ಯುಪಿಎಲ್, ಟಾಟಾ ಮೋಟಾರ್ಸ್, ಪವರ್ ಗ್ರಿಡ್ ಕಾರ್ಪ್ ಮತ್ತು ಗ್ರಾಸಿಮ್ ಇಂಡಸ್ಟ್ರೀಸ್ ನಷ್ಟ ಕಂಡವು.
ರೂಪಾಯಿ ಮೌಲ್ಯ ಕುಸಿತ:
- ಯುಎಸ್ ಡಾಲರ್ 70.06 ಕ್ಕೆ ತೆರೆದ ನಂತರ, ರೂಪಾಯಿ ಮೌಲ್ಯವು ದಿನದ ಕನಿಷ್ಠ 70.60 ಕ್ಕೆ ದುರ್ಬಲಗೊಂಡಿತು. ಇತ್ತೀಚಿನ ವಹಿವಾಟಿನಲ್ಲಿ ರೂಪಾಯಿ ಡಾಲರ್ 70.40 ಕ್ಕೆ ವಹಿವಾಟು ನಡೆಸುತ್ತಿದೆ.
- ಭಾರತೀಯ ಷೇರು ಮಾರುಕಟ್ಟೆಗಳು ಇಂದು ತೀವ್ರವಾಗಿ ಕುಸಿದವು. ಏಷ್ಯಾದ ಇತರ ಮಾರುಕಟ್ಟೆ ಕೂಡ ಕುಸಿತಕ್ಕೆ ಒಳಗೊಂಡಿತು. ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆಗಳು ಆರು ವರ್ಷಗಳ ಗರಿಷ್ಠ ಮಟ್ಟವನ್ನು ಮುಟ್ಟಿದರೆ, ಪ್ಯೂಚರ್ಸ್ ಭಾರತದಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
- ಭಾರತೀಯ ಮಾರುಕಟ್ಟೆಗಳಿಂದ ಹೊರ ಹರಿವು ರೂಪಾಯಿಗೂ ನೋವುಂಟು ಮಾಡಿದೆ. ಈಕ್ವಿಟಿಗಳಲ್ಲಿನ ದೇಶೀಯ ಹೂಡಿಕೆದಾರರ ಮನೋಭಾವ ಶುಕ್ರವಾರದ ವಿದೇಶಿ ಬಂಡವಾಳ ಹೂಡಿಕೆದಾರರ ಪ್ರಭಾವಕ್ಕೆ ಸಿಲುಕಿತು. ಹೆಚ್ಚುತ್ತಿರುವ ವಾಣಿಜ್ಯ ಸಮರದ ಕಾರಣದಿಂದಾಗಿ ಸೆನ್ಸೆಕ್ಸ್ ಇಂದು ಭಾರೀ ಕುಸಿತಕ್ಕೆ ಸಿಲುಕಿತು.
370 ನೇ ವಿಧಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370 ನೇ ವಿಧಿಯನ್ನು ತೆಗೆದುಹಾಕಲಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಇಂದು ಸಂಸತ್ತಿನಲ್ಲಿ ಹೇಳಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಮ್ಮೆಗೆ ಜಾರಿಗೆ ಬರುವ ಆದೇಶಕ್ಕೆ ಸಹಿ ಹಾಕಿದ್ದಾರೆ.


Click it and Unblock the Notifications