ಗೂಳಿ ಜಿಗಿತ! ಚೇತರಿಕೆ ಕಂಡ ಸೆನ್ಸೆಕ್ಸ್, 277 ಪಾಯಿಂಟ್ ಏರಿಕೆ
ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಪ್ರಕಟಣೆಗೆ ಮುಂಚಿತವಾಗಿ ಉತ್ತಮ ಲಾಭದೊಂದಿಗೆ ದೇಶೀ ಷೇರುಪೇಟೆ ಕೊನೆಗೊಂಡಿರುವುದು ಹೂಡಿಕೆದಾರರಲ್ಲಿ ಖುಷಿ ತಂದಿದೆ.
ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಣಕಾಸು ನೀತಿ ಪ್ರಕಟಣೆಗೆ ಮುಂಚಿತವಾಗಿ ಉತ್ತಮ ಲಾಭದೊಂದಿಗೆ ದೇಶೀ ಷೇರುಪೇಟೆ ಕೊನೆಗೊಂಡಿರುವುದು ಹೂಡಿಕೆದಾರರಲ್ಲಿ ಖುಷಿ ತಂದಿದೆ.

ಮುಂಬೈ ಷೇರುಪೇಟೆ ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕ 542 ಪಾಯಿಂಟ್ ಏರಿಕೆಯೊಂದಿಗೆ 37,242ರ ಗರಿಷ್ಠ ಮಟ್ಟವನ್ನು ತಲುಪಿತ್ತು. ದಿನದ ವಹಿವಾಟಿನ ಅಂತ್ಯಕ್ಕೆ ಕೊಂಚ ಹಿನ್ನಡೆ ಕಂಡ ಸೆನ್ಸೆಕ್ಸ್ ಸೂಚ್ಯಂಕವು 277 ಪಾಯಿಂಟ್ ಏರಿಕೆಯೊಂದಿಗೆ 36,977 ಮಟ್ಟದಲ್ಲಿ ಕೊನೆಗೊಂಡಿದೆ. ಅದೇ ರೀತಿ ನಿಫ್ಟಿ ಸೂಚ್ಯಂಕ 85.70 ಪಾಯಿಂಟ್‌ಗಳ ಏರಿಕೆ ಕಂಡು 10,948.30 ಕ್ಕೆ ತಲುಪಿದೆ.
ಯೆಸ್ ಬ್ಯಾಂಕ್ ಅಗ್ರ ಗಳಿಕೆಯಾಗಿ ಹೊರಹೊಮ್ಮಿದರೆ, ರಿಲಯನ್ಸ್ ಇಂಡಸ್ಟ್ರೀಸ್ (ಆರ್ಐಎಲ್) ಸೂಚ್ಯಂಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದೆ.
ನಿಫ್ಟಿ ಸೂಚ್ಯಂಕದಲ್ಲಿ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಅಗ್ರ ಲಾಭ ಗಳಿಸಿದೆ. ಯೆಸ್ ಬ್ಯಾಂಕ್, ಟೆಕ್ ಮಹೀಂದ್ರಾ, ಬಜಾಜ್ ಫೈನಾನ್ಸ್, ಭಾರತಿ ಏರ್‌ಟೆಲ್, ಹೀರೋ ಮೊಟೊಕಾರ್ಪ್, ಐಷರ್ ಮೋಟಾರ್ಸ್ ಮತ್ತು ಮಾರುತಿ ಸುಜುಕಿ ಸಹ ಲಾಭ ಗಳಿಸಿದವರಲ್ಲಿ ಸೇರಿದ್ದಾರೆ. ಝೀ ಎಂಟರ್‌ಟೈನ್‌ಮೆಂಟ್, ಸಿಪ್ಲಾ, ರಿಲಯನ್ಸ್ ಇಂಡಸ್ಟ್ರೀಸ್, ಪವರ್ ಗ್ರಿಡ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸ್, ಬ್ರಿಟಾನಿಯಾ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖವಾಗಿ ನಷ್ಟ ಕಂಡಿವೆ.


Click it and Unblock the Notifications