For Quick Alerts
ALLOW NOTIFICATIONS  
For Daily Alerts

ಲಕ್ಷ್ಮೀ ಕೃಪಾಕಟಾಕ್ಷ! 28 ಕೋಟಿ ದುಬೈ ಲಾಟರಿ ಗೆದ್ದ ತೆಲಂಗಾಣದ ರೈತ

'ಭಗವಾನ್ ಜಬ್ ದೇತಾ ಹೈ ತೋ ಛಪ್ಪಡ್ ಫಾಡ್ ಕೆ ದೇತಾ ಹೈ' ಇದು ಹೆರಾಪೆರಿ ಹಿಂದಿ ಸಿನಿಮಾದ ಡೈಲಾಗ್. ಈ ಮಾತು ಇಲ್ಲಿ ಹೇಳಲು ಕಾರಣ ದುಬೈನಲ್ಲಿ ತೆಲಂಗಾಣದ ರೈತರಿಬ್ಬರೂ ಗೆದ್ದಿರುವ 28 ಕೋಟಿ ಲಾಟರಿ!! ಲಕ್ಷ್ಮೀಯ ಕೃಪಾಕಟಾಕ್ಷವೇ ಹಾಗೆ!

|

'ಭಗವಾನ್ ಜಬ್ ದೇತಾ ಹೈ ತೋ ಛಪ್ಪಡ್ ಫಾಡ್ ಕೆ ದೇತಾ ಹೈ' ಇದು ಹೆರಾಪೆರಿ ಹಿಂದಿ ಸಿನಿಮಾದ ಡೈಲಾಗ್. ಈ ಮಾತು ಇಲ್ಲಿ ಹೇಳಲು ಕಾರಣ ದುಬೈನಲ್ಲಿ ತೆಲಂಗಾಣದ ರೈತರಿಬ್ಬರೂ ಗೆದ್ದಿರುವ 28 ಕೋಟಿ ಲಾಟರಿ!! ಲಕ್ಷ್ಮೀಯ ಕೃಪಾಕಟಾಕ್ಷವೇ ಹಾಗೆ!
ಇಬ್ಬರು ಭಾರತೀಯ ಸ್ನೇಹಿತರು, ಒಬ್ಬರು ದುಬೈನ ಮಾಜಿ ನಿವಾಸಿಯಾಗಿದ್ದರೆ, ಇನ್ನೊಬ್ಬರು ಪ್ರಸ್ತುತ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ನಡೆದ ರಾಫೆಲ್ ನಲ್ಲಿ ಇವರು ದೊಡ್ಡ ಲಾಟರಿಯನ್ನು ಗೆದ್ದಿದ್ದಾರೆ.

ತೆಲಂಗಾಣ ರಾಜ್ಯದ ನಿಜಾಮಾಬಾದ್

ತೆಲಂಗಾಣ ರಾಜ್ಯದ ನಿಜಾಮಾಬಾದ್

ವಿಲಾಸ್ ರಿಕ್ಕಲಾ ಮತ್ತು ರವಿ ಮಸಿಪೆಡ್ಡಿ ಇಬ್ಬರೂ ಭಾರತದ ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯವರು. ಅವರು ದೀರ್ಘಕಾಲದಿಂದಲೂ ಟಿಕೆಟ್ ಖರೀದಿಸುತ್ತಾ ಬರುತ್ತಿದ್ದರು. ಇವರ ಸತತ ದೀರ್ಘಕಾಲೀನ ಪ್ರಯತ್ನಕ್ಕೆ ಲಕ್ಷ್ಮೀ ಕೃಪೆ ತೋರಿದ್ದಾಳೆ! ಅಂತಿಮವಾಗಿ ಜುಲೈ 29 ರಂದು ಖರೀದಿಸಿದ ಟಿಕೇಟ್ ಇವರ ಅದೃಷ್ಟವನ್ನೇ ಬದಲಾಯಿಸಿದ್ದು, ಅಂತಿಮವಾಗಿ ೨೮ ಕೋಟಿ ಲಾಟರಿ ಗೆದ್ದಿದ್ದಾರೆ ಎಂದು ಖಲೀಜ್ ಟೈಮ್ಸ್ ಭಾನುವಾರ ವರದಿ ಮಾಡಿದೆ. (Image Credit: Supplied)

ಬಿಗ್ ಟಿಕೆಟ್ ಅಬುಧಾಬಿ ರಾಫೆಲ್

ಬಿಗ್ ಟಿಕೆಟ್ ಅಬುಧಾಬಿ ರಾಫೆಲ್

ಯಾರಿಗುಂಟು ಯಾರಿಗಿಲ್ಲ! 'ಬಿಗ್ ಟಿಕೇಟ್ ಅಬುಧಾಬಿ ರಾಫೆಲ್' ಬಹುಮಾನದ ಮೊತ್ತ ಬರೋಬ್ಬರಿ 15 ಮಿಲಿಯನ್ ದಿರ್ಹಾಮ್ ($ 4 ಮಿಲಿಯನ್). "ಇದನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ. ಇದು ಕನಸಿನಂತಿದೆ. ನಾನು ದುಬೈ ಸಂಸ್ಥೆಯೊಂದರಲ್ಲಿ 4-5 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಇದೀಗ ಹೊರಟೆ. ಈಗ ನನ್ನ ಬಳಿ ಈ ಜಾಕ್‌ಪಾಟ್ ಇದೆ. ಇದರಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ವಿಲಾಸ್ ರಿಕ್ಕಲಾ ಖಲೀಜ್ ಟೈಮ್ಸ್ ಗೆ ತಿಳಿಸಿದ್ದಾರೆ.

ರವಿ ಮಸಿಪೆಡ್ಡಿ ಪ್ರತಿಕ್ರಿಯೆ

ರವಿ ಮಸಿಪೆಡ್ಡಿ ಪ್ರತಿಕ್ರಿಯೆ

ಅಬುಧಾಬಿಯಲ್ಲಿ ಕೆಲಸ ಮಾಡುವ ರವಿ ಮಸಿಪೆಡ್ಡಿ ಪ್ರತಿಕ್ರಿಯೆ: ಇದನ್ನು ಎಷ್ಟು ವರ್ಷಗಳಿಂದ ಖರೀದಿಸುತ್ತಿದ್ದೇವೆಂದು ನನಗೆ ನೆನಪಿಲ್ಲ. ಅಂತಿಮವಾಗಿ ನಾವು ಗೆದ್ದಿದ್ದೇವೆ. ನಾವು ಟಿಕೆಟ್‌ಗೆ ಶೇ. 50 ರಷ್ಟು ಹಣವನ್ನು ವ್ಯಯಿಸಿದ್ದೇವೆ ಎಂದಿದ್ದಾರೆ. ವಿಜೇತರ ಪಟ್ಟಿಯಲ್ಲಿ ಇತರ ಐದು ಭಾರತೀಯರು ಸೇರಿದ್ದಾರೆ.

ನಗದು ಬಹುಮಾನ ಮತ್ತು ಐಷಾರಾಮಿ ಕಾರುಗಳಿಗಾಗಿ ಬಿಗ್ ಟಿಕೆಟ್

ನಗದು ಬಹುಮಾನ ಮತ್ತು ಐಷಾರಾಮಿ ಕಾರುಗಳಿಗಾಗಿ ಬಿಗ್ ಟಿಕೆಟ್

ಅಬುಧಾಬಿಯಲ್ಲಿ ನಗದು ಬಹುಮಾನ ಮತ್ತು ಐಷಾರಾಮಿ ಕಾರುಗಳಿಗಾಗಿ 'ಬಿಗ್ ಟಿಕೆಟ್ ಅಬುಧಾಬಿ ರಾಫೆಲ್ ' ಅತಿದೊಡ್ಡ ಮತ್ತು ದೀರ್ಘಾವಧಿಯ ಮಾಸಿಕ ಡ್ರಾ ಆಗಿದೆ. ಟಿಕೆಟ್‌ಗಳನ್ನು ಆನ್ಲೈನ್‌ನಲ್ಲಿ ಅಥವಾ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಲ್ ಐನ್ ಡ್ಯೂಟಿ ಫ್ರೀ ಮತ್ತು ಸಿಟಿ ಟರ್ಮಿನಲ್ ಅಬುಧಾಬಿಯಲ್ಲಿ ಖರೀದಿಸಬಹುದು.
ಜೂನ್‌ನಲ್ಲಿ, ಇನ್ನೊಬ್ಬ ಭಾರತೀಯ ವಲಸಿಗ 10 ಮಿಲಿಯನ್ ದಿರ್ಹಾಮ್‌ಗಳನ್ನು ಗೆದ್ದರೆ, ಮೇ ತಿಂಗಳಲ್ಲಿ ಶಾರ್ಜಾದ ಭಾರತೀಯ ಪ್ರಜೆಯೊಬ್ಬರು 15 ಮಿಲಿಯನ್ ದಿರ್ಹಾಮ್‌ಗಳನ್ನು ಗೆದ್ದಿದ್ದಾರೆ.

Read more about: money finance news
English summary

Telangana farmer wins Rs 28 crore in Dubai lottery

Two Indian friends, currently based in Abu Dhabi, has won big in a raffle in the United Arab Emirates (UAE).
Story first published: Tuesday, August 6, 2019, 11:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X