ಫ್ಲಿಪ್ಕಾರ್ಟ್ ಭರ್ಜರಿ ಆಫರ್! ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್ ಆರಂಭ

ಕಳೆದ ವಾರಾಂತ್ಯದಲ್ಲಿ ಅಮೆಜಾನ್ ಇಂಡಿಯಾವು ಅಮೆಜಾನ್ ಫ್ರೀಡಂ ಸೇಲ್ ಅನ್ನು ಘೋಷಣೆ ಮಾಡಿತು. ಸಹಜವಾಗಿಯೇ ಅಮೆಜಾನ್ ಫ್ರೀಡಮ್ ಸೇಲ್ ಗೆ ಟಕ್ಕರ್ ನೀಡಲು ಫ್ಲಿಪ್ಕಾರ್ಟ್ 'ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್' ಆರಂಭಿಸಿದೆ.

ಗ್ರಾಹಕರನ್ನು ಆಕರ್ಷಿಸಲು ಇ-ಕಾಮರ್ಸ್ ಕಂಪನಿಗಳು ವಿಭಿನ್ನ ಆಯಾಮಗಳನ್ನು ಆಯ್ಕೆ ಮಾಡಿ, ಆಕರ್ಷಕ ಆಫರ್ ಗಳನ್ನು ಘೋಷಿಸುತ್ತವೆ.

ಫ್ಲಿಪ್ಕಾರ್ಟ್ ಭರ್ಜರಿ ಆಫರ್! ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್ ಆರಂಭ

ಕಳೆದ ವಾರಾಂತ್ಯದಲ್ಲಿ ಅಮೆಜಾನ್ ಇಂಡಿಯಾವು ಅಮೆಜಾನ್ ಫ್ರೀಡಂ ಸೇಲ್ ಅನ್ನು ಘೋಷಣೆ ಮಾಡಿತು. ಸಹಜವಾಗಿಯೇ ಅಮೆಜಾನ್ ಫ್ರೀಡಮ್ ಸೇಲ್ ಗೆ ಟಕ್ಕರ್ ನೀಡಲು ಫ್ಲಿಪ್ಕಾರ್ಟ್ 'ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್' ಆರಂಭಿಸಿದೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳಲು ಫ್ಲಿಪ್‌ಕಾರ್ಟ್ ಕೂಡ ಯೋಚಿಸುತ್ತಿದೆ. ಇದು ಭಾರತದ 73 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶೇಷ ಮಾರಾಟ ಆಫರ್ ಘೋಷಿಸಿದೆ.
ಫ್ಲಿಪ್ಕಾರ್ಟ್ ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್ ಇದೇ ಗುರುವಾರ ಆಗಸ್ಟ್ 8 ರಂದು ಪ್ರಾರಂಭವಾಗಿ ಆಗಸ್ಟ್ 10 ರವರೆಗೆ ಮುಂದುವರಿಯಲಿದೆ. ಅಮೆಜಾನ್‌ನಂತೆಯೇ, ಫ್ಲಿಪ್ಕಾರ್ಟ್ ಸಹ ತನ್ನ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ ಆಗಸ್ಟ್ 7 ರಂದು ಮಾರಾಟಕ್ಕೆ ಒಂದು ದಿನ ಮುಂಚಿತವಾಗಿಯೇ ಅವಕಾಶ ನೀಡುತ್ತಿದೆ.
ಫ್ಲಿಪ್ಕಾರ್ಟ್ ಕಂಪನಿಯು ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್ ಪ್ರಯುಕ್ತ ಐಸಿಐಸಿಐ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಐಸಿಐಸಿಐ ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.
'ನ್ಯಾಷನಲ್ ಶಾಪಿಂಗ್ ಡೇಸ್ ಸೇಲ್' ನಲ್ಲಿ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್, ಟಿವಿ, ಸ್ಪೀಕರ್ ಸೇರಿದಂತೆ ಜನಪ್ರಿಯ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಸಿಗಲಿವೆ. ರೆಡ್ ಮಿ ನೋಟ್ 7 ಪ್ರೊ ಮೊಬೈಲ್ ಕೂಡ ಮಾರಾಟಕ್ಕೆ ಸಿದ್ಧವಿದ್ದು, ಹೆಚ್ಚುವರಿ ರೂ. 1 ಸಾವಿರ ರಿಯಾಯಿತಿ ಬೆಲೆಗೆ ಫೋನ್ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+