For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ರಿಟರ್ನ್ಸ್ ಅಂತಿಮ ದಿನಾಂಕ ಬದಲು, ಆಗಸ್ಟ್ 31 ಕೊನೆ ದಿನ

|

ಸರಿ ಸುಮಾರು 90 ಲಕ್ಷ ತೆರಿಗೆದಾರರ ಪೈಕಿ ಕೇವಲ 19.3 ಲಕ್ಷ ಮಂದಿ ಮಾತ್ರ ಸರಕು ಮತ್ತು ಸೇವಾ ತೆರಿಗೆ ಜಿಎಸ್ಟಿ ರಿಟರ್ನ್ಸ್ (ಅರ್ಜಿ 9, 9ಎ ಹಾಗೂ 9ಸಿ) ಸಲ್ಲಿಸಿದ್ದಾರೆ. ಶೇ80ಕ್ಕೂ ಅಧಿಕ ಮಂದಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಸಲು ವಿಫಲರಾಗಿರುವುದರಿಂದ ಅನಿವಾರ್ಯವಾಗಿ ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕವನ್ನು ಬದಲಾಯಿಸಲಾಗಿದೆ.

ಜುಲೈನಲ್ಲಿ ರೂ. 1.02 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹಜುಲೈನಲ್ಲಿ ರೂ. 1.02 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹ

2018ನೇ ಸಾಲಿನ ಜಿಎಸ್ಟಿ ಪಾವತಿಗೆ ಆಗಸ್ಟ್ 03ರಂದು ಕೊನೆ ದಿನಾಂಕವಾಗಿತ್ತು. ಈಗ ದಿನಾಂಕ ಬದಲಾಗಿದ್ದು, ಆಗಸ್ಟ್ 31ರೊಳಗೆ ರಿಟರ್ನ್ಸ್ ಸಲ್ಲಿಸಬಹುದು. ಪರೋಕ್ಷ ತೆರಿಗೆ ಹಾಗೂ ಸುಂಕ ಕೇಂದ್ರ ಸಮಿತಿಯ ಮುಖ್ಯಸ್ಥ ಪ್ರಣಬ್ ಕೆ ದಾಸ್ ಅವರು ತೆರಿಗೆ ಸಂಗ್ರಹ ಕುರಿತಂತೆ ದೇಶ ಎಲ್ಲಾ ಉನ್ನತಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಜಿಎಸ್ಟಿ ರಿಟರ್ನ್ಸ್ ಅಂತಿಮ ದಿನಾಂಕ ಬದಲು, ಆಗಸ್ಟ್ 31 ಕೊನೆ ದಿನ

"ಜಿಎಸ್ಟಿ ರಿಟರ್ನ್ಸ್ ಪ್ರಕ್ರಿಯೆ ಇನ್ನಷ್ಟು ಸರಳಗೊಳಿಸುವಂತೆ ವ್ಯಾಪಾರಿಗಳು ಕೋರಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ವ್ಯಾಪಾರ, ವಹಿವಾಟು ಹೊಂದಿದ್ದು, ನಾಲ್ಕು ನೊಂದಣಿ ಹೊಂದಿದ್ದರೆ, ಬ್ಯಾಲೆನ್ಸ್ ಶೀಟ್ ನಲ್ಲಿ ಹೊಂದಿಕೆಯಾದರೂ ತಿಂಗಳ ಎಣಿಕೆಯಂತೆ ರಿಟರ್ನ್ಸ್ ಸಲ್ಲಿಸಲು ಸಾಧ್ಯವಿಲ್ಲ"

2 ಕೋಟಿ ರು ಗೂ ಅಧಿಕ ಟರ್ನ್ ಓವರ್ ಹೊಂದಿರುವ ಕಂಪನಿಗಳನ್ನು ಆಡಿಟ್ ಮಾಡಬೇಕಾಗುತ್ತದೆ. ಐಟಿ ರಿಟರ್ನ್ಸ್ ಸಲ್ಲಿಕೆಯಲ್ಲಿ ಅನೇಕ ಕಂಪನಿಯ ಚಾರ್ಟೆಡ್ ಅಕೌಂಟ್(ಸಿಎ)ಗಳು ನಿರತರಾಗಿರುವುದರಿಂದ ಜಿಎಸ್ಟಿ ರಿಟರ್ನ್ಸ್ ವಿಳಂಬವಾಗಿದೆ ಎಂಬ ವರದಿಯಿದೆ.

Read more about: gst tax ತೆರಿಗೆ
English summary

GST returns for FY18; deadline extended till August 31

Only 19.3 lakh out of the 90 lakh taxpayers, who had to file their GST returns (forms 9, 9A and 9C) have done so by the August 3 deadline, reports.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X