ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಬ್ಯಾಂಕ್ ಸಮಯದಲ್ಲಿ ಬದಲಾವಣೆ
ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ಖುಷಿಯ ವಿಚಾರ ಇದೆ. ಇಲ್ಲಿಯವರೆಗೆ ಬೆಳಿಗ್ಗೆ 10 ಗಂಟೆಗೆ ಕೆಲಸ ಆರಂಭಿಸುತ್ತಿದ್ದ ಬ್ಯಾಂಕುಗಳ ಸಮಯ ಇನ್ಮುಂದೆ ಬದಲಾವಣೆಯಾಗಲಿದೆ.
ಬ್ಯಾಂಕ್ ಗ್ರಾಹಕರಿಗೆ ಇಲ್ಲೊಂದು ಖುಷಿಯ ವಿಚಾರ ಇದೆ. ಇಲ್ಲಿಯವರೆಗೆ ಬೆಳಿಗ್ಗೆ 10 ಗಂಟೆಗೆ ಕೆಲಸ ಆರಂಭಿಸುತ್ತಿದ್ದ ಬ್ಯಾಂಕುಗಳ ಸಮಯ ಇನ್ಮುಂದೆ ಬದಲಾವಣೆಯಾಗಲಿದೆ. ಕೇಂದ್ರದ ಹಣಕಾಸು ಸಚಿವಾಲಯದ ಬ್ಯಾಂಕಿಂಗ್ ವಿಭಾಗ ಮಹತ್ವದ ನಿರ್ಣಯ ತೆಗೆದುಕೊಂಡಿದೆ.

ಹಣಕಾಸು ಸಚಿವಾಲಯ, ಸರ್ಕಾರಿ ಬ್ಯಾಂಕ್ (PSU Banks) ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಬೆಳಿಗ್ಗೆ 9 ಗಂಟೆಯಿಂದ ಕೆಲಸ ನಿರ್ವಹಿಸಲಿದೆ. ದೇಶದಾದ್ಯಂತ ಎಲ್ಲಾ ಬ್ಯಾಂಕುಗಳ ಕಾರ್ಯದ ಸಮಯ ಒಂದೇ ರೀತಿಯಾಗಿರಬೇಕು ಎಂಬುದು ಕೇಂದ್ರದ ನಿರ್ಧಾರವಾಗಿದೆ.
ಗ್ರಾಹಕರ ಸೌಲಭ್ಯಗಳ ವಿಷಯದಲ್ಲಿ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ ಉಪಸಮಿತಿಯನ್ನು ಸ್ಥಾಪಿಸಿತ್ತು. ಉಪಸಮಿತಿಯು ಮೂರು ಸಮಯಗಳನ್ನು ಎಲ್ಲರ ಮುಂದಿಟ್ಟಿತ್ತು.
1. ಬೆಳಿಗ್ಗೆ 9 ರಿಂದ ಮಾಧ್ಯಾಹ್ನ 3 ಗಂಟೆ. 2. ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ. 3. ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆ. ಜಿಲ್ಲಾ ಮಟ್ಟದ ಗ್ರಾಹಕ ಸಮನ್ವಯ ಸಮಿತಿಯಲ್ಲಿ ನಿರ್ಧರಿಸಿ ಆಗಸ್ಟ್ 31 ರೊಳಗಾಗಿ ಅಂತಿಮ ನಿರ್ಧಾರ ನೀಡುವಂತೆ ಸೂಚಿಸಲಾಗಿತ್ತು. ಗ್ರಾಹಕರು ಇಚ್ಛಯಂತೆ ಈ ಹಿಂದಿನಂತೆ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಇಲ್ಲದಿದ್ದರೆ ಬೆಳಿಗ್ಗೆ 9 ಗಂಟೆಗೆ ಬ್ಯಾಂಕುಗಳು ಕಾರ್ಯ ಶುರುಮಾಡಲಿದ್ದು, ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಸಮಯ ಜಾರಿಗೆ ಬರುವ ಸಾಧ್ಯತೆಯಿದೆ.
- ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಬಹುದು.


Click it and Unblock the Notifications