ಕರಡಿ ಕುಣಿತ! ಸೆನ್ಸೆಕ್ಸ್ ಸೂಚ್ಯಂಕ 656 ಪಾಯಿಂಟ್ ಕುಸಿತ
ದೇಶಿ ಷೇರುಪೇಟೆ ಭಾರೀ ಕುಸಿತಕ್ಕೆ ಒಳಗಾಗಿದ್ದು, ಕರಡಿ ಕುಣಿತ ಜೋರಾಗಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 656 ಪಾಯಿಂಟ್ ಕುಸಿತದೊಂದಿಗೆ 36925 ಮಟ್ಟ ತಲುಪಿದೆ.
ದೇಶಿ ಷೇರುಪೇಟೆ ಭಾರೀ ಕುಸಿತಕ್ಕೆ ಒಳಗಾಗಿದ್ದು, ಕರಡಿ ಕುಣಿತ ಜೋರಾಗಿದೆ. ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 656 ಪಾಯಿಂಟ್ ಕುಸಿತದೊಂದಿಗೆ 36925 ಮಟ್ಟ ತಲುಪಿದೆ. ಎನ್ಎಸ್ಇ ನಿಫ್ಟಿ ಸೂಚ್ಯಂಕವು 193 ಅಂಕ ಇಳಿಕೆಯೊಂದಿಗೆ 10915 ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಆರ್‌ಐಎಲ್ ಷೇರುಗಳ ಏರಿಕೆ ಹೊರತುಪಡಿಸಿ, ಎನ್‌ಎಸ್‌ಇ ವಲಯದ ಇತರ ಎಲ್ಲಾ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿವೆ. ಜಾಗತಿಕ ವ್ಯಾಪಾರ ಸಮರ, ಹಾಂಗ್ ಕಾಂಗ್‌ನಲ್ಲಿನ ಪ್ರತಿಭಟನೆಗಳು ಮತ್ತು ಅರ್ಜೆಂಟೀನಾದ ಪೆಸೊ ಕರೆನ್ಸಿಯ ಕುಸಿತದಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಗಳು ಇಂದು ಸತತ ಮೂರನೇ ದಿನ ಕುಸಿದವು. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ಆರು ತಿಂಗಳ ಕನಿಷ್ಠ 71.26 ಕ್ಕೆ ಇಳಿದಿದೆ.

ಯೆಸ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್ ಮತ್ತು ಎಚ್‌ಡಿಎಫ್‌ಸಿ ಸೆನ್ಸೆಕ್ಸ್ ನಷ್ಟ ಅನುಭವಿಸಿವೆ. ಮತ್ತೊಂದೆಡೆ, ರಿಲಯನ್ಸ್ ಇಂಡಸ್ಟ್ರೀಸ್ ಬಿಎಸ್ಇಯಲ್ಲಿ ಶೇ. 11 ರಷ್ಟು ಲಾಭದಲ್ಲಿ ಸಾಗಿದೆ. ರಿಲಯನ್ಸ್ ಕಂಪನಿಯು ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ), ಸೌದಿ ಅರಾಮ್ಕೊ ನೊಂದಿಗೆ ಉದ್ದೇಶಿತ ಹೂಡಿಕೆ ಪತ್ರಕ್ಕೆ ಸಹಿ ಹಾಕಿದೆ ಎಂದು ಘೋಷಿಸಿತು.
ಎಲ್ಲಾ ನಿಫ್ಟಿ ವಲಯದ ಸೂಚ್ಯಂಕಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದವು. ಆಟೋ ವಲಯ ಶೇ. 3.2 ರಷ್ಟು ಕುಸಿದಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಫಿನ್ ಸರ್ವಿಸ್, ನಿಫ್ಟಿ ಐಟಿ, ನಿಫ್ಟಿ ಪಿಎಸ್ಯು ಬ್ಯಾಂಕ್ ಮತ್ತು ನಿಫ್ಟಿ ಪ್ರೈವೇಟ್ ಬ್ಯಾಂಕ್ ಸೂಚ್ಯಂಕಗಳು ಶೇ. 2 ಕ್ಕಿಂತಲೂ ಹೆಚ್ಚು ಕುಸಿತ ಕಂಡಿವೆ.


Click it and Unblock the Notifications