For Quick Alerts
ALLOW NOTIFICATIONS  
For Daily Alerts

ಆಟೋಮೊಬೈಲ್ ವಲಯ 19 ವರ್ಷಗಳಲ್ಲೇ ಶೇ. 18.71ರಷ್ಟು ಕುಸಿತ

ಆಟೋಮೊಬೈಲ್ ವಲಯವು ಕಳೆದ 19 ವರ್ಷಗಳಲ್ಲಿ ಮೊದಲ ಬಾರಿಗೆ ಶೇ. 18.71 ರಷ್ಟು ಕುಸಿತ ಕಂಡಿದೆ. ಕಳೆದ ಮೂರು ತಿಂಗಳಲ್ಲಿ ಆಟೊಮೊಬೈಲ್ ವಲಯದ ಸುಮಾರು 15,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

|

ಆಟೋಮೊಬೈಲ್ ವಲಯವು ಕಳೆದ 19 ವರ್ಷಗಳಲ್ಲಿ ಮೊದಲ ಬಾರಿಗೆ ಶೇ. 18.71 ರಷ್ಟು ಕುಸಿತ ಕಂಡಿದೆ. ಕಳೆದ ಮೂರು ತಿಂಗಳಲ್ಲಿ ಆಟೊಮೊಬೈಲ್ ವಲಯದ ಸುಮಾರು 15,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಭಾರ ತೀಯ ಆಟೊಮೊಬೈಲ್ ಕಂಪನಿಗಳ ಸೊಸೈಟಿ (ಎಸ್‌ಐಎಎಂ) ವರದಿ ಮಾಡಿದೆ.

ಆಟೋಮೊಬೈಲ್ ವಲಯ 19 ವರ್ಷಗಳಲ್ಲೇ ಶೇ. 18.71ರಷ್ಟು ಕುಸಿತ

ಜುಲೈ ತಿಂಗಳಲ್ಲಿ ವಾಹನಗಳ ಮಾರಾಟವು 18.25 ಲಕ್ಷ ಯೂನಿಟ್‌ಗಳಿಗೆ ಇಳಿದಿದೆ. ಇದು ಕಳೆದ ವರ್ಷದ 22.45 ಲಕ್ಷ ಯೂನಿಟ್‌ಗಿಂತ ಕಡಿಮೆಯಾಗಿದೆ. ಹಿಂದೆ ಡಿಸೆಂಬರ್ 2000ರಲ್ಲಿ ಶೇ. 21.81ರಷ್ಟು ಕುಸಿತ ಕಂಡು ಶೋಚನೀಯ ಸ್ಥಿತಿ ಎದುರಾಗಿತ್ತು.
ದೇಶಾದ್ಯಂತ ಹಿಂದಿನ ತಿಂಗಳು ಪ್ರಯಾಣಿಕರ ವಾಹನ (passenger vehicles) ಹಾಗೂ ದ್ವಿಚಕ್ರ ವಾಹನಗಳು ಕೇವಲ 18,25,148 ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 22,45,223 ವಾಹನಗಳು ಮಾರಾಟವಾಗಿದ್ದವು.
ಕಳೆದ ವರ್ಷದ ಜುಲೈ ತಿಂಗಳಲ್ಲಿ 2.90 ಲಕ್ಷ ವಾಹನಗಳು ಮಾರಾಟವಾಗಿದ್ದರೆ, ಈ ವರ್ಷ ಜುಲೈನಲ್ಲಿ 2 ಲಕ್ಷ ವಾಹನ ಮಾತ್ರ ಮಾರಾಟವಾಗಿವೆ.

ಜಿಎಸ್ಟಿ ಕೌನ್ಸಿಲ್ ಆಟೋಗೆ ದರ ಕಡಿತ ಮಾಡಬಹುದೆ?
ಮುಂದಿನ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ವಿಭಾಗ ವಾಹನಗಳ ದರವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದು ಪ್ರೀಮಿಯಂ ರಿಯಲ್ ಎಸ್ಟೇಟ್ ಮೇಲಿನ ದರವನ್ನು ಹೆಚ್ಚಿಸುವತ್ತ ಗಮನಹರಿಸುವ ಸಾಧ್ಯತೆಯಿದೆ. ಆದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಒದಗಿಸುವಿಕೆಯನ್ನು ಪುನಃಸ್ಥಾಪಿಸುತ್ತದೆ.
ವಲಯ ಪ್ರಾತಿನಿಧ್ಯ ಸಿಗುವುದೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವಾರ ಬ್ಯಾಂಕಿಂಗ್, ಬ್ಯಾಂಕೇತರ ಹಣಕಾಸು ಕಂಪನಿಗಳು, ಆಟೋ, ಹಣಕಾಸು ಸೇವೆಗಳು, ವಿದೇಶಿ ಬಂಡವಾಳ ಹೂಡಿಕೆದಾರರು, ಉಕ್ಕು ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೊಂದಿಗೆ ಹಲವಾರು ಸಮಾಲೋಚನಾ ಸಭೆಗಳನ್ನು ಪೂರ್ಣಗೊಳಿಸಿದ್ದಾರೆ.

Read more about: finance news money business
English summary

Automobile sales drop 18.71% in last 19 years

the automobile industry saw its monthly sales decline 18.71% last month, the worst ever in nearly 19 years, forcing the industry to cut jobs.
Story first published: Wednesday, August 14, 2019, 16:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X