ಬ್ಯಾಂಕ್ ರಜೆ 2019: ಆಗಸ್ಟ್-ಸೆಪ್ಟಂಬರ್ ತಿಂಗಳಲ್ಲಿನ ಬ್ಯಾಂಕ್ ರಜಾ ವೇಳಾಪಟ್ಟಿ ಇಲ್ಲಿದೆ..
ಅನೇಕ ಬಾರಿ ನಾವು ಕೆಲವು ಪ್ರಮುಖ ಕೆಲಸಗಳಿಗಾಗಿ ಬ್ಯಾಂಕ್ ಶಾಖೆಗೆ ಹೋಗಿರುತ್ತೇವೆ. ಆದರೆ ಕೆಲವೊಮ್ಮೆ ಅವು ಮುಚ್ಚಿರುವುದು ನಮಗೆ ಗೊತ್ತೆ ಇರುವುದಿಲ್ಲ. ಇದು ಸಮಯ ಮತ್ತು ಹಣ ಎರಡನ್ನೂ ವ್ಯರ್ಥ ಮಾಡುತ್ತದೆ. ಆದರೆ ಬ್ಯಾಂಕುಗಳಿಗೆ ರಜೆ ಇರುವ ದಿನಗಳ ಬಗ್ಗೆ ತಿಳಿದುಕೊಂಡರೆ ನೀವು ಎರಡನ್ನೂ ಉಳಿಸಬಹುದು ಮತ್ತು ಅಂತಹ ಪರಿಸ್ಥಿತಿಯನ್ನು ಎದುರಿಸುವುದನ್ನು ತಪ್ಪಿಸಬಹುದು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಬ್ಯಾಂಕುಗಳು ಸುಮಾರು 5-6 ದಿನಗಳವರೆಗೆ ಮುಚ್ಚಲ್ಪಡುತ್ತವೆ. ಅದೇ ಸಮಯದಲ್ಲಿ, ಕೆಲವು ರಾಜ್ಯಗಳ ಪ್ರಕಾರ, ವಿವಿಧ ದಿನಗಳಲ್ಲಿ ರಜಾದಿನ ಇರುತ್ತದೆ.
ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳ ಬ್ಯಾಂಕ್ ರಜಾ ವೇಳಾಪಟ್ಟಿ ಇಲ್ಲಿದೆ:

ಆಗಸ್ಟ್ ಬ್ಯಾಂಕ್ ರಜಾದಿನಗಳು
ಆಗಸ್ಟ್-ಸೆಪ್ಟೆಂಬರ್ ನಲ್ಲಿ ಈ ಕೆಳಗಿನ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 15 - ರಕ್ಷಾ ಬಂದನ ಮತ್ತು ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 24- ಶ್ರೀಕೃಷ್ಣ ಜನ್ಮಾಷ್ಟಮಿ
ಆಗಸ್ಟ್ 25- ಭಾನುವಾರ

ಸೆಪ್ಟಂಬರ್ ಬ್ಯಾಂಕ್ ರಜೆ
ಸೆಪ್ಟಂಬರ್ ತಿಂಗಳಲ್ಲಿ ಯಾವ ಯಾವ ದಿನ ಬ್ಯಾಂಕುಗಳಿಗೆ ರಜೆ ಇದೆ ನೋಡಿ.
ಸೆಪ್ಟೆಂಬರ್ 2 - ವಿನಾಯಕ ಚತುರ್ಥಿ
ಸೆಪ್ಟೆಂಬರ್ 10 - ಮೊಹರಂ
ಸೆಪ್ಟೆಂಬರ್ 11 - ಓಣಂ

ಬೇರೆ ರಾಜ್ಯಗಳ ಪಟ್ಟಿ
ಬೇರೆ ರಾಜ್ಯಗಳಲ್ಲಿ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ:
ಆಗಸ್ಟ್ 17- ಪಾರ್ಸಿ ಹೊಸ ವರ್ಷದ ಸಂದರ್ಭದಲ್ಲಿ ಮುಂಬೈ, ನಾಗ್ಪುರ ಮತ್ತು ಅಹಮದಾಬಾದ್ ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 20 - ಶ್ರೀ ಶ್ರೀ ಮಾಧವ್ ದೇವ್ ಪ್ರಯುಕ್ತ ಅಸ್ಸಾಂನ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆಗಸ್ಟ್ 31- ಪಂಜಾಬ್ ಮತ್ತು ಹರಿಯಾಣದಲ್ಲಿ ಪಹಿಲಾ ಪ್ರಕಾಶ್ ಶ್ರೀ ಗುರು ಗ್ರಂಥ ಸಾಹೀಬ್ ಜೀ ಆಚರಣೆ