ದೇಶದ ಆರ್ಥಿಕ ಕುಸಿತಕ್ಕೆ ಹತ್ತು ಕಾರಣಗಳು

ದೇಶದಲ್ಲಿ ಮಾರಾಟ ಮತ್ತು ಖರೀದಿಯ ಸರಪಳಿ ಕಳೆದ ಕೆಲವು ತಿಂಗಳುಗಳಿಂದ ಮಂದಗತಿಯ ಲಕ್ಷಣಗಳನ್ನು ತೋರಿಸಿದೆ. ಇದು ಭಾರತೀಯ ಆರ್ಥಿಕತೆಯ ಪ್ರತಿಯೊಂದು ವಲಯದಲ್ಲೂ ಗೋಚರಿಸುತ್ತಿದೆ.

ನೀವು ಕೃಷಿಭೂಮಿ ಮತ್ತು ಮನೆಯನ್ನು ಆನುವಂಶಿಕವಾಗಿ ಪಡೆದಿದ್ದೀರಿ ಎಂದು ಭಾವಿಸಿಕೊಳ್ಳೋಣ. ನೀವು ಸ್ವಂತ ಆಹಾರವನ್ನು ಬೆಳೆಸುತ್ತೀರಿ. ರಾಸಾಯನಿಕ ಗೊಬ್ಬರಗಳನ್ನು ಬಳಸುವ ಬದಲು ಸಾವಯವ ಗೊಬ್ಬರ ಹಸುವಿನ ಸಗಣಿ ಮತ್ತು ಅಂತಹುದೇ ವಸ್ತುಗಳನ್ನು ಬಳಸುತ್ತಿರಿ. ಜಾನುವಾರು ಮತ್ತು ಕೋಳಿ ಇನ್ನಿತರ ಸಾಕು ಪ್ರಾಣಿಗಳಿಗಾಗಿ ಮೇವನ್ನು ಖರೀದಿಸುವುದಿಲ್ಲ. ಮನೆಯ ವಿದ್ಯುತ್ ಗಾಗಿ ಜೈವಿಕ ಅನಿಲವನ್ನು ಇಂಧನವಾಗಿ ಬಳಸುತ್ತೀರಿ. ಇದರರ್ಥ ನೀವು ಸ್ವಾವಲಂಬಿ ಕಾರ್ಯಸಾಧ್ಯವಾದ ಆರ್ಥಿಕತೆಯನ್ನು ಹೊಂದಿದ್ದೀರಿ. ಆದರೆ ನೀವು ಹಣವನ್ನು ಬಳಸದ ಕಾರಣ ನೀವು ದೇಶದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಏನನ್ನೂ ನೀಡುತ್ತಿಲ್ಲ!
ಇನ್ನೊಂದು ಉದಾಹರಣೆ ಪರಿಗಣಿಸಿ. ನಿಮ್ಮ ನೆರೆಹೊರೆಯವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ ಮತ್ತು ಸಂಬಳವನ್ನು ಗಳಿಸುತ್ತಾರೆ. ಅವರು ಕಿರಾಣಿ ಅಂಗಡಿಯಿಂದ ದಿನಸಿ, ಡೈರಿ ಪಾರ್ಲರ್‌ನಿಂದ ಹಾಲು ಮತ್ತು ಬೆಣ್ಣೆ, ಶಾಪಿಂಗ್ ಮಾಲ್‌ನಿಂದ ಬಟ್ಟೆ ವಾರಾಂತ್ಯದಲ್ಲಿ ಚಲನಚಿತ್ರ ಅಥವಾ ನಾಟಕವನ್ನು ವೀಕ್ಷಿಸುತ್ತಾರೆ. ತನ್ನ ಮನೆ ಕೆಲಸಕ್ಕಾಗಿ ಸಹಾಯ ಬಳಸಿಕೊಳ್ಳುತ್ತಾರೆ ಮತ್ತು ತೆರಿಗೆ ಪಾವತಿಸುತ್ತಾರೆ. ಈ ಚಟುವಟಿಕೆಗಳು ದೇಶದ ಜಿಡಿಪಿ ಮೇಲಕ್ಕೆರಲು ಸಹಾಯವಾಗುತ್ತದೆ ಎಂಬ ಭರವಸೆ!
ಇದು ಖರೀದಿ ಮತ್ತು ಮಾರಾಟದ ಸರಪಣಿಯನ್ನು ಹೊಂದಿರುತ್ತದೆ. ಕಿರಾಣಿಯವರು ಸಗಟು ಮಾರುಕಟ್ಟೆಗೆ ಹೋಗಿ ಅಂಗಡಿಗಾಗಿ ವಸ್ತುಗಳನ್ನು ಖರೀದಿಸುತ್ತಾರೆ. ಸಗಟು ಮಾರುಕಟ್ಟೆಯವರು ತನ್ನ ಸರಬರಾಜುಗಳನ್ನು ರೈತರಿಂದ ಪಡೆಯುತ್ತಾರೆ. ಅವರು ಬೀಜಗಳು, ರಸಗೊಬ್ಬರಗಳು, ಟ್ರಾಕ್ಟರುಗಳು, ಡೀಸೆಲ್ ಗಳನ್ನು ಖರೀದಿಸುತ್ತಾರೆ ಮತ್ತು ಕಾರ್ಮಿಕರನ್ನು ತಮ್ಮ ಹೊಲಗಳಲ್ಲಿ ನೇಮಿಸಿಕೊಳ್ಳುತ್ತಾರೆ. ಎಲ್ಲವನ್ನು ಹಣದಲ್ಲಿ ಪಾವತಿಸಲಾಗುತ್ತದೆ. ಈ ಮೇಲಿನ ವಿವರಣೆಯೊಂದಿಗೆ ಪುನಾರಾವರ್ತಿತ ಖರೀದಿ-ಮಾರಾಟದ ಸರಪಣಿಯನ್ನು ಗಮನಿಸಬಹುದು.

ಆರ್ಥಿಕ ಕುಸಿತದ ಕಳವಳ

ಆರ್ಥಿಕ ಕುಸಿತದ ಕಳವಳ

ದೇಶದಲ್ಲಿ ಮಾರಾಟ ಮತ್ತು ಖರೀದಿಯ ಸರಪಳಿ ಕಳೆದ ಕೆಲವು ತಿಂಗಳುಗಳಿಂದ ಮಂದಗತಿಯ ಲಕ್ಷಣಗಳನ್ನು ತೋರಿಸಿದೆ. ಇದು ಭಾರತೀಯ ಆರ್ಥಿಕತೆಯ ಪ್ರತಿಯೊಂದು ವಲಯದಲ್ಲೂ ಗೋಚರಿಸುತ್ತಿದೆ. ಇದರ ಫಲಿತಾಂಶವು 2018-19ರಲ್ಲಿ ಆತಂಕಕಾರಿಯಾಗಿದ್ದು, ಇದಕ್ಕಾಗಿ ಜಿಡಿಪಿ ಬೆಳವಣಿಗೆಯ ದರವು ಶೇಕಡಾ 6.8 ರಷ್ಟಿತ್ತು.
ಇದು 2014-15ರ ನಂತರ ಜಿಡಿಪಿಯ ನಿಧಾನಗತಿಯ ಬೆಳವಣಿಗೆಯ ದರವಾಗಿದೆ. ಹಿಂದಿನ ಕನಿಷ್ಠ ಜಿಡಿಪಿ ದರ 2013-14ರಲ್ಲಿ ಶೇ. 6.39 ರಷ್ಟಿತ್ತು.
2014 ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಇತ್ತೀಚಿನ ಜಿಡಿಪಿ ಅಂಕಿಅಂಶಗಳು ಆರ್ಥಿಕ ಕುಸಿತದ ಕಳವಳವನ್ನು ಉಲ್ಬಣಗೊಳಿಸಿವೆ. ಕೇಂದ್ರ ಅಂಕಿಅಂಶ ಕಚೇರಿಯ ಪ್ರಕಾರ, ಭಾರತದ ಜಿಡಿಪಿ ಅಕ್ಟೋಬರ್-ಡಿಸೆಂಬರ್ 2018 ರಲ್ಲಿ ಐದು ತ್ರೈಮಾಸಿಕ ಕನಿಷ್ಠ ಶೇ. 6.6ಕ್ಕೆ ಇಳಿದಿದೆ.
ಇದು ಜನವರಿ-ಮಾರ್ಚ್ 2018-2019ರಲ್ಲಿ ಶೇ. 6 ಕ್ಕಿಂತ ಕಡಿಮೆಯಾಗಿದೆ. ಭಾರತೀಯ ಆರ್ಥಿಕತೆಯಲ್ಲಿ ನಿಧಾನಗತಿಯು ಆಳವಾಗಿ ಕಾಣುತ್ತಿದ್ದು, ಇವು ಅಶುಭ ಚಿಹ್ನೆಗಳಾಗಿವೆ.
ಜಿಡಿಪಿ ಬೆಳವಣಿಗೆಯು ಭಾರತದಲ್ಲಿ 2019 ರ ಆರಂಭದಿಂದ ನಿಧಾನವಾಗುತ್ತಿದೆ. 2019ರ ಜನವರಿಯಿಂದ ಮಾರ್ಚ್ ವರೆಗೆ ಜಿಡಿಪಿ ಬೆಳವಣಿಗೆ ಶೇ. 5.8ಕ್ಕೆ ಇಳಿದಿದೆ. 2019 ರ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿನ ಆರ್ಥಿಕ ಚಟುವಟಿಕೆಯನ್ನು ನೋಡಿದರೆ, ಈ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಮತ್ತಷ್ಟು ನಿಧಾನವಾಗುತ್ತಿದೆ ಎಂದು ಹೇಳಬಹುದು.

ಆರ್ಥಿಕ ಸೂಚಕಗಳ ಸರಣಿ ನೋಡೋಣ ಬನ್ನಿ

ಆರ್ಥಿಕ ಸೂಚಕಗಳ ಸರಣಿ ನೋಡೋಣ ಬನ್ನಿ

ದೇಶದ ಆರ್ಥಿಕತೆ ಕಳೆದ ಐದಾರು ವರ್ಷಗಳಲ್ಲೇ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ಆರ್ಥಿಕತೆಯ ಜಿಡಿಪಿ ಎಂದರೆ ಖಾಸಗಿ ಬಳಕೆ ವೆಚ್ಚ, ಹೂಡಿಕೆ, ಸರ್ಕಾರಿ ವೆಚ್ಚ ಮತ್ತು ನಿವ್ವಳ ರಫ್ತು (ರಫ್ತು ಮೈನಸ್ ಆಮದು). ಜಿಡಿಪಿಯನ್ನು ರೂಪಿಸುವ ಈ ನಾಲ್ಕು ಒಳಹರಿವುಗಳಲ್ಲಿ ಪ್ರತಿಯೊಂದರ ಸ್ಥಿತಿಯ ಬಗ್ಗೆ ಹೇಳುವ ಹೆಚ್ಚಿನ ಆವರ್ತನ ಆರ್ಥಿಕ ಸೂಚಕಗಳು ಇವೆ. ಆಟೊಮೊಬೈಲ್, ರಿಯಲ್ ಎಸ್ಟೇಟ್, ಎಫ್ಎಂಸಿಜಿ, ಮಾರುಕಟ್ಟೆ ಕುಸಿತ ಕಾಣುತ್ತಿದೆ. ಇನ್ನೊಂದೆಡೆ ಚಿನ್ನ ಬೆಳ್ಳಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಹಾಗಿದ್ದರೆ ಮಂದಗತಿಯ ಆರ್ಥಿಕ ಬೆಳವಣಿಗೆಗೆ ಕಾರಣಗಳೇನು ಎಂಬುದನ್ನು ನೋಡಲುಈ ಆರ್ಥಿಕ ಸೂಚಕಗಳ ಸರಣಿಯನ್ನು ನೋಡೋಣ ಬನ್ನಿ..

ಆಟೋ ವಲಯ

ಆಟೋ ವಲಯ

20 ವರ್ಷಗಳಲ್ಲಿಯೇ ಆಟೋಮೊಬೈಲ್ ವಲಯವು ತನ್ನ ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಾಹನ ವಲಯದಲ್ಲಿ ಸುಮಾರು 2.30 ಲಕ್ಷ ಉದ್ಯೋಗಗಳು ಕಳೆದುಹೋಗಿವೆ ಎಂದು ವರದಿಗಳು ತಿಳಿಸಿವೆ.
ಆದರೆ ಆಳವಾದ ಸಮಸ್ಯೆಯನ್ನು ಸೂಚಿಸುವ ಸಂಗತಿಯೆಂದರೆ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಟರರ್ (ಸಿಯಾಮ್) ಇತ್ತೀಚಿನ ದಿನಗಳಲ್ಲಿ 300 ಮಾರಾಟಗಾರರನ್ನು ಸ್ಥಗಿತಗೊಳಿಸಿದ್ದಾರೆ ಎಂದು ವರದಿ ಮಾಡಿದೆ. ಕಾರುಗಳು, ಟ್ರಾಕ್ಟರುಗಳು, ದ್ವಿಚಕ್ರ ವಾಹನಗಳ ಮಾರಾಟ ಗಣನೀಯವಾಗಿ ಕುಸಿದಿದೆ. ಆಟೋ ಕಾಂಪೊನೆಂಟ್ ಉತ್ಪಾದನಾ ಉದ್ಯಮದಲ್ಲಿ ಸುಮಾರು 10 ಲಕ್ಷ ಉದ್ಯೋಗಗಳಿಗೆ ಹೊಡೆತ ಬಿದ್ದಿದೆ ಎಂದು ಸಿಯಾಮ್ ತಿಳಿಸಿದೆ. ಕಾರು ಮಾರಾಟ ಶೇ. 23.3ರಷ್ಟು ಕುಸಿದಿದೆ.
ದ್ವಿಚಕ್ರ ವಾಹನ ಮಾರಾಟ:
ಕಾರು ಮಾರಾಟದಷ್ಟು ಕೆಟ್ಟದಾಗಿ ಕಕುಸಿದಿಲ್ಲ. ಏಪ್ರಿಲ್ ಮತ್ತು ಜೂನ್ 2019 ರ ನಡುವೆ ದ್ವಿಚಕ್ರ ವಾಹನ ಮಾರಾಟವು ಶೇ.11.7ರಷ್ಟು ಕುಗ್ಗಿದೆ. ಹಣಕಾಸಿನ ಬಿಕ್ಕಟ್ಟಿನ ಪ್ರಾರಂಭದ ನಂತರ, ದ್ವಿಚಕ್ರ ವಾಹನಗಳ ಮಾರಾಟವು 2008 ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅತಿದೊಡ್ಡ ಪ್ರಮಾಣದಲ್ಲಿ ಶೇ. 14.8ರಷ್ಟು ಕುಗ್ಗಿದೆ.
ಟ್ರ್ಯಾಕ್ಟರ್ ಮಾರಾಟ:
ಗ್ರಾಮೀಣ ಬೇಡಿಕೆಯ ಉತ್ತಮ ಸೂಚಕ, 2019 ರ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಟ್ರಾಕ್ಟರ್ ಮಾರಾಟವು ಶೇ.14.1ರಷ್ಟು ಕುಸಿದಿದೆ. ಇದು ಸುಮಾರು ನಾಲ್ಕು ವರ್ಷಗಳಲ್ಲಿಯೇ ಗರಿಷ್ಠ ಕುಸಿತವಾಗಿದೆ.

ರಿಯಲ್ ಎಸ್ಟೇಟ್

ರಿಯಲ್ ಎಸ್ಟೇಟ್

ರಿಯಲ್ ಎಸ್ಟೇಟ್ ಉದ್ಯಮವು ಭಾರತದ ಆರ್ಥಿಕತೆಯ ಂಏಲೆ ಭಾರೀ ಪ್ರಭಾವ ಬಿರುತ್ತದೆ. ಇದು ಸುಮಾರು 250 ಪೂರಕ ಕೈಗಾರಿಕೆಗಳೊಂದಿಗೆ ಸಂಪರ್ಕ ಹೊಂದಿದೆ. ಇಟ್ಟಿಗೆಗಳು, ಸಿಮೆಂಟ್, ಉಕ್ಕು, ಪೀಠೋಪಕರಣಗಳು, ವಿದ್ಯುತ್, ಬಣ್ಣಗಳು ಇತ್ಯಾದಿ. ಈ ವಲಯದಲ್ಲಿ ಉತ್ಕರ್ಷ ಅಥವಾ ಕುಸಿತ ಇದ್ದರೆ ಅವೆಲ್ಲದರ ಮೇಲೆ ಪರಿಣಾಮ ಬೀರುತ್ತದೆ.
ಕಳೆದ ಒಂದು ವರ್ಷದಲ್ಲಿ ಮಾರಾಟವಾಗದ ಮನೆಗಳ ಪ್ರಮಾಣವು ಪ್ರಮು ನಗರಗಳಲ್ಲಿ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.

ನಿಧಾನಗತಿಯಲ್ಲಿ ಎಫ್‌ಎಂಸಿಜಿ

ನಿಧಾನಗತಿಯಲ್ಲಿ ಎಫ್‌ಎಂಸಿಜಿ

ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (ಎಫ್‌ಎಂಸಿಜಿ) ಕಂಪನಿಗಳು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪರಿಮಾಣದ ಬೆಳವಣಿಗೆಯಲ್ಲಿ ಕುಸಿತವನ್ನು ವರದಿ ಮಾಡಿವೆ.
ಗ್ರಾಮೀಣ ಭಾರತದಲ್ಲಿ ಎಫ್‌ಎಂಸಿಜಿಗೆ ಬೇಡಿಕೆ ನಗರ ಬೇಡಿಕೆಯ 1.5 ಪಟ್ಟು ಹೆಚ್ಚುತ್ತಿದೆ ಎಂದು ವರದಿಗಳು ತಿಳಿಸಿವೆ. ಗ್ರಾಮೀಣ ಬೇಡಿಕೆ ನಗರ ಬೆಳವಣಿಗೆಯ ಮಟ್ಟಕ್ಕೆ ಕೆಳಗಿದೆ.
ಎಫ್‌ಎಂಸಿಜಿ ಪ್ರಮುಖ ಹಿಂದೂಸ್ತಾನ್ ಲಿವರ್ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 5.5 ರಷ್ಟು ಬೆಳವಣಿಗೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 12ರಷ್ಟಿತ್ತು.

ಬ್ಯಾಂಕ್ ಚಿಲ್ಲರೆ ಸಾಲ

ಬ್ಯಾಂಕ್ ಚಿಲ್ಲರೆ ಸಾಲ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 2019 ರ ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಬ್ಯಾಂಕುಗಳ ಚಿಲ್ಲರೆ ಸಾಲ ಶೇ. 16.6ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 17.9ರಷ್ಟು ಏರಿಕೆ ಕಂಡಿದ್ದರು ಬೆಳವಣಿಗೆಯಲ್ಲಿ ಅಲ್ಪ ಕುಸಿತ ಕಂಡುಬಂದಿದೆ.
2019ರ ಏಪ್ರಿಲ್‌-ಜೂನ್‌ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಚಿಲ್ಲರೆ ಸಾಲದ ವಿತರಣೆ ಶೇ.16.6ರಷ್ಟಿತ್ತು. 2018ರ ಇದೇ ಅವಧಿಯಲ್ಲಿ ಶೇ. 17.9ರಷ್ಟಿತ್ತು.

ವಸತಿ ಮಾರಾಟ

ವಸತಿ ಮಾರಾಟ

ರಿಯಲ್ ಎಸ್ಟೇಟ್ ಸಂಶೋಧನಾ ಕಂಪನಿ ಲಿಯಾಸೆಸ್ ಫೋರಸ್ ಪ್ರಕಾರ, ಭಾರತದ ಅಗ್ರ 30 ನಗರಗಳಲ್ಲಿ ಮಾರ್ಚ್ 2019 ರ ಹೊತ್ತಿಗೆ 1.28 ಮಿಲಿಯನ್ ಮಾರಾಟವಾಗದ ಮನೆ/ಫ್ಲ್ಯಾಟ್ ಹೊಂದಿದ್ದವು. ಇದು ಮಾರ್ಚ್ 2018 ರಿಂದ ಶೇ. 7ರಷ್ಟು ಹೆಚ್ಚಾಗಿದೆ.

ವಿದೇಶಿ ನೇರ ಹೂಡಿಕೆ

ವಿದೇಶಿ ನೇರ ಹೂಡಿಕೆ

2018-19ರಲ್ಲಿ ಕಳೆದ 6 ವರ್ಷಗಳಲ್ಲಿ ಮೊದಲ ಬಾರಿಗೆ ವಿದೇಶಿ ನೇರ ಬಂಡವಾಳ ಹೂಡಿಕೆಯು ಕುಸಿತ ಕಂಡಿದೆ. ಮುಖ್ಯವಾಗಿ ದೂರಸಂಪರ್ಕ, ಔಷಧ, ವಿದ್ಯುತ್‌ ಕ್ಷೇತ್ರ ಗಣನೀಯವಾಗಿ ಕುಸಿದಿದೆ. 2012-13ರ ನಂತರ ನಿರಂತರ ಏರುತ್ತಲೇ ಇದ್ದ ವಿದೇಶಿ ನೇರ ಬಂಡವಾಳ ಹೂಡಿಕೆಯ ಹರಿವು 2017-18ರಲ್ಲಿ ಭಾರೀ ಏರಿಕೆ ದಾಖಲಿಸಿತ್ತು. ಆದರೆ 2018-19ರಲ್ಲಿ 3.06 ಲಕ್ಷ ಕೋಟಿ ರೂ. ಲಭಿಸಿದ್ದು, ಶೇ. 1 ಇಳಿಕೆ ಕಂಡಿದೆ. ದುರದೃಷ್ಟವಶಾತ್, ಮುಂದಿನ ದಿನಗಳಲ್ಲಿ ಹೂಡಿಕೆ ಉತ್ತಮವಾಗಿ ಕಾಣುತ್ತಿಲ್ಲ.

ಷೇರುಪೇಟೆ ಕುಸಿತ

ಷೇರುಪೇಟೆ ಕುಸಿತ

ಷೇರು ಮಾರುಕಟ್ಟೆಯು 2019ರಲ್ಲಿ ಹೂಡಿಕೆದಾರರಿಗೆ ಭಾರಿ ದುಬಾರಯಾಗಿ ಪರಿಣಮಿಸಿದೆ. ಕೇಂದ್ರ ಬಜೆಟ್‌ನಲ್ಲಿ ವಿದೇಶಿ ಹೂಡಿಕೆದಾರರಿಗೆ ಭಾರತೀಯ ಷೇರು, ಈಕ್ವಿಟಿ ಮಾರುಕಟ್ಟೆಯಲ್ಲಿನ ಆದಾಯಕ್ಕೆ ಸಂಬಂಧಿಸಿ ತೆರಿಗೆ ಹೆಚ್ಚಳದ ಪ್ರಸ್ತಾಪವನ್ನು ಕೇಂದ್ರ ಬಜೆಟ್‌ನಲ್ಲಿ ಇಡಲಾಗಿತ್ತು. ಅತಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ ನಂತರ ಷೇರು ಪೇಟೆ ನಷ್ಟ ಕಂಡಿದೆ.

ಖರ್ಚು ಮತ್ತು ನಿವ್ವಳ ರಫ್ತು

ಖರ್ಚು ಮತ್ತು ನಿವ್ವಳ ರಫ್ತು

ಸರ್ಕಾರದ ಖರ್ಚು ಭಾರತೀಯ ಆರ್ಥಿಕತೆಯ ಸುಮಾರು ಶೇ. 10-11 ರಷ್ಟಿದೆ (ಪ್ರಸ್ತುತ ಪರಿಭಾಷೆಯಲ್ಲಿ, ಹಣದುಬ್ಬರಕ್ಕೆ ಹೊಂದಾಣಿಕೆ ಮಾಡದೆ). ಕಳೆದ ಎರಡು ಹಣಕಾಸು ವರ್ಷಗಳಲ್ಲಿ, ಸರ್ಕಾರದ ಖರ್ಚಿನ ಬೆಳವಣಿಗೆಯು ಶೇ. 19.1 ಮತ್ತು ಶೇ. 13.2 ರಷ್ಟಿತ್ತು. ಇದು 2008-09 ಮತ್ತು 2009-10ರ ಆರ್ಥಿಕ ಬಿಕ್ಕಟ್ಟಿನ ವರ್ಷಗಳ ನಂತರದ ಗರಿಷ್ಠ ಮತ್ತು ಆರ್ಥಿಕ ಬೆಳವಣಿಗೆಯನ್ನು ಸ್ವಲ್ಪ ಮಟ್ಟಿಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು. 2019-20ರಲ್ಲಿ ಇದು ಭಿನ್ನವಾಗಿ ಕಾಣುತ್ತದೆ? ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು, ಸರ್ಕಾರವು ಹೆಚ್ಚು ಖರ್ಚು ಮಾಡಬೇಕಾಗಿದೆ ಮತ್ತು ಅದಕ್ಕಾಗಿ ತೆರಿಗೆ ಬೆಳವಣಿಗೆ ಮುಖ್ಯವಾಗಿದೆ. ಏಪ್ರಿಲ್ ನಿಂದ ಜೂನ್ 2019 ರವರೆಗೆ ಕೇಂದ್ರ ಸರ್ಕಾರದ ಒಟ್ಟು ತೆರಿಗೆ ಆದಾಯ ಕೇವಲ ಶೇ. 1.4ರಷ್ಟು ಏರಿಕೆಯಾಗಿ 4 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು ತೆರಿಗೆ ಆದಾಯ ಶೇ. 22.1 ರಷ್ಟು ಏರಿಕೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+