ಟೆಲಿಕಾಂ, ಟೆಲಿವಿಷನ್ ವಲಯದಲ್ಲಿ ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಪರಿಚಯಿಸುವುದರಲ್ಲಿ ಜಿಯೋ ಎತ್ತಿದ ಕೈ! ಇದೀಗ ಜಿಯೋ ಟಿವಿ ಅಂಡ್ರಾಯ್ಡ್ ನಲ್ಲಿ Dark Mode ಅಪ್ಲಿಕೇಷನ್ ಸೇರಿಸಲಾಗಿದೆ.
ಟೆಲಿಕಾಂ, ಟೆಲಿವಿಷನ್ ವಲಯದಲ್ಲಿ ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಪರಿಚಯಿಸುವುದರಲ್ಲಿ ಜಿಯೋ ಎತ್ತಿದ ಕೈ! ಇದೀಗ ಜಿಯೋ ಟಿವಿ ಅಂಡ್ರಾಯ್ಡ್ ನಲ್ಲಿ Dark Mode ಅಪ್ಲಿಕೇಷನ್ ಸೇರಿಸಲಾಗಿದೆ. ಜಿಯೋ ಸಿನೆಮಾಗೆ ಡಾರ್ಕ್ ಮೋಡ್ ಪರಿಚಯಿಸಿದ ನಂತರ ತುಂಬಾ ದಿನಗಳ ನಂತರ ಜಿಯೋ ಟಿವಿ ಡಾರ್ಕ್ ಮೋಡ್ ಇತ್ತೀಚಿನ ಸೇರ್ಪಡೆಯಾಗಿದೆ.
ನವೀಕರಣಗೊಂಡ ಜಿಯೋ ಟಿವಿ ಅಪ್ಲಿಕೇಶನ್ ಕೆಲವು ಯುಐ ಸುಧಾರಣೆಗಳನ್ನು ಒಳಗೊಂಡಿದೆ.
ಪ್ಲೇ ಸ್ಟೋರ್ ಮೂಲಕ ಅಪ್ಡೇಟ್
ಗ್ರಾಹಕರು ಪ್ಲೇ ಸ್ಟೋರ್ ನಲ್ಲಿರುವ ‘what's new' ಸೆಕ್ಷನ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಡಾರ್ಕ್ ಮೋಡ್ ಇನ್ನೂ ಅಪ್ಡೇಟ್ ಮಾಡದಿದ್ದರೆ ಪ್ಲೇ ಸ್ಟೋರ್ ಗೆ ಹೋಗಿ ಅಪ್ಡೇಟ್ ಮಾಡಿಕೊಳ್ಳಿ. ನೀವು ಅಪ್ಡೇಟ್ ಮಾಡುತ್ತಿದ್ದಂತೆ ಡಾರ್ಕ್ ಮೋಡ್ ಸಂದೇಶ ಬರುತ್ತದೆ. ಒಂದು ವೇಳೆ ಅಪ್ಡೇಟ್ ನೋಟಿಫಿಕೇಶನ್ ಬಂದಿಲ್ಲವೆಂದರೆ ಸೆಟ್ಟಿಂಗ್ ನಲ್ಲಿ ಈ ಆಯ್ಕೆಯನ್ನು ಅಪ್ಡೇಟ್ ಮಾಡಬೇಕಾಗುತ್ತದೆ.
ಜಿಯೋ ಆಪ್ ವರ್ಷನ್ 5.8.0
ನವೀಕರಿಸಿದ ಜಿಯೋ ಆಪ್ ವರ್ಷನ್ 5.8.0 ನಿಮಗೆ ಡಾರ್ಕ್ ಮೋಡ್ ಸೌಲಭ್ಯ ಒದಗಿಸುತ್ತದೆ. ಇದನ್ನು ಪರದೆಯ ಮೇಲಿನ ಎಡ ಮೂಲೆಯಲ್ಲಿರುವ ಬಟನ್ ಟ್ಯಾಪ್ ಮಾಡಿ ನಂತರ ಸೆಟ್ಟಿಂಗ್ ಆಯ್ಕೆ ಮೂಲಕ ಸಕ್ರಿಯಗೊಳಿಸಬಹುದು. ಸಕ್ರಿಯಗೊಂಡ ನಂತರ, ಅದು ಬೂದು ಬಣ್ಣಕ್ಕೆ ತಿರುಗಿಸುತ್ತದೆ ಮತ್ತು ಫಾಂಟ್ ಬಿಳಿ ಬಣ್ಣಕ್ಕೆ ಬದಲಾಗುತ್ತದೆ. ಇದು ಡೀಫಾಲ್ಟ್ ಮೋಡ್‌ನಲ್ಲಿ ಕಪ್ಪು ಬಣ್ಣದಲ್ಲಿರುತ್ತದೆ.
ಜಿಯೋ ಟಿವಿ ವೈಶಿಷ್ಟ್ಯ
ಈ ಹಿಂದೆ ಜಿಯೋ ಟಿವಿ ಆಪ್ ಅಪ್‌ಡೇಟ್‌ನಲ್ಲಿ ಪಿಕ್ಚರ್-ಇನ್-ಪಿಕ್ಚರ್ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಬಳಕೆದಾರರು ಈ ವೈಶಿಷ್ಟ್ಯದ ಮೂಲಕ ಜಿಯೋ ಟಿವಿಯಲ್ಲಿ ವಿಡಿಯೊ, ಸಿನೆಮಾ, ಟಿವಿ ಕಾರ್ಯಕ್ರಮಗಳನ್ನು ನೋಡುವಾಗ ಟೆಕ್ಸ್ಟಿಂಗ್, ಬ್ರೌಸಿಂಗ್, ಟೈಪಿಂಗ್ ಮಾಡಲು ಅವಕಾಶವಿತ್ತು. ಜಿಯೋ ಟಿವಿ ಅಪ್ಲಿಕೇಶನ್ ಇಂಗ್ಲಿಷ್, ಹಿಂದಿ, ಬಂಗಾಳಿ, ಮಲಯಾಳಂ ಭಾಷೆಗಳಲ್ಲಿ 626 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು.


Click it and Unblock the Notifications