For Quick Alerts
ALLOW NOTIFICATIONS  
For Daily Alerts

ಪುರುಷರ 'ಅಂದರ್ ಕೀ ಬಾತ್'; ಒಳ ಚಡ್ಡಿ ಮಾರಾಟ ಕಂಪೆನಿಗಳು ನಷ್ಟದಲ್ಲಿ

By ಅನಿಲ್ ಆಚಾರ್
|

ಇದು ಪುರುಷರ ವಿಷಯ. ಆರ್ಥಿಕ ಸ್ಥಿತಿ ಅದ್ಯಾವ ಪರಿ ಹೊಡೆತ ತಿಂದಿದೆ ಅಂದರೆ, ಪುರುಷರ ಒಳ ಚಡ್ಡಿಗಳ ಮಾರಾಟ ಪ್ರಮಾಣದಲ್ಲೂ ಇಳಿಕೆ ಆಗಿದೆ ಎಂಬ ಸಂಗತಿ ಬಯಲಾಗಿದೆ. ಆಲನ್ ಗ್ರೀನ್ ಸ್ಪಾನ್ ಈ ವಿಚಾರ ತಿಳಿಸಿದ್ದು, ಜೂನ್ ತ್ರೈ ಮಾಸಿಕದಲ್ಲಿ ಒಳ ಉಡುಪುಗಳ ಮಾರಾಟದಲ್ಲಿ ಭಾರೀ ಇಳಿಕೆ ಆಗಿದೆಯಂತೆ. 'ಪುರುಷರ ಒಳಚಡ್ಡಿಗಳ ಸೂಚ್ಯಂಕ'ದ ಪ್ರಕಾರ, ಭಾರತದ ಗ್ರಾಹಕರು ಚಡ್ಡಿ ಖರೀದಿಗೂ ಬಜೆಟ್ ಸಮಸ್ಯೆ ಎದುರಿಸುತ್ತಿದ್ದಾರೆ.

 

ಅಮೆರಿಕ ಫೆಡರಲ್ ರಿಸರ್ವ್ ಮಂಡಳಿಯ ಮಾಜಿ ಅಧ್ಯಕ್ಷ ಗ್ರೀನ್ ಸ್ಪಾನ್ ಹೇಳುವ ಪ್ರಕಾರ: ಪುರುಷರ ಒಳಚಡ್ಡಿಗಳ ಮಾರಾಟದಲ್ಲಿ ಇಳಿಕೆ ಆಗಿದೆ ಅಂದರೆ ಒಟ್ಟಾರೆ ಆರ್ಥಿಕತೆಯೇ ಬಹಳ ಕೆಟ್ಟ ಸ್ಥಿತಿಯಲ್ಲಿದೆ. ಇದರ ವಿರುದ್ಧವಾದರೆ, ಅಂದರೆ ಮಾರಾಟದಲ್ಲಿ ಹೆಚ್ಚಳವಾದರೆ ಆರ್ಥಿಕತೆ ಚೆನ್ನಾಗಿದೆ ಎಂಬ ಸೂಚನೆ.

ಒಳಉಡುಪುಗಳನ್ನು ಮಾರಾಟ ಮಾಡುವ ಟಾಪ್ ನಾಲ್ಕು ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಈ ದಶಕದಲ್ಲೇ ಅತ್ಯಂತ ದುರ್ಬಲವಾಗಿದೆ. ಪೇಜ್ ಇಂಡಸ್ಟ್ರೀಸ್- ಇದು ಜಾಕಿ ಬ್ರ್ಯಾಂಡ್ ನ ಒಳ ಉಡುಪುಗಳನ್ನು ಮಾರಾಟ ಮಾಡುತ್ತದೆ. ಇದರ ಮಾರಾಟ 2% ಮಾತ್ರ ಬೆಳವಣಿಗೆ ಆಗಿದೆ. 2008ರಿಂದ ಈಚೆಗೆ ಈಗಿನ ವಿಸ್ತರಣೆ ಆತ್ಯಂತ ನಿಧಾನವಾದದ್ದು. ಇನ್ನು ಡಾಲರ್ ಇಂಡಸ್ಟೀಸ್ 4% ಹಾಗೂ ವಿಐಪಿ ಕ್ಲಾಥಿಂಗ್ ಮಾರಾಟ 20% ಕುಸಿದಿದೆ. ಲಕ್ಸ್ ಇಂಡಸ್ಟ್ರೀಸ್ ಮಾರಾಟ ಕೂಡ ಅಷ್ಟೇನೂ ಸಮಾಧಾನವಾಗಿಲ್ಲ.

ಅಗತ್ಯ ವಸ್ತುಗಳ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ

ಅಗತ್ಯ ವಸ್ತುಗಳ ಖರೀದಿಯನ್ನೇ ಕಡಿಮೆ ಮಾಡಿದ್ದಾರೆ

"ಈಗಿನ ಮಾರುಕಟ್ಟೆ ಸ್ಥಿತಿ ಖಂಡಿತಾ ಉತ್ತಮವಾಗಿಲ್ಲ" ಎಂದು ಪೇಜ್ ಇಂಡಸ್ಟ್ರೀಸ್ ನ ಸಿಇಒ ವೇದ್ ಜೀ ಟಿಕು ಅಭಿಪ್ರಾಯ ಪಡುತ್ತಾರೆ. ಇದೇ ಮೊದಲ ಬಾರಿಗೆ ಕಂಪೆನಿಯು 2% ಮಾರಾಟ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇದು ಒಟ್ಟಾರೆಯಾಗಿ ಎಲ್ಲ ವ್ಯಾಪಾರದಲ್ಲೂ ಕಾಣಬಹುದು. ಎಲ್ಲ ಮಾರುಕಟ್ಟೆ ಸ್ಥಿತಿಯೂ ಆತಂಕಕಾರಿಯಾಗಿಯೇ ಇದೆ ಎಂಬುದು ಅವರ ಸ್ಪಷ್ಟ ಅಭಿಪ್ರಾಯ. ಹೊಸದಾಗಿ ಖರೀದಿಗೆ ಮುಂದಾಗದ ಭಾರತೀಯ ಗ್ರಾಹಕರ ಇಂದಿನ ಸ್ಥಿತಿಗೆ ಕಾರಣ ಖರ್ಚು ಮಾಡಬಹುದಾದ ಆದಾಯ ಎಂದು ಭಾವಿಸುವ ಪ್ರಮಾಣದಲ್ಲಿನ ಇಳಿಕೆ. ಆ ಕಾರಣಕ್ಕೆ ಅಗತ್ಯ ವಸ್ತುಗಳ ಖರೀದಿಯಲ್ಲೂ ಕಡಿಮೆ ಮಾಡಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಗ್ರಾಮೀಣ ಆರ್ಥಿಕತೆಗೆ ಬಲವಾದ ಹಿಂಜರಿಕೆ ಹೊಡೆತ
 

ಗ್ರಾಮೀಣ ಆರ್ಥಿಕತೆಗೆ ಬಲವಾದ ಹಿಂಜರಿಕೆ ಹೊಡೆತ

2010ರಿಂದ 2014ರ ಮಧ್ಯೆ ಇದ್ದ ಖರ್ಚು ಮಾಡಬಹುದಾದ ತಲಾದಾಯ ಬೆಳವಣಿಗೆ ದರ 13.3%. ಅದೇ 2015ರಿಂದ 2018ರ ಮಧ್ಯೆ ಪ್ರಮಾಣವು 9.5%ಗೆ ಬದಲಾಗಿದೆ. ಅಷ್ಟೇ ಅಲ್ಲ, ಮಾರುಕಟ್ಟೆ ಸಂಶೋಧಕ ನೀಲ್ಸನ್ 2019ರಲ್ಲಿ ಎಫ್ ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಬೆಳವಣಿಗೆ 9ರಿಂದ 10% ಆಗಬಹುದು ಎಂದಿದ್ದಾರೆ. ಈ ಹಿಂದೆ ಆ ಪ್ರಮಾಣ 11ರಿಂದ 12% ಆಗಬಹುದು ಎಂದು ಅಂದಾಜು ಮಾಡಲಾಗಿತ್ತು. ಆದರೆ ಗ್ರಾಮೀಣ ಆರ್ಥಿಕ ಸ್ಥಿತಿ ಹಿಂಜರಿತದ ಹೊಡೆತ ಬಲವಾಗಿ ಬಿದ್ದಿದೆ. ಪುರುಷರ ಒಳಉಡುಪು ಮಾರುಕಟ್ಟೆಯಲ್ಲಿ ಶೇಕಡಾ ಇಪ್ಪತ್ತರಷ್ಟು ಪೇಜ್ ಇಂಡಸ್ಟ್ರೀಸ್ ಇದೆ. ಫಂಡ್ ಮ್ಯಾನೇಜರ್ ಗಳ ಪಾಲಿಗೆ ಈ ಕಂಪೆನಿ ಬಹಳ ಅಚ್ಚುಮೆಚ್ಚು. 2013ರಿಂದ 2016ರ ಮಧ್ಯೆ ನಿಧಾನಗತಿಯ ಪ್ರಗತಿ ಹೊರತಾಗಿಯೂ, ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೂ, ಅಪನಗದೀಕರಣ ಹಾಗೂ ಜಿಎಸ್ ಟಿ ಜಾರಿಯಿಂದ ಸರಕು ಖಾಲಿ ಮಾಡಬೇಕಾದ ಸ್ಥಿತಿಯಲ್ಲೂ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳ ಇತ್ತು.

ಬೆಲೆಗಿಂತ ಬ್ರ್ಯಾಂಡ್ ಬಗ್ಗೆ ಯೋಚನೆ ಮಾಡುವ ಕಾಲ

ಬೆಲೆಗಿಂತ ಬ್ರ್ಯಾಂಡ್ ಬಗ್ಗೆ ಯೋಚನೆ ಮಾಡುವ ಕಾಲ

ಗ್ರಾಮೀಣ ಆರ್ಥಿಕತೆ ಮೇಲಿನ ಒತ್ತಡ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿರುವ ಎನ್ ಪಿಎ ಪ್ರಮಾಣದಿಂದ ಸಾಲ ದೊರೆಯದಿರುವುದು, ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿ (ಎನ್ ಬಿಎಫ್ ಸಿ) ಹೊಡೆತ ಬಹಳ ದೊಡ್ಡ ಹಿನ್ನಡೆ ತಂದಿದೆ. ಜತೆಗೆ ನಿರುದ್ಯೋಗ ಪ್ರಮಾಣದಲ್ಲಿನ ಹೆಚ್ಚಳ ಆತಂಕಕಾರಿಯಾಗಿದೆ. ಈ ಎಲ್ಲವೂ ಗ್ರಾಹಕರು ಖರ್ಚು ಹೆಚ್ಚು ಮಾಡದಿರುವುದಕ್ಕೆ ಕಾರಣವಾಗಿದೆ. ಇನ್ನು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಸಂಸ್ಥೆಗಳಿಗೆ (ಎಂಎಸ್ ಎಂಇ/MSME) ಹಣಕಾಸು ನೆರವು ದೊರೆಯದಿರುವುದು ಪರಿಸ್ಥಿತಿ ಇನ್ನಷ್ಟು ಹಾಳಾಗಲು ಕಾರಣವಾಗಿದೆ. ಒಳಉಡುಪುಗಳ ವಿಭಾಗದ ಮಾರಾಟದಲ್ಲಿ ಮಾತ್ರ ಒಟ್ಟಾರೆ ಅಂದಾಜು 27,931 ಕೋಟಿ ಇತ್ತು. ಒಟ್ಟಾರೆ ಬಟ್ಟೆ ಮಾರಾಟದ 10% ಹಾಗೂ ಇದು ವರ್ಷಕ್ಕೆ 10% ನಂತೆ ಏರಿಕೆ ಆಗುತ್ತಲೇ ಹೋದರೆ ಮುಂದಿನ ಹತ್ತು ವರ್ಷದೊಳಗೆ 74,258 ಕೋಟಿ ತಲುಪಬಹುದು ಎಂಬ ಅಂದಾಜಿತ್ತು. ತಜ್ಞರ ಅಭಿಪ್ರಾಯದ ಪ್ರಕಾರ, ಒಳಉಡುಪುಗಳು ಬಗ್ಗೆ ಫ್ಯಾಷನ್ ಎಂದು ಆಲೋಚಿಸುವ ವಿಧಾನ ಹೆಚ್ಚಾಗಿದೆ. ಜನರು ಬೆಲೆಗಿಂತ ಹೆಚ್ಚಾಗಿ ಬ್ರ್ಯಾಂಡ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.

ಷೇರು ಬೆಲೆಗಳಲ್ಲಿ ಕುಸಿತ ಕಂಡಿದೆ

ಷೇರು ಬೆಲೆಗಳಲ್ಲಿ ಕುಸಿತ ಕಂಡಿದೆ

ಈಗ ಆಗಿರುವ ಹಿಂಜರಿತದಿಂದ ಒಳಉಡುಪುಗಳನ್ನು ಮಾರಾಟ ಮಾಡುವ ಕಂಪೆನಿಗಳ ಮೌಲ್ಯಮಾಪನದ ಮೇಲೆ ಪರಿಣಾಮ ಆಗಿದೆ. ಕಳೆದ ವರ್ಷದಿಂದ ಪೇಜ್ ಹಾಗೂ ಲಕ್ಸ್ ಇಂಡಸ್ಟ್ರೀಸ್ ಷೇರು ಬೆಲೆ 46% ಕುಸಿದಿದೆ. ಡಾಲರ್ ಇಂಡಸ್ಟ್ರೀಸ್ ಷೇರು 33% ಇಳಿಕೆಯಾಗಿದೆ. ವಿಐಪಿ ಕ್ಲಾಥಿಂಗ್ 76% ಕುಸಿತ ಕಂಡಿದೆ. ಕ್ರೆಡಿಟ್ ಸುಸ್ಸೆ ಪೇಜ್ ಇಂಡಸ್ಟ್ರೀಸ್ ನ ಆದಾಯವನ್ನು 9ರಿಂದ 11% ಇಳಿಕೆ ಆಗಬಹುದು ಎಂದು ಅಂದಾಜಿಸಿದೆ. ಇನ್ನು ಕೊಟಕ್ ಇನ್ ಸ್ಟಿಟ್ಯೂಷನಲ್ ಈಕ್ವಿಟೀಸ್ ಆದಾಯದ ಪ್ರಮಾಣ 5ರಿಂದ 6% ಇಳಿಕೆ ಆಗಬಹುದು ಎಂದು ಅಂದಾಜಿಸಿದೆ. ಜೂನ್ ತ್ರೈ ಮಾಸಿಕದ ಫಲಿತಾಂಶದ ಆಧಾರದಲ್ಲಿ ಈ ಕಡಿತ ಮಾಡಲಾಗಿದೆ.

English summary

Men Inner Ware Sales Drop Sharply In June Quarter

Due to slow down in economy even men inner ware sales also drop sharply in June quarter. Here is an interesting numbers.
Story first published: Monday, August 19, 2019, 16:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X