For Quick Alerts
ALLOW NOTIFICATIONS  
For Daily Alerts

ಟಾಟಾ ಸ್ಕೈ ಎಚ್‌ಡಿ ಸೆಟ್ ಟಾಪ್ ಬಾಕ್ಸ್ ಬೆಲೆ ಕಡಿತ, ಬೆಲೆ ಎಷ್ಟು ಗೊತ್ತೆ?

ಡಿಟಿಎಚ್ ಟಿವಿ ಗ್ರಾಹಕರನ್ನು ಆಕರ್ಷಿಸಲು ಬೇರೆ ಬೇರೆ ಕಂಪನಿಗಳು ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಟಾಟಾ ಸ್ಕೈ ಕಳೆದ ಕೆಲವು ತಿಂಗಳುಗಳಿಂದ ಗ್ರಾಹಕ ಕೇಂದ್ರಿತ ಯೋಜನೆಗಳತ್ತ ಚಿತ್ತ ಹರಿಸಿದೆ.

|

ಡಿಟಿಎಚ್ ಟಿವಿ ಗ್ರಾಹಕರನ್ನು ಆಕರ್ಷಿಸಲು ಬೇರೆ ಬೇರೆ ಕಂಪನಿಗಳು ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಟಾಟಾ ಸ್ಕೈ ಕಳೆದ ಕೆಲವು ತಿಂಗಳುಗಳಿಂದ ಗ್ರಾಹಕ ಕೇಂದ್ರಿತ ಯೋಜನೆಗಳತ್ತ ಚಿತ್ತ ಹರಿಸಿದೆ. ಏಕೆಂದರೆ ಟಾಟಾ ಸ್ಕೈ ಅಪರೇಟರ್ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಉದ್ಯಮದಲ್ಲಿ ಮುಂಚೂಣಿ ಸಂಸ್ಥೆಯಾಗಲು ಪ್ರಯತ್ನಿಸುತ್ತಿದೆ. ಏರ್ಟೆಲ್ ಡಿಜಿಟಲ್ ಟಿವಿ ಎಚ್ಡಿ ಸೆಟ್-ಟಾಪ್ ಬಾಕ್ಸ್ ಬೆಲೆ ಇಳಿಕೆ ಮಾಡಿದ ನಂತರ ಉಳಿದ ಕಂಪನಿಗಳು ಎಚ್ಚೆತ್ತುಕೊಂಡಿವೆ!

ಟಾಪ್ ಬಾಕ್ಸ್ ಬೆಲೆ ಇಳಿಕೆ

ಟಾಪ್ ಬಾಕ್ಸ್ ಬೆಲೆ ಇಳಿಕೆ

ಡಿಟಿಎಚ್ (ಡೈರೆಕ್ಟ್ ಟು ಹೋಮ್) ಸೇವೆ ನೀಡುತ್ತಿರುವ ಟಾಟಾ ಸ್ಕೈ ತನ್ನ ಗ್ರಾಹಕರಿಗೆ ಖುಷಿಯ ಸುದ್ದಿ ನೀಡಿದೆ. ಟಾಟಾ ಸ್ಕೈ ಸೆಟ್ ಆಪ್ ಬಾಕ್ಸ್ ಬೆಲೆಯನ್ನು ರೂ. 400ರಿಂದ ಕಡಿತಗೊಳಿಸಿ ಗ್ರಾಹಕರಿಗೆ ಉಡುಗೊರೆ ನೀಡಿದೆ.‌ ಈಗ ಟಾಟಾ ಸ್ಕೈನ ಎಚ್ ಡಿ ಸೆಟ್ ಟಾಪ್ ಬಾಕ್ಸ್ ಹಳೆಯ ರೂ. ೧೮೦೦ಕ್ಕೆ ಹೋಲಿಸಿದರೆ ಕೇವಲ ರೂ. ೧೪೯೯ಕ್ಕೆ ಸಿಗಲಿದೆ. ಟಾಟಾ ಸ್ಕೈ ಎಸ್‌ಡಿ ಸೆಟ್-ಟಾಪ್ ಬಾಕ್ಸ್ ಇದೀಗ ರೂ. 1,399 ರೂಗಳಲ್ಲಿ ಲಭ್ಯವಿದೆ.

ಏರ್ಟೆಲ್ ಡಿಜಿಟಲ್ ಟಿವಿ ಎಫೆಕ್ಟ್

ಏರ್ಟೆಲ್ ಡಿಜಿಟಲ್ ಟಿವಿ ಎಫೆಕ್ಟ್

ಇನ್ನೊಂದೆಡೆ, ಏರ್ಟೆಲ್ ಡಿಜಿಟಲ್ ಟಿವಿ ಎಚ್ಡಿ ಸೆಟ್-ಟಾಪ್ ಬಾಕ್ಸ್ ಗೆ ರೂ. 769 ಮತ್ತು ಎಸ್ಡಿ ಸೆಟ್-ಟಾಪ್ ಬಾಕ್ಸ್ ಗೆ ರೂ. 569 ಶುಲ್ಕ ವಿಧಿಸುತ್ತದೆ.
ಮೇಲೆ ತಿಳಿಸಿದಂತೆ ಟಾಟಾ ಸ್ಕೈ ಕಂಪನಿಯಿಂದ ಕೇವಲ ಸೆಟ್-ಟಾಪ್ ಬಾಕ್ಸ್ ಶುಲ್ಕಗಳಾಗಿದ್ದು, ಹೊಸ ಟಾಟಾ ಸ್ಕೈ ಸಂಪರ್ಕವನ್ನು ಆಯ್ಕೆ ಮಾಡುವ ಪ್ರತಿಯೊಬ್ಬ ಬಳಕೆದಾರರಿಗೂ ಇನ್ಸ್ಟಾಲೇಷನ್ ಮತ್ತು ಎಂಜಿನಿಯರ್ ಶುಲ್ಕಗಳು ಅನ್ವಯವಾಗುತ್ತವೆ.

ಟಾಟಾ ಸ್ಕೈ ಸೆಟ್-ಟಾಪ್ ಬಾಕ್ಸ್‌ ಹೊಸ ಬೆಲೆ ಕಡಿತ
 
ಟಾಟಾ ಸ್ಕೈ ಸೆಟ್-ಟಾಪ್ ಬಾಕ್ಸ್‌ ಹೊಸ ಬೆಲೆ ಕಡಿತ

ಈ ಹಿಂದೆ, ಟಾಟಾ ಸ್ಕೈ ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ಎಚ್‌ಡಿ ಮತ್ತು ಎಸ್‌ಡಿ ಎರಡು ಸೇವೆಗಳಿಗಾಗಿ ಬೆಲೆ ಕಡಿತವನ್ನು ಪರಿಚಯಿಸಲಾಯಿತು. ಈ ಬೆಲೆ ಕಡಿತವು ಟಾಟಾ ಸ್ಕೈ ಎಸ್‌ಟಿಬಿಗಳ ಎರಡು ಮಾದರಿಗಳ ಬೆಲೆಯನ್ನು ರೂ. 400ಗೆ ಇಳಿಸಿತು. ಇದರರ್ಥ ಟಾಟಾ ಸ್ಕೈ ಎಸ್‌ಟಿಬಿಯ ಎಸ್‌ಡಿ ಸೇವೆ ರೂ. 1,600ಕ್ಕೆ ಲಭ್ಯವಿದೆ. ಆದರೆ ಟಾಟಾ ಸ್ಕೈ ಎಚ್‌ಡಿ ಸೇವೆ ರೂ. 1,800 ಕ್ಕೆ ಲಭ್ಯವಿದೆ. ಆದಾಗ್ಯೂ, ಅದರ ಸೆಟ್-ಟಾಪ್ ಬಾಕ್ಸ್ ಹೊಸ ಬೆಲೆ ಕಡಿತದೊಂದಿಗೆ ಹೊಸ ಚಂದಾದಾರರಿಗೆ ಇನ್ನಷ್ಟು ಕೈಗೆಟುಕುವ ಸೇವೆಗಳನ್ನು ಒದಗಿಸಲು ಆಕರ್ಷಿಸುತ್ತಿದೆ.

Read more about: finance news telecom money
English summary

Tata Sky HD Set-Top Box price slashed, what is new price?

ಡಿಟಿಎಚ್ ಟಿವಿ ಗ್ರಾಹಕರನ್ನು ಆಕರ್ಷಿಸಲು ಬೇರೆ ಬೇರೆ ಕಂಪನಿಗಳು ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಟಾಟಾ ಸ್ಕೈ ಕಳೆದ ಕೆಲವು ತಿಂಗಳುಗಳಿಂದ ಗ್ರಾಹಕ ಕೇಂದ್ರಿತ ಯೋಜನೆಗಳತ್ತ ಚಿತ್ತ ಹರಿಸಿದೆ. ಏಕೆಂದರೆ ಟಾಟಾ ಸ್ಕೈ ಅಪರೇಟರ್ ತನ್ನ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಉದ್ಯಮದಲ್ಲಿ ಮುಂಚೂಣಿ ಸಂಸ್ಥೆಯಾಗಲು ಪ್ರಯತ್ನಿಸುತ್ತಿದೆ. ಏರ್ಟೆಲ್ ಡಿಜಿಟಲ್ ಟಿವಿ ಎಚ್ಡಿ ಸೆಟ್-ಟಾಪ್ ಬಾಕ್ಸ್ ಬೆಲೆ ಇಳಿಕೆ ಮಾಡಿದ ನಂತರ ಉಳಿದ ಕಂಪನಿಗಳು ಎಚ್ಚೆತ್ತುಕೊಂಡಿವೆ!
Story first published: Monday, August 19, 2019, 17:50 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X