For Quick Alerts
ALLOW NOTIFICATIONS  
For Daily Alerts

ಕಾರ್ಪೊರೇಟ್ ತೆರಿಗೆ ಶೇ. 25ರಷ್ಟು ಕಡಿತ: ನಿರ್ಮಲಾ ಸೀತಾರಾಮನ್

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಉದ್ಯಮ ಸ್ನೇಹಿ ವಾತಾವರಣ ಉತ್ತೇಜನಕ್ಕಾಗಿ ಕಾರ್ಪೋರೇಟ್ ತೆರಿಗೆಗಳನ್ನು ಹಂತಹಂತವಾಗಿ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

|

ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಉದ್ಯಮ ಸ್ನೇಹಿ ವಾತಾವರಣ ಉತ್ತೇಜನಕ್ಕಾಗಿ ಕಾರ್ಪೊರೇಟ್ ತೆರಿಗೆಗಳನ್ನು ಹಂತಹಂತವಾಗಿ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಕಾರ್ಪೊರೇಟ್ ತೆರಿಗೆ ಶೇ. 25ರಷ್ಟು ಕಡಿತ: ನಿರ್ಮಲಾ ಸೀತಾರಾಮನ್

ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಅವರು, ರೂ. 400 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಕ್ರಮೇಣ ಶೇ. 25ರಷ್ಟು ಇಳಿಸಲಾಗುವುದು. ಜೊತೆಗೆ ಸಂಪತ್ತು ಸೃಷ್ಟಿಕರ್ತರಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿದ್ದಾರೆ.
ಎರಡನೇ ಅವಧಿಯ ಮೊದಲ ಬಜೆಟ್ ನಲ್ಲಿ ವಾರ್ಷಿಕ ವಹಿವಾಟು ರೂ. 400 ಕೋಟಿ ಹೊಂದಿರುವ ಕಂಪೆನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಶೇ. 25ಕ್ಕೆ ಇಳಿಸಿತ್ತು.
ಕಳೆದ ವರ್ಷ, ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಕಾರ್ಪೋರೇಟ್ ವಹಿವಾಟು ರೂ. 250 ಕೋಟಿ ಹೊಂದಿರುವ ಕಂಪನಿಗಳಿಗೆ ಕಾರ್ಪೊರೇಟ್ ಆದಾಯ ತೆರಿಗೆ ದರವನ್ನು ಶೇ. 25ಕ್ಕೆ ಇಳಿಸಿದ್ದರು.
ಆಗಸ್ಟ್ 15 ರಂದು ಪ್ರಧಾನಿ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸಂಪತ್ತು ಸೃಷ್ಟಿಕರ್ತರ ಪಾತ್ರವನ್ನು ಶ್ಲಾಘಿಸಿ, ಅವರನ್ನು ಅನುಮಾನದಿಂದ ನೋಡಬಾರದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ‌ಉದ್ಯಮ ಸ್ನೇಹಿ ವಾತಾವರಣ ಉತ್ತೇಜಿಸುವ ಬಗ್ಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್ ಅವರು, ಇದು ಎಷ್ಟು ಅವಧಿಯಲ್ಲಿ ಆಗಲಿದೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

English summary

Finance Minister Nirmala Sitharaman promises cut in corporate income tax to 25%

Finance minister Nirmala Sitharaman on Monday said corporate tax rate for companies with over ₹400 crore turnover will be gradually cut to 25%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X