For Quick Alerts
ALLOW NOTIFICATIONS  
For Daily Alerts

ವಾಟ್ ಎ ಆಫರ್! ವಿಯೆಟ್ ಜೆಟ್ ಭಾರತದಲ್ಲಿ ಹಾರಾಟ, ಕೇವಲ ರೂ. 9 ಟಿಕೆಟ್ ದರ (ಶುಲ್ಕ ಹೊರತುಪಡಿಸಿ)

ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ. ವಿಯೆಟ್ನಾಂ ವಿಮಾನಯಾನ ಸಂಸ್ಥೆ ವಿಯೆಟ್ ಜೆಟ್ ಭಾರತ ಮತ್ತು ವಿಯೆಟ್ನಾಂ ನಡುವೆ ಡಿಸೆಂಬರ್ ತಿಂಗಳಿನಿಂದ ನೇರ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ.

|

ವಿಮಾನ ಪ್ರಯಾಣಿಕರಿಗೆ ಇಲ್ಲೊಂದು ಭರ್ಜರಿ ಗುಡ್ ನ್ಯೂಸ್ ಇದೆ. ವಿಯೆಟ್ನಾಂ ವಿಮಾನಯಾನ ಸಂಸ್ಥೆ ವಿಯೆಟ್ ಜೆಟ್ ಭಾರತ ಮತ್ತು ವಿಯೆಟ್ನಾಂ ನಡುವೆ ಡಿಸೆಂಬರ್ ತಿಂಗಳಿನಿಂದ ನೇರ ವಿಮಾನ ಕಾರ್ಯಾಚರಣೆಯನ್ನು ಪ್ರಾರಂಭಿಸಲಿದೆ. ಬಿಕಿನಿ ಧರಿಸಿದ ಗಗನಸಖಿಯರಿಂದ ಪ್ರಯಾಣಿಕರಿಗೆ ಸೇವೆ ಒದಗಿಸುವ ಬಿಕಿನಿ ಏರ್ಲೈನ್ಸ್ ಖ್ಯಾತಿಯ ವಿಯೆಟ್ ಜೆಟ್ ಭಾರತಕ್ಕೆ ಕಾಲಿಟ್ಟಿದೆ. ಇದೇ ಡಿಸೆಂಬರ್ 6ರಿಂದ ಹಾರಾಟ ನಡೆಸಲಿದ್ದು, ಭರ್ಜರಿ ಆಫರ್ ಘೋಷಿಸಿದೆ. ಬನ್ನಿ ನೋಡೋಣ..

 

ಆಗಸ್ಟ್ 20-22ರಂದು ಬುಕಿಂಗ್

ಆಗಸ್ಟ್ 20-22ರಂದು ಬುಕಿಂಗ್

ಡಿಸೆಂಬರ್ 6 ರಿಂದ ಹೋ ಚಿ ಮಿನ್ಹ್ ಸಿಟಿ-ನವದೆಹಲಿ ಮಾರ್ಗದ ನಡುವೆ ವಿಮಾನ ಸೇವೆಯು ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಲಭ್ಯವಾಗಲಿದೆ. ಡಿಸೆಂಬರ್ 7ರಿಂದ ಹನೋಯಿ (Hanoi ) ನಡುವೆ ಸೇವೆಗಳು ಪ್ರಾರಂಭವಾಗಲಿದ್ದು, ವಾರದ ಉಳಿದ ಮೂರು ದಿನಗಳಲ್ಲಿ ವಿಮಾನ ಹಾರಾಟ ನಡೆಸಲಿವೆ. ಮೂರು ದಿನಗಳ ಬುಕಿಂಗ್ ಯೋಜನೆಯಡಿ (ಆಗಸ್ಟ್ 20-22) ಎರಡು ಹೊಸ ಮಾರ್ಗಗಳಿಗೆ ವಿಶೇಷ ಪ್ರಚಾರ ದರವನ್ನು ವಿಯೆಟ್ ಜೆಟ್ ಘೋಷಿಸಿದೆ.

ವಿಯೆಟ್ ಜೆಟ್ ರೂ. 9 ರಿಂದ ಟಿಕೆಟ್

ವಿಯೆಟ್ ಜೆಟ್ ರೂ. 9 ರಿಂದ ಟಿಕೇಟ್ ನೀಡುತ್ತಿದೆ (ವ್ಯಾಟ್, ವಿಮಾನ ನಿಲ್ದಾಣ ಶುಲ್ಕಗಳು ಮತ್ತು ಇತರ ಹೆಚ್ಚುವರಿ ಶುಲ್ಕಗಳನ್ನು ಹೊರತುಪಡಿಸಿ). ವಿಯೆಟ್ ಜೆಟ್ ಪ್ರಚಾರಾರ್ಥ ಟಿಕೆಟ್‌ಗಳು ಆಗಸ್ಟ್ 22 ರವರೆಗೆ ಸಿಗಲಿವೆ. ಈ ಪ್ರಚಾರದ ಅಡಿಯಲ್ಲಿ 8,000 ಸೀಟುಗಳು ಲಭ್ಯವಿದೆ ಎಂದು ವಿಯೆಟ್ ಜೆಟ್ ಫೇಸ್‌ಬುಕ್‌ನಲ್ಲಿನ ಪೋಸ್ಟ್ ಮಾಡಿದೆ.

ಟಿಕೇಟ್ ಬುಕಿಂಗ್ ಹೇಗೆ?
 

ಟಿಕೇಟ್ ಬುಕಿಂಗ್ ಹೇಗೆ?

ಭಾರತ ಮತ್ತು ವಿಯೆಟ್ನಾಂ ನಡುವಿನ ಹಾರಾಟದ ಟಿಕೇಟ್ ಬುಕಿಂಗ್ ಅನ್ನು ವೆಬ್ಸೈಟ್ (www.vietjetair.com), ಮೊಬೈಲ್ (m.vietjetair.com) ಮೊಬೈಲ್ ಆಪ್ (ವಿಯೆಟ್ಜೆಟ್ ಏರ್) ಅಥವಾ ವಿಯೆಟ್ ಜೆಟ್ ಫೇಸ್‌ಬುಕ್ ಪೇಜ್ ಮೂಲಕ ಮಾಡಬಹುದು.

ಇಂಡಿಗೊ ಸೇವೆ

ಇಂಡಿಗೊ ಸೇವೆ

ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊ ಈಗಾಗಲೇ ಅಕ್ಟೋಬರ್‌ನಿಂದ ವಿಯೆಟ್ನಾಂಗೆ ವಿಮಾನ ಸೇವೆಗಳನ್ನು ಘೋಷಿಸಿದೆ. ಸರ್ಕಾರದ ಅನುಮೋದನೆಗೆ ಒಳಪಟ್ಟು, ಅಕ್ಟೋಬರ್ 3 ರಿಂದ ಜಾರಿಗೆ ಬರುವಂತೆ, ಇಂಡಿಗೊ ಸಂಸ್ಥೆಯು ಕೋಲ್ಕತಾ ಮತ್ತು ಹನೋಯಿ ನಡುವೆ ತಡೆರಹಿತ ದೈನಂದಿನ ವಿಮಾನಯಾನ ನಿರ್ವಹಿಸಲಿದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಯೆಟ್ ಜೆಟ್ ಕಾರ್ಯಾಚರಣೆ

ವಿಯೆಟ್ ಜೆಟ್ ಕಾರ್ಯಾಚರಣೆ

ಪ್ರಸ್ತುತ, ವಿಯೆಟ್ ಜೆಟ್ ಪ್ರತಿದಿನ ಸುಮಾರು 400 ವಿಮಾನಗಳನ್ನು ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ 80 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ಇದು ವಿಯೆಟ್ನಾಂ ಮತ್ತು ಅಂತರರಾಷ್ಟ್ರೀಯ ತಾಣಗಳಾದ್ಯಂತ 129 ಮಾರ್ಗಗಳನ್ನು ಒಳಗೊಂಡಿದೆ.

ಭಾರತ ಆದ್ಯತೆಯ ಮಾರುಕಟ್ಟೆ

ಭಾರತ ಆದ್ಯತೆಯ ಮಾರುಕಟ್ಟೆ

ಭಾರತವು ನಮ್ಮ ಆದ್ಯತೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದು ನಮ್ಮ ಬೆಳೆಯುತ್ತಿರುವ ನೆಟ್‌ವರ್ಕ್‌ಗೆ ಒಂದು ಪ್ರಮುಖ ಸೇರ್ಪಡೆಯಾಗಿದೆ ಎಂದು ಹೊಸ ಸಂಸ್ಥೆ ಐಎಎನ್‌ಎಸ್ ವಿಯೆಟ್ ಜೆಟ್ ಉಪಾಧ್ಯಕ್ಷ ನ್ಗುಯೇನ್ ಥಾನ್ ಸನ್ ಹೇಳಿದ್ದಾರೆ.

Read more about: airlines money finance news
English summary

Vietjet fly to India soon, offers flight tickets from Rs 9 (excluding charges)

Vietnam budget carrier Vietjet will commence direct flight operations between India and Vietnam from December.
Story first published: Wednesday, August 21, 2019, 14:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X