ವಾಹನ ಸವಾರರೇ ಎಚ್ಚರ! ಸೆ.1ರಿಂದ ಕಠಿಣ ಸಂಚಾರ ನಿಯಮ, ಇಲ್ಲಿದೆ ಪರಿಷ್ಕೃತ ದಂಡದ ಪಟ್ಟಿ..

ವಾಹನ ಸವಾರರೇ ಇರಲಿ ಎಚ್ಚರ! ಕೇಂದ್ರ ಸರ್ಕಾರವು ೨೦೧೯ರ ಮೋಟಾರು ವಾಹನ ತಿದ್ದುಪಡಿ ಕಾಯಿದೆ ನಿಯಮಗಳನ್ನು ಸೆಪ್ಟಂಬರ್ ೧ರಿಂದ ಜಾರಿಗೊಳಿಸಲಿದೆ. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಸವಾರರು ಭಾರೀ ದಂಡ ಭರಿಸಬೇಕಾಗುತ್ತದೆ.

ವಾಹನ ಸವಾರರೇ ಇರಲಿ ಎಚ್ಚರ! ಕೇಂದ್ರ ಸರ್ಕಾರವು ೨೦೧೯ರ ಮೋಟಾರು ವಾಹನ ತಿದ್ದುಪಡಿ ಕಾಯಿದೆ ನಿಯಮಗಳನ್ನು ಸೆಪ್ಟಂಬರ್ ೧ರಿಂದ ಜಾರಿಗೊಳಿಸಲಿದೆ. ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಸವಾರರು ಭಾರೀ ದಂಡ ಭರಿಸಬೇಕಾಗುತ್ತದೆ.
2019 ಮೋಟಾರು ವಾಹನ (ತಿದ್ದುಪಡಿ) ಕಾಯಿದೆಯ ಆಯ್ದ ೬೩ ನಿಯಮಗಳು ಸೆಪ್ಟಂಬರ್ ಒಂದರಿಂದ ಜಾರಿಗೆ ತರಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯೋಜಿಸಿದೆ.

ಉಲ್ಲಂಘನೆ ದಂಡ, ಪರಿಷ್ಕೃತ ದಂಡ

ಉಲ್ಲಂಘನೆ ದಂಡ, ಪರಿಷ್ಕೃತ ದಂಡ

ಸಂಚಾರಿ ನಿಯಮ ಉಲ್ಲಂಘನೆ ರೂ. ೧೦೦-೨೦೦ - ರೂ. ೫೦೦
ಪರವಾನಗಿ ಇಲ್ಲದೆ ಚಾಲನೆ ರೂ. ೫೦೦ - ರೂ. ೫೦೦೦
ಕುಡಿದು ವಾಹನ ಚಾಲನೆ ರೂ. ೨೦೦೦ - ರೂ. ೧೦೦೦೦
ಅತೀವೇಗದ ಚಾಲನೆ ರೂ. ೪೦೦ - ರೂ. ೧೦೦೦
ವಿಮೆಯಿಲ್ಲದೆ ಚಾಲನೆ ರೂ. ೧೦೦೦ - ರೂ. ೨೦೦೦
ಅಪಾಯಕಾರಿ ಚಾಲನೆ ರೂ. ೧೦೦೦ - ರೂ. ೫೦೦೦

ಚಾಲನಾ ಪರವಾನಗಿ ನಿಯಮ

ಚಾಲನಾ ಪರವಾನಗಿ ನಿಯಮ

ಈ ಹಿಂದೆ ವಾಹನ ಚಾಲನಾ ಲಯಸೆನ್ಸ್ ಪಡೆಯಲು ಇದ್ದ ಕನಿಷ್ಟ ವಿದ್ಯಾರ್ಹತೆ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ವಾಹನ ಚಾಲನಾ ಪರವಾನಗಿ ಅವಧಿ ಮುಗಿದ ಬಳಿಕ ನವೀಕರಣ ಮಾಡಿಕೊಳ್ಳುವುದು. ಈ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಣೆ ಮಾಡಲಾಗಿದೆ. ಪದೇ ಪದೇ ಉದ್ದೇಶಪೂರ್ವಕವಾಗಿ ಸಂಚಾರ ನಿಯಮ ಉಲ್ಲಂಘಿಸುವವರ ಲೈಸೆನ್ಸ್ ರದ್ದುಗೊಳಿಸುವುದು.

ದಂಡ ಶೇ. 10 ರಷ್ಟು ಏರಿಕೆ

ದಂಡ ಶೇ. 10 ರಷ್ಟು ಏರಿಕೆ

ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದಲ್ಲಿ ಪ್ರತಿ ವರ್ಷವು ಶೇ. 10 ರಷ್ಟು ಏರಿಕೆ ಮಾಡಲು ತಿದ್ದುಪಡಿಯಲ್ಲಿ ಸೂಚಿಸಲಾಗಿದೆ.
ಆಂಬುಲೆನ್ಸ್‌ನಂಥ ತುರ್ತು ಸೇವಾ ವಾಹನಗಳಿಗೆ ದಾರಿ ಬಿಟ್ಟುಕೊಡದೇ ಇದ್ದಲ್ಲಿ ರೂ. 10,000 ದಂಡ, ಹೆಲ್ಮೆಟ್‌ ಅಥವಾ ಸೀಟ್‌ ಬೆಲ್ಟ್‌ ಇಲ್ಲದೇ ಸಂಚಾರ ಮಾಡುವವರಿಗೆ ರೂ. 1,000 ದಂಡ ವಿಧಿಸಲು ಚಿಂತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+