ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ದೇಶದ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್‌ಯುಗಳಲ್ಲಿ ಸಿಲುಕಿರುವ ಸುಮಾರು ರೂ. 48,000 ಕೋಟಿ ಪೇಮೆಂಟ್ಗಳನ್ನು ಸಮಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ರೂ. 48,000 ಕೋಟಿ ಬಿಡುಗಡೆ
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಸಭೆಯಲ್ಲಿ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ಅವರು ಪಿಎಸ್‌ಯುಗಳಲ್ಲಿ ಸಿಲುಕಿರುವ ಸುಮಾರು ರೂ. 48,000 ಕೋಟಿ ಪೇಮೆಂಟ್ಗಳನ್ನು ಸಮಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಎಂಎಸ್‌ಎಂಇಗಳು ಮುಂದಿನ 45 ದಿನಗಳಲ್ಲಿ ಪೇಮೆಂಟ್ಗಳನ್ನು ಬಿಡುಗಡೆ ಮಾಡಲು ಕೋರಿದರೆ, ನಿರ್ಮಲಾ ಸೀತಾರಾಮನ್ ನಿರ್ದಿಷ್ಟ ಸಮಯವನ್ನು ತಿಳಿಸಿಲ್ಲ.
ಜಿಡಿಪಿ ಬೆಳವಣಿಗೆ ಮುನ್ಸೂಚನೆ
ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಪ್ರಕಾರ, 2019 ರ ಕ್ಯಾಲೆಂಡರ್ ವರ್ಷದ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಹಿಂದಿನ ಅಂದಾಜು ಶೇ. 6.8 ಕ್ಕಿಂತ ಶೇ. 6.2 ಕ್ಕೆ ಇಳಿಸಿದೆ. 2020 ಕ್ಯಾಲೆಂಡರ್ ವರ್ಷಕ್ಕೆ, ಅಂದಾಜನ್ನು ಶೇಕಡಾ 6.7 ಕ್ಕೆ ಇಳಿಸಿತು. ದುರ್ಬಲ ಜಾಗತಿಕ ಆರ್ಥಿಕತೆಯು ಏಷ್ಯಾದ ರಫ್ತುಗಳನ್ನು ಕುಂಠಿತಗೊಳಿಸಿದೆ ಮತ್ತು ಅನಿಶ್ಚಿತ ಕಾರ್ಯಾಚರಣಾ ವಾತಾವರಣವು ಹೂಡಿಕೆಯ ಮೇಲೆ ದುಷ್ಪರಿಣಾಮ ಬಿರಿದೆ.
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದೇನು?
ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಪ್ರಸ್ತುತ ಆರ್ಥಿಕ ಕುಸಿತವನ್ನು "ಕಳೆದ 70 ವರ್ಷಗಳಲ್ಲಿ ಭಾರತ ಎದುರಿಸದ ಅಭೂತಪೂರ್ವ ಪರಿಸ್ಥಿತಿ" ಎಂದು ಬಣ್ಣಿಸಿದ್ದಾರೆ. ಸುಮಾರು ಐದು ವರ್ಷಗಳಿಂದ ಆರ್ಥಿಕತೆಯು ಅತ್ಯಂತ ಕೆಟ್ಟ ಬೆಳವಣಿಗೆಯನ್ನು ಎದುರಿಸುತ್ತಿದೆ. "ಕಳೆದ 70 ವರ್ಷಗಳಿಂದ, ಭಾರತ ಸರ್ಕಾರವು ಈ ರೀತಿಯ ಆರ್ಥಿಕ ದುಸ್ಥಿತಿಯನ್ನು ಎದುರಿಸಲಿಲ್ಲ. ಸಂಪೂರ್ಣ ಹಣಕಾಸು ವಲಯವು ಮಂಕು ಆವರಿಸಿದ್ದು, ಯಾರನ್ನು ಕೂಡ ಯಾರೂ ನಂಬುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ. ಸಾಲ ನೀಡಲು ಯಾರೂ ಸಿದ್ಧರಿಲ್ಲ. ಭಾರತದ ಬ್ಯಾಂಕುಗಳಲ್ಲಿ ನಿರಂತರ ದ್ರವ್ಯತೆ ಬಿಕ್ಕಟ್ಟು ಭಾರತದ ಹಣಕಾಸು ವ್ಯವಸ್ಥೆಯನ್ನು ಹದಗೆಡಿಸಿದ್ದು, ಪ್ರಸ್ತುತ ಆರ್ಥಿಕ ಕುಸಿತಕ್ಕೆ ಇದು ಪ್ರಮುಖ ಕಾರಣವಾಗಿದೆ.
ಸರ್ಕಾರವು ಆರ್ಥಿಕ ಒತ್ತಡವನ್ನು ಎದುರಿಸಲು ಸೂಕ್ತ ಸಮಯದಲ್ಲಿ ಕೈಗೊಳ್ಳಲಾಗುವ ಹಲವಾರು ಕ್ರಮಗಳನ್ನು ಪರಿಗಣಿಸುತ್ತಿದೆ ಎಂದು ಹೇಳಿದರು. ಐಎಲ್ ಮತ್ತು ಎಫ್ಎಸ್ ಕಂಪನಿಗಳ ಹಣಕಾಸು ವಲಯದಲ್ಲಿನ ಒತ್ತಡವನ್ನು ಎದುರಿಸಲು ಸರ್ಕಾರ ಮತ್ತು ಆರ್ಬಿಐ ಎರಡೂ ಕ್ರಮಗಳನ್ನು ಕೈಗೊಂಡಿವೆ.
ಆರ್ಥಿಕ ಕುಸಿತವನ್ನು ಸುಧಾರಿಸುವ ನಿಟ್ಟಿನಲ್ಲಿ, ಕಳೆದ ಕೆಲವು ತಿಂಗಳುಗಳಲ್ಲಿ ಆರ್ಬಿಐ ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಪರಿಣಾಮವಾಗಿ ನಗದು ವಹಿವಾಟು ಸ್ಥಿರವಾಗಿದ್ದು, ಸಾರ್ವಜನಿಕ ವಲಯದ ಬ್ಯಾಂಕುಗಳು ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ (ಎನ್‌ಬಿಎಫ್‌ಸಿ) ದ್ರವ್ಯತೆಯನ್ನು ಒದಗಿಸಿವೆ ಎಂದು ಹೇಳಿದರು.
ಜಾಗತಿಕ ಬೇಡಿಕೆ ದುರ್ಬಲ
ಪ್ರಸ್ತುತ ಯೋಜಿತ ಜಿಡಿಪಿ ಬೆಳವಣಿಗೆ ಶೇ. 3.2 ಮತ್ತು ಬಹುಶಃ ಇದು ಇನ್ನೂ ಕುಸಿತಕ್ಕೆ ಒಳಗಾಗಬಹುದು. ಜಾಗತಿಕ ಬೇಡಿಕೆ ದುರ್ಬಲವಾಗಲಿದೆ ಎಂದು ಅನೇಕ ಸಂಸ್ಥೆಗಳು ಹೇಳುತ್ತವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿ ಆರ್ಥಿಕತೆ ಹಿಂಜರಿತಕ್ಕೆ ಒಳಗಾಗಿದೆ. ಇದು ಈ ದೇಶಗಳಲ್ಲಿ ಬಳಕೆಯಲ್ಲಿನ ಮಂದಗತಿಯನ್ನು ತೋರಿಸುತ್ತದೆ ಎಂದರು.
ಯುಎಸ್ ಚೀನಾ ವಾಣಿಜ್ಯ ಸಮರ
ಜಾಗತಿಕ ಹಿಂಜರಿತಕ್ಕೆ, ಷೇರುಪೇಟೆಯ ವೈಫಲ್ಯಕ್ಕೆ ಯುಎಸ್-ಚೀನಾ ನಡುವಿನ ವಾಣಿಜ್ಯ ಸಮರ ಪ್ರಮುಖ ಕಾರಣವಾಗಿದೆ. ಇದು ಜಾಗತಿಕ ವ್ಯಾಪಾರ ವಹಿವಾಟಿನ ಮಳೆ ಧಕ್ಕೆ ಉಂಟುಮಾಡಿದೆ ಎಂದರು.
ಸರಳ ತೆರಿಗೆ ವ್ಯವಸ್ಥೆ
ನಾವು ಮೊದಲಿದ್ದ ಐ-ಟಿ ರಿಟರ್ನ್ಸ್‌ನತ್ತ ಸಾಗುತ್ತಿದ್ದೇವೆ. ತೆರಿಗೆ ಪಾವತಿ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಾದ ವೇಳೆ ತೆರಿಗೆ ಅಧಿಕಾರಿಗಳು ನೋಟಿಸ್ ನೀಡುತ್ತಿದ್ದರಲ್ಲದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸುತ್ತಿದ್ದರು. ಇದರಿಂದಾಗಿ ತೆರಿಗೆ ಪಾವತಿದಾರರಿಗೆ ತೀವ್ರ ಕಿರಿಕಿರಿಯಾಗುತ್ತಿತ್ತು. ಕೇಂದ್ರ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಅಕ್ಟೋಬರ್ 8ರ ವಿಜಯದಶಮಿ ದಿನದಿಂದ ಆಧುನಿಕ ತಂತ್ರಜ್ಞಾನ ಬಳಕೆಯ ಸರಳ ತೆರಿಗೆ ವ್ಯವಸ್ಥೆಯನ್ನು ದೇಶದಾದ್ಯಂತ ಜಾರಿಗೆ ತರಲಿದೆ.
ಜಿಎಸ್ಟಿ ಸರಳೀಕರಣ
ಜಿಎಸ್ಟಿಯಲ್ಲಿನ ಹೆಚ್ಚಿನ ತೊಂದರೆಗಳನ್ನು ತೆಗೆದುಹಾಕಲು ಜಿಎಸ್ಟಿಎನ್ ಬಗ್ಎ ಚಿಂತಿಸಲಾಗುವುದು. ಸ್ಥಿರ-ಅವಧಿಯ ಉದ್ಯೋಗವನ್ನು ಪರಿಚಯಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಐ-ಟಿ ಆದೇಶಗಳು, ಸಮನ್ಸ್ ಮತ್ತು ಪತ್ರ ಇತ್ಯಾದಿಗಳನ್ನು ಅಕ್ಟೋಬರ್ 1 ರಿಂದ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುವುದು.
ಬ್ಯಾಂಕುಗಳಿಗೆ 70,000 ಕೋಟಿ ಹೆಚ್ಚುವರಿ ಬಂಡವಾಳ
ಬ್ಯಾಂಕುಗಳಿಗೆ ರೂ. 70,000 ಕೋಟಿಗಳ ಹೆಚ್ಚುವರಿ ಬಂಡವಾಳವನ್ನು ಮಂಜೂರು ಮಾಡಲಾಗಿದ್ದು, ಇದರಿಂದ ರೂ. 5 ಲಕ್ಷ ಕೋಟಿಗಳ ಸಾಲ ಸಿಗುತ್ತದೆ ಎಂದರು. ರೆಪೊ ದರ ಕಡಿತವನ್ನು ತಮ್ಮ ಎಂಸಿಎಲ್‌ಆರ್‌ಗೆ ರವಾನಿಸಲು ಬ್ಯಾಂಕುಗಳು ಒಪ್ಪಿಕೊಂಡಿವೆ.
ಆರ್ಥಿಕತೆಗೆ ದೊಡ್ಡ ಉತ್ತೇಜನ ಅಗತ್ಯ
ಆರ್‌ಬಿಐ ಗಗವರ್ನರ್ ಶಕ್ತಿಕಾಂತ್ ದಾಸ್ ಅವರು ಆರ್ಥಿಕತೆಗೆ ದೊಡ್ಡ ಉತ್ತೇಜನದ ಅಗತ್ಯವಿದೆ ಎಂದಿದ್ದಾರೆ. ತಿಂಗಳ ಆರಂಭದಲ್ಲಿಯೇ ಶಕ್ತಿಕಾಂತ್ ದಾಸ್ ತಮ್ಮ ನಿಲುವನ್ನು ಪ್ರಸ್ತುತಪಡಿಸಿದ್ದರು. ಸರ್ಕಾರವು ಉದ್ಯಮ ಮತ್ತು ಬ್ಯಾಂಕರ್‌ಗಳೊಂದಿಗೆ ಮತ್ತು ಸಂಪತ್ತು ಸೃಷ್ಟಿಕರ್ತರೊಂದಿಗೆ ಮೃದುತ್ವದ ನಿಲುವನ್ನು ಹೊಂದಬೇಕು ಎಂದಿದ್ದರು.


Click it and Unblock the Notifications