For Quick Alerts
ALLOW NOTIFICATIONS  
For Daily Alerts

ಜಿಯೋ ಎಫೆಕ್ಟ್, ಏರ್ಟೆಲ್ ಧಮಾಕಾ! 1,000GB ಹೆಚ್ಚುವರಿ ಡೇಟಾ, ಅನ್ಲಿಮಿಟೆಡ್ ಕರೆ, 1 ವರ್ಷ ಉಚಿತ ಅಮೆಜಾನ್ ಪ್ರೈಮ್

ರಿಲಯನ್ಸ್ ಜಿಯೋ ಎಫೆಕ್ಟ್ ಗೆ ಸಿಲುಕುತ್ತಿರುವ ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರನ್ನು ಸೆಳೆಯಲು ಹಾಗು ಉಳಿಸಲು ಹರಸಾಹಸ ಪಡುತ್ತಲೇ ಇವೆ! ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ಕೂಡ ಜಿಯೋಗೆ ಟಕ್ಕರ್ ನೀಡುತ್ತಲೇ ಬಂದಿದೆ.

|

ರಿಲಯನ್ಸ್ ಜಿಯೋ ಎಫೆಕ್ಟ್ ಗೆ ಸಿಲುಕುತ್ತಿರುವ ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರನ್ನು ಸೆಳೆಯಲು ಹಾಗು ಉಳಿಸಲು ಹರಸಾಹಸ ಪಡುತ್ತಲೇ ಇವೆ! ದೇಶದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ಕೂಡ ಜಿಯೋಗೆ ಟಕ್ಕರ್ ನೀಡುತ್ತಲೇ ಬಂದಿದೆ. ಸೇರಿಗೆ ಸವ್ವಾ ಸೇರು ಎನ್ನುವಂತೆ ಪೈಪೋಟಿ ನೀಡುತ್ತಿದೆ. ಇದೀಗ ಏರ್ಟೆಲ್ ತನ್ನ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ನವೀಕರಿಸಿದ್ದು, ಗ್ರಾಹಕರಿಗೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಲು ಮುಂದಾಗಿದೆ.

ವಿ-ಫೈಬರ್ ಬ್ರಾಡ್ಬ್ಯಾಂಡ್ ನವೀಕರಣ

ವಿ-ಫೈಬರ್ ಬ್ರಾಡ್ಬ್ಯಾಂಡ್ ನವೀಕರಣ

ಏರ್ಟೆಲ್ ತನ್ನ ಮೂರು ವಿ-ಫೈಬರ್ ಬ್ರಾಡ್ಬ್ಯಾಂಡ್ ಯೋಜನೆಗಳನ್ನು ನವೀಕರಿಸಿದೆ. ಅದು ಈಗ ಹೆಚ್ಚುವರಿ ಡೇಟಾವನ್ನು ನೀಡಲಿದ್ದು, ಇದು ಆರು ತಿಂಗಳ ವ್ಯಾಲಿಡಿಟಿ ಹೊಂದಿದೆ. ತನ್ನ ಮೂಲ, ಮನರಂಜನೆ ಮತ್ತು ಪ್ರೀಮಿಯಂ ಯೋಜನೆಗಳಲ್ಲಿ 1,000 ಜಿಬಿ ವರೆಗೆ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಕಂಪನಿಯು ಆರು ತಿಂಗಳು ಕಳೆದ ನಂತರ ಪ್ರಮೋಷನಲ್ ಡೇಟಾವನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ.

ಭರ್ಜರಿ ಹೆಚ್ಚುವರಿ ಡೇಟಾ

ಭರ್ಜರಿ ಹೆಚ್ಚುವರಿ ಡೇಟಾ

ಮೂಲ ಯೋಜನೆಯ ಬೆಲೆ ರೂ. 799 ಆಗಿದೆ. ಆದರೆ ಮನರಂಜನೆ ಮತ್ತು ಪ್ರೀಮಿಯಂ ಯೋಜನೆಗಳಿಗೆ ಕ್ರಮವಾಗಿ ರೂ. 1,099 ಮತ್ತು ರೂ. 1,599 ಬೆಲೆಗೆ ಸಿಗಲಿವೆ. ಮೂಲ ಯೋಜನೆಯೊಂದಿಗೆ ಚಂದಾದಾರರು 200GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ. ಮನರಂಜನಾ ಯೋಜನೆಯೊಂದಿಗೆ 500GB ಹೆಚ್ಚುವರಿ ಡೇಟಾ ಮತ್ತು ಕೊನೆಯದಾಗಿ, ಪ್ರೀಮಿಯಂ ಯೋಜನೆಯೊಂದಿಗೆ 1,000GB ಹೆಚ್ಚುವರಿ ಡೇಟಾವನ್ನು ಪಡೆಯುತ್ತಾರೆ.

ಹೈಸ್ಪೀಡ್ ಡೇಟಾ, ಅನಿಯಮಿತ ಕರೆ

ಹೈಸ್ಪೀಡ್ ಡೇಟಾ, ಅನಿಯಮಿತ ಕರೆ

ಏರ್‌ಟೆಲ್ ಬೇಸಿಕ್ ಯೋಜನೆಯಡಿ, ಗ್ರಾಹಕರು 100 ಜಿಬಿ ಹೈಸ್ಪೀಡ್ ಡೇಟಾವನ್ನು 40 ಎಮ್‌ಬಿಪಿಎಸ್ ವೇಗದಲ್ಲಿ ಪಡೆಯುತ್ತಾರೆ. ಹೆಚ್ಚುವರಿಯಾಗಿ, ಅವರು ಲ್ಯಾಂಡ್‌ಲೈನ್ ಮೂಲಕ ಅನಿಯಮಿತ ಸ್ಥಳೀಯ/ಎಸ್‌ಟಿಡಿ ಕರೆಗಳನ್ನು ಸಹ ಪಡೆಯುತ್ತಾರೆ. ಏರ್‌ಟೆಲ್ ಟಿವಿ ಪ್ರೀಮಿಯಂ ಪ್ಲಾಟ್‌ಫಾರ್ಮ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

ಏರ್ಟೆಲ್ ಎಂಟರ್‌ಟೈನ್‌ಮೆಂಟ್ ಪ್ಲಾನ್

ಏರ್ಟೆಲ್ ಎಂಟರ್‌ಟೈನ್‌ಮೆಂಟ್ ಪ್ಲಾನ್

ಏರ್ಟೆಲ್ ಎಂಟರ್‌ಟೈನ್‌ಮೆಂಟ್ ಯೋಜನೆಯು ತನ್ನ ಚಂದಾದಾರರಿಗೆ 100Mbps ವರೆಗಿನ ವೇಗದೊಂದಿಗೆ 300GB ಹೈಸ್ಪೀಡ್ ಡೇಟಾವನ್ನು ನೀಡುತ್ತದೆ. ಇದು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಸಹ ಒದಗಿಸುತ್ತದೆ. ಚಂದಾದಾರರು ಒಂದು ವರ್ಷಕ್ಕೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಮೂರು ತಿಂಗಳವರೆಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ, Zee5 ಪ್ರೀಮಿಯಂ ಚಂದಾದಾರಿಕೆ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಂ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ.

ಏರ್‌ಟೆಲ್ ಪ್ರೀಮಿಯಂ ಯೋಜನೆ

ಏರ್‌ಟೆಲ್ ಪ್ರೀಮಿಯಂ ಯೋಜನೆ

ಕೊನೆಯದಾಗಿ, ಏರ್ಟೆಲ್ ಪ್ರೀಮಿಯಂ ಯೋಜನೆಯಡಿ ಚಂದಾದಾರರಿಗೆ 600MGB ಡೇಟಾವನ್ನು 300Mbps ವರೆಗಿನ ವೇಗದೊಂದಿಗೆ ನೀಡುತ್ತದೆ. ಇದು ಅನಿಯಮಿತ ಸ್ಥಳೀಯ/ಎಸ್‌ಟಿಡಿ ಕರೆಗಳನ್ನು ಒಳಗೊಂಡಿದೆ. ಎಂಟರ್‌ಟೈನ್‌ಮೆಂಟ್ ಯೋಜನೆಯಂತೆಯೇ ಕಂಪನಿಯು ಚಂದಾದಾರರಿಗೆ ಒಂದು ವರ್ಷದವರೆಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆ, ಮೂರು ತಿಂಗಳವರೆಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ, Zee5 ಪ್ರೀಮಿಯಂ ಚಂದಾದಾರಿಕೆ ಮತ್ತು ಏರ್‌ಟೆಲ್ ಟಿವಿ ಪ್ರೀಮಿಯಂ ಚಂದಾದಾರಿಕೆಯನ್ನು ಒದಗಿಸುತ್ತದೆ.

Read more about: airtel jio telecom money
English summary

Jiob effect: Airtel offers up to 1,000GB more data, Unlimited calls

Airtel has updated three of its V-Fiber Broadband plans, which now offer additional data.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X