For Quick Alerts
ALLOW NOTIFICATIONS  
For Daily Alerts

ಆರ್ಥಿಕತೆಗೆ ಚಿಕಿತ್ಸೆ! ಕೇಂದ್ರದ ಈ ಕ್ರಮಗಳಿಂದಾಗಿ ಈಗಲಾದರೂ ಹಳಿ ತಪ್ಪುತ್ತಿರುವ ಬಂಡಿ ಸರಿಯಾಗಿ ಓಡುವುದೇ?

ವಾಹನ ಉದ್ಯಮ, ಬ್ಯಾಂಕಿಂಗ್ ವಲಯ, ಎಂಎ್ಎಂಇ, ಉತ್ಪಾದನೆ, ಹೌಸಿಂಗ್, ಷೇರುಪೇಟೆ, ಉದ್ಯಮ ವಲಯ, ಹಣಕಾಸು ವಲಯದ ಮಂಕು, ಉದ್ಯೋಗ ಸೃಷ್ಟಿ ಹೀಗೆ ಹಲವಾರು ಸಂಗತಿಗಳು ಆರ್ಥಿಕತೆ ಅತೀ ಕೆಟ್ಟ ಪರಿಣಾಮವನ್ನೇ ಬೀರಿವೆ.

|

ದೇಶದ ಆರ್ಥಿಕತೆಯು ಕಳೆದ 70 ವರ್ಷಗಳಲ್ಲೇ ಅತೀ ಕೆಟ್ಟ ದುಸ್ಥಿತಿಯಲ್ಲಿ ಸಾಗಿದೆ. ವಾಹನ ಉದ್ಯಮ, ಬ್ಯಾಂಕಿಂಗ್ ವಲಯ, ಎಂಎ್ಎಂಇ, ಉತ್ಪಾದನೆ, ಹೌಸಿಂಗ್, ಷೇರುಪೇಟೆ, ಉದ್ಯಮ ವಲಯ, ಹಣಕಾಸು ವಲಯ, ಉದ್ಯೋಗ ಸೃಷ್ಟಿ ಹೀಗೆ ಹಲವಾರು ಸಂಗತಿಗಳು ಆರ್ಥಿಕತೆ ಮೇಲೆ ಅತೀ ಕೆಟ್ಟ ಪರಿಣಾಮವನ್ನೇ ಬೀರಿವೆ. ಆರ್ಥಿಕ ಕುಂಠಿತ ಬೆಳವಣಿಗೆಗೆ ಸಂಬಂಧಿಸಿದಂತೆ ವಿಶ್ಲೇಷಕರು, ಅರ್ಥಶಾಸ್ತ್ರಜ್ಞರು, ಆರ್ಬಿಐ ಗವರ್ನರ್, ನೀತಿ ಆಯೋಗ ಒಳಗೊಂಡಂತೆ ಪ್ರಮುಖರು ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡುತ್ತಲೇ ಬಂದಿದ್ದಾರೆ.

 

ಎಚ್ಚೆತ್ತ ಸರ್ಕಾರ ಆರ್ಥಿಕ ಉತ್ತೇಜನಕ್ಕೆ ಕ್ರಮ

ಎಚ್ಚೆತ್ತ ಸರ್ಕಾರ ಆರ್ಥಿಕ ಉತ್ತೇಜನಕ್ಕೆ ಕ್ರಮ

ಕೊನೆಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನಿನ್ನೆಯ ದಿನ ಕುಂಠಿತಗೊಂಡಿರುವ ಆರ್ಥಿಕತೆಗೆ ಉತ್ತೇಜನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆರ್ಥಿಕ ಪುನಶ್ಚೇತನಕ್ಕೆ ಮುಂದಾಗಿರುವ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳು ಒಳಗೊಂಡಂತೆ ಎಲ್ಲಾ ಕ್ಷೇತ್ರದ ವೇಗೋತ್ಕರ್ಷಕ್ಕೆ ಹಲವಾರು ಕ್ರಮಗಳನ್ನು ಪ್ರಕಟಿಸಿದ್ದಾರೆ.

ಅಗ್ಗದ ಗೃಹ, ವಾಹನ ಸಾಲ

ಅಗ್ಗದ ಗೃಹ, ವಾಹನ ಸಾಲ

ಕೇಂದ್ರ ಸರ್ಕಾರವು ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ, ವಾಹನ ಸಾಲ ಒದಗಿಸಲಿದೆ.
ಸಾಲದ ತಿಂಗಳ ಸಮಾನ ಕಂತು (ಇಎಂಐ) ಕಡಿಮೆಯಾಗಲಿದೆ.
ಗೃಹ ನಿರ್ಮಾಣ ಮತ್ತು ಮೂಲಭೂತ ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸಲಾಗುವುದು.

ಬ್ಯಾಂಕುಗಳಿಗೆ ಉತ್ತೇಜನ
 

ಬ್ಯಾಂಕುಗಳಿಗೆ ಉತ್ತೇಜನ

ಸಾರ್ವಜನಿಕ ಬ್ಯಾಂಕುಗಳಿಗೆ ರೂ.70 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಅಂದರೆ ಸಕಾ್ರಿ ಸ್ವಾಮ್ಯದ ಬ್ಯಾಂಕುಗಳಿಗೆ ಬ್ಯಾಂಕುಗಳಿಗೆ ರೂ. 70,000 ಕೋಟಿ ಹೆಚ್ಚುವರಿ ಬಂಡವಾಳವನ್ನು ಮಂಜೂರು ಮಾಡಲಾಗಿದೆ. ಇದರಿಂದ ಬ್ಯಾಂಕುಗಳ ಸಾಲ ನೀಡಿಕೆ ರೂ. 5 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಬ್ಯಾಂಕೇತರ ಹಣಕಾಸು ಸಂಸ್ಥೇಗಳು ಆಧಾರ್ ಆಧಾರಿತ ಕೆವೈಸಿ ಮೂಲಕ ಪ್ರಕ್ರಿಯೆ ಸರಳಗೊಳಿಸಲಾಗುವುದು. ರೆಪೊ ದರ ಕಡಿತವನ್ನು ತಮ್ಮ ಎಂಸಿಎಲ್‌ಆರ್‌ಗೆ ರವಾನೆ.

ಹೌಸಿಂಗ್ ಫೈನಾನ್ಸ್ ಉತ್ತೇಜನ

ಹೌಸಿಂಗ್ ಫೈನಾನ್ಸ್ ಉತ್ತೇಜನ

ನ್ಯಾಷನಲ್ ಹೌಸಿಂಗ್ ಬೋರ್ಡ್ ನಿಂದ (ಎನ್‌ಎಚ್‌ಬಿ) ಹೌಸಿಂಗ್ ಫೈನಾನ್ಸ್ ಕಂಪೆನಿಗಳಿಗೆ ನೀಡುವ ಹೆಚ್ಚುವರಿ ಹಣವನ್ನು ರೂ. 30,000 ಕೋಟಿಗೆ ಹೆಚ್ಚಿಸಲಾಗಿದೆ. ಇದು ರೂ. 20,000 ಕೋಟಿಗಳಿಂದ ಹೆಚ್ಚಾಗಿದೆ.

ಎಫ್ಬಿಐ ಸರ್ಚಾರ್ಜ್ ರದ್ದು

ಎಫ್ಬಿಐ ಸರ್ಚಾರ್ಜ್ ರದ್ದು

ಸಾಗರೋತ್ತರ ಹೂಡಿಕೆದಾರರ ಬಹುದಿನಗಳ ಬೇಡಿಕೆಯ ಸರ್ಚಾರ್ಜ್ ನ್ನು ರದ್ದುಪಡಿಸಲಾಗಿದೆ. ಷೇರುಗಳ ವರ್ಗಾವಣೆಯ ಅಲ್ಪಾವಧಿ ಮತ್ತು ದೀರ್ಘಾವಧಿ ಲಾಭ ಗಳಿಕೆ ಮೇಳಿನ ಸರ್ಚಾರ್ಜ್ ರದ್ದುಗೊಳಿಸಲಾಗಿದೆ. ಸರ್ಚಾರ್ಜ್ ಹೆಚ್ಚಳದಿಂದ ಆದಾಯ ತೆರಿಗೆ ಹೊರೆಯು ಹೆಚ್ಚಾಗಿತ್ತು.

ಜಿಎಸ್ಟಿ ಸರಳೀಕರಣ

ಜಿಎಸ್ಟಿ ಸರಳೀಕರಣ

ಜಿಎಸ್ಟಿಯಲ್ಲಿನ ಹೆಚ್ಚಿನ ತೊಂದರೆಗಳನ್ನು ತೆಗೆದುಹಾಕಲು ಜಿಎಸ್ಟಿಎನ್ ಬಗ್ಎ ಚಿಂತಿಸಲಾಗುವುದು. ಸ್ಥಿರ-ಅವಧಿಯ ಉದ್ಯೋಗವನ್ನು ಪರಿಚಯಿಸಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಐ-ಟಿ ಆದೇಶಗಳು, ಸಮನ್ಸ್ ಮತ್ತು ಪತ್ರ ಇತ್ಯಾದಿಗಳನ್ನು ಅಕ್ಟೋಬರ್ 1 ರಿಂದ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುವುದು.
ಎಲ್ಲಾ ಜಿಎಸ್ಟಿ ರಿಫಂಡ್ ೩೦ ದಿನದೊಳಗೆ ಇತ್ಯರ್ಥ ಹಾಗು ಭವಿಷ್ಯದಲ್ಲಿ ೬೦ ದಿನಗಳ ಒಳಗಾಗಿ ಜಿಎಸ್ಟಿ ರಿಫಂಡ್ ಲಭ್ಯ.

ರೂ. 48,000 ಕೋಟಿ ಬಿಡುಗಡೆ

ರೂ. 48,000 ಕೋಟಿ ಬಿಡುಗಡೆ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಪಿಎಸ್‌ಯುಗಳಲ್ಲಿ ಸಿಲುಕಿರುವ ಸುಮಾರು ರೂ. 48,000 ಕೋಟಿ ಪೇಮೆಂಟ್ ಗಳನ್ನು ಸಮಯಕ್ಕೆ ಅನುಗುಣವಾಗಿ ಬಿಡುಗಡೆ ಮಾಡಲಾಗುವುದು. ಎಂಎಸ್ಎಂಇ ಬಾಕಿ ಇರುವ ಜಿಎಸ್ಟಿ ಮರುಪಾವತಿ ೩೦ ದಿನಗಳಲ್ಲಿ ಪೂರ್ಣ.

ವಾಹನ, ಸ್ಟಾರ್ಟ್ಅಪ್

ವಾಹನ, ಸ್ಟಾರ್ಟ್ಅಪ್

ವಾಹನ ಮಾರಾಟಕ್ಕೆ ಉತ್ತೇಜನ ನೀಡಲಾಗುವುದು. ವಾಹನ ನೋಂದಣಿ ಶುಲ್ಕ ಏರಿಕೆ ಮುಂದೂಡಿಕೆ. ವಾಹನ ಸವಕಳಿ ಮೌಲ್ಯ ಶೇ. ೧೫ ರಿಂದ ೩೦ ಏರಿಕೆ.
ನವೋದ್ಯಮಗಳಿಗೆ ತೆರಿಗೆ ವಿನಾಯಿತಿ ಒಳಗೊಂಡಂತೆ ಅನೇಕ ಉತ್ತೇಜನ ಕ್ರಮ ಕೈಗೊಳ್ಳಲಾಗಿದೆ.
ಸ್ಟಾರ್ಟ್ಅಪ್ ಹೂಡಿಕೆದಾರರಿಗೆ ಏಂಜೆಲ್ ಟ್ಯಾಕ್ಸ್ ರದ್ದು. ಸ್ಟಾರ್ಟ್ಅಪ್ ಸಮಸ್ಯೆ ಬಗೆಹರಿಸಲು ಸಿಬಿಡಿಟಿಯಲ್ಲಿ ಪ್ರತ್ಯೇಕ ಘಟಕ ರಚನೆ.

ನಿರ್ಮಲಾ ಸೀತಾರಾಮನ್: ಪ್ರಸ್ತುತ ಆರ್ಥಿಕ ಕುಸಿತದ ಬಗ್ಗೆ ಹೇಳಿರುವ ಪ್ರಮುಖ ಅಂಶಗಳು ಇಲ್ಲಿವೆ.. ನಿರ್ಮಲಾ ಸೀತಾರಾಮನ್: ಪ್ರಸ್ತುತ ಆರ್ಥಿಕ ಕುಸಿತದ ಬಗ್ಗೆ ಹೇಳಿರುವ ಪ್ರಮುಖ ಅಂಶಗಳು ಇಲ್ಲಿವೆ..

ಬಿಗ್ ಟ್ರಬಲ್! ದೇಶದ ಆರ್ಥಿಕ ಕುಸಿತಕ್ಕೆ ಹತ್ತು ಕಾರಣಗಳುಬಿಗ್ ಟ್ರಬಲ್! ದೇಶದ ಆರ್ಥಿಕ ಕುಸಿತಕ್ಕೆ ಹತ್ತು ಕಾರಣಗಳು

English summary

Nirmala Sitharaman: Govt announces raft of measures to boost economy

The government on Friday announced a raft of measures, including rollback of enhanced super-rich tax on foreign and domestic equity investors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X