ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಚಾಲಕರಂತ ಸ್ವ ಉದ್ಯೋಗಿಗಳಿಗೆ ಪ್ರಾವಿಡೆಂಟ್ ಫಂಡ್ ಯೋಜನೆ ಪರಿಚಯಿಸುವುದಾಗಿ ಪ್ರಸ್ತಾಪಿಸಿದೆ.
ಉದ್ಯೋಗಿಗಳ ಸಾಮಾಜಿಕ ಭದ್ರತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಚಾಲಕರಂತ ಸ್ವ ಉದ್ಯೋಗಿಗಳಿಗೆ ಪ್ರಾವಿಡೆಂಟ್ ಫಂಡ್ ಯೋಜನೆ ಪರಿಚಯಿಸುವುದಾಗಿ ಪ್ರಸ್ತಾಪಿಸಿದೆ.
ಎಲ್ಲಾ ವರ್ಗದ ಉದ್ಯೋಗಿಗಳಿಗೆ ಕೊಡುಗೆ ಒದಗಿಸುವ ಸಲುವಾಗಿ ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ಭವಿಷ್ಯ ಕಾಯ್ದೆಗೆ ತಿದ್ದುಪಡಿ ತರಲು ಕಾರ್ಮಿಕ ಸಚಿವಾಲಯ ಯೋಜಿಸಿದೆ.
ಸಾಮಾಜಿಕ ಭದ್ರತೆ
ಕೇಂದ್ರದ ಈ ಕ್ರಮವು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಪಿಂಚಣಿ ಯೋಜನೆಯಂತೆ ಕಾರ್ಯನಿರ್ವಹಿಸಲಿದೆ. ಕಡ್ಡಾಯವಾಗಿ ಶೇ. 12ಕ್ಕಿಂತ ಕಡಿಮೆ ಇರುವ ಕೆಲವು ವರ್ಗದ ಉದ್ಯೋಗಿಗಳಿಗೆ ಕೊಡುಗೆ ದರ ಒದಗಿಸಲಿದೆ. ಉದ್ಯೋಗದಾತರಿಗೆ ಯಾವುದೇ ಹೊಣೆಗಾರಿಕೆಯಿಂದ ವಿನಾಯಿತಿ ನೀಡುವುದು ಇದರ ಉದ್ದೇಶವಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಪಿಎಫ್ ಮತ್ತು ಎಂಪಿ ಕಾಯ್ದೆ ಅನ್ವಯ
ಹೊಸ ನಿಯಮವು, ಚಾಲಕರು, ದಾಸಿಯರು ಅಥವಾ ಸ್ವಯಂ ಉದ್ಯೋಗಿಗಳಂತಹ ಹಲವಾರು ವರ್ಗದ ಕಾರ್ಮಿಕರಿಗೆ ದರಗಳನ್ನು ನಿಗದಿಪಡಿಸಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಪ್ರಸ್ತುತ, ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ನೌಕರರ ಭವಿಷ್ಯ ನಿಧಿ ಸಂಸ್ಥೆಗೆ ತಲಾ 12% ಕೊಡುಗೆ ನೀಡುತ್ತಾರೆ. 20 ಅಥವಾ ಹೆಚ್ಚಿನ ಜನರನ್ನು ನೇಮಿಸಿಕೊಳ್ಳುವ ಪ್ರತಿ ಕಂಪನಿಗೆ ಇಪಿಎಫ್ ಮತ್ತು ಎಂಪಿ ಕಾಯ್ದೆ ಅನ್ವಯಿಸುತ್ತದೆ.
ಟೇಕ್ ಹೋಮ್ ಸ್ಯಾಲರಿ ಹೆಚ್ಚಳ
ಟೇಕ್-ಹೋಮ್ ವೇತನವನ್ನು ಹೆಚ್ಚಿಸುವ ಉದ್ದೇಶದಿಂದ ನೌಕರರ ಭವಿಷ್ಯ ನಿಧಿಗೆ (ಇಪಿಎಫ್) ನೌಕರರು ನೀಡುವ ಕೊಡುಗೆಯನ್ನು ಕಡಿಮೆ ಮಾಡಲು ಸರ್ಕಾರ ಯೋಜಿಸಿದೆ. ಸರ್ಕಾರ ಕೊಡುಗೆಯ ಭಾಗವನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಈ ಪ್ರಸ್ತಾವನೆಯು ಉದ್ದೇಶಿತ ನೌಕರರ ಭವಿಷ್ಯ ನಿಧಿ ಮತ್ತು ವಿವಿಧ ಭವಿಷ್ಯ ಮಸೂದೆ 2019 ರ ಭಾಗವಾಗಿದೆ.


Click it and Unblock the Notifications