ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕುಸಿಯುತ್ತಿರುವ ದೇಶದ ಆರ್ಥಿಕ ಬೆಳವಣಿಗೆಯನ್ನು ತಡೆಯಲು ಕೇಂದ್ರ ಸರ್ಕಾರ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಎಫ್ಡಿಐ ನಿಯಮ ಸಡಿಲಿಕೆ
ಪ್ರಮುಖವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸಿಂಗಲ್ ಬ್ರಾಂಡ್ ಚಿಲ್ಲರೆ ಮಾರಾಟ ವ್ಯಾಪಾರಿಗಳಿಗೆ, ಡಿಜಿಟಲ್ ಮಾಡದ್ಯಮ, ಗುತ್ಇಗೆ ಆಧಾರಿತ ಉತ್ಪಾದನೆ ಹಾಗು ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರಗಳಲ್ಲಿ ವಿದೇಶ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ನಿಯಮ ಸಡಿಲಿಕೆ ಮಾಡಲಾಯಿತು.
ಎಫ್ಡಿಐ ಹೂಡಿಕೆ ಭರ್ಜರಿ ಅವಕಾಶ
ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ, ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಶೇಕಡಾ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ನಿರ್ಣಯ ತೆಗೆದುಕೊಳ್ಳಲಾಯಿತು. ದೇಶಿ ಉತ್ಪಾದನೆ ಹೆಚ್ಚಳಕ್ಕಾಗಿ ಗುತ್ತಿಗೆ ಉತ್ಪಾದನೆಯಲ್ಲೂ ಶೇ. ೧೦೦ರಷ್ಟು ಹಾಗು ಡಿಜಿಟಲ್ ಮಾಧ್ಯಮದಲ್ಲಿ ಶೇಕಡಾ 26ರಷ್ಟು ಎಫ್ಡಿಐಗೆ ಅವಕಾಶ ಕಲ್ಪಿಸಲಾಗಿದೆ
ಪಿಯೂಷ್ ಗೋಯಲ್ ಹೇಳಿದ್ದೇನು?
ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯೆಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲ್ಲಿದ್ದಲು ಗಣಿಗಾರಿಕೆ ಮತ್ತು ವಿವಿಧ ಮೂಲಸೌಕರ್ಯದಲ್ಲಿ ಶೇಕಡಾ 100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ ಎಂದರು. ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮ ಬದಲಾವಣೆ ಭಾರತವನ್ನು ಆಕರ್ಷಕ ಹೂಡಿಕೆ ದೇಶವಾಗಿಸಲಿದೆ. ಇದರಿಂದ ಹೂಡಿಕೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಹೆಚ್ಚಾಗಲಿದೆ.
ಆನ್ಲೈನ್ ಮಾರಾಟಕ್ಕೆ ಅವಕಾಶ
ಸಿಂಗಲ್ ಬ್ರಾಂಡ್ ಚಿಲ್ಲರೆ ಮಾರಾಟ ಕಂಪನಿಗಳು ಮಳೆಗೆಗಳನ್ನು ಆರಂಭಿಸುವ ಮೊದಲೇ ಆನ್ಲೈನ್ ಮೂಲಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ಕ್ರಮ ಆರ್ಥಿಕ ಉತ್ತೇಜನಕ್ಕೆ ವೇಗ ನೀಡಲಿದೆ. ಸಿಂಗಲ್ ಬ್ರಾಂಡ್ ಸರಕುಗಳು ಪ್ರತಿ ವರ್ಷ ಶೇ.30ರಷ್ಟು ಮಾರಾಟವಾಗಬೇಕು ಎಂಬ ನಿಯಮ ಇದೆ. ಆದರೆ ಐದು ವರ್ಷದ ವಹಿವಾಟಿನಲ್ಲಿ ಶೇ. ೩೦ರಷ್ಟು ದೇಶಿ ಸರಕುಗಳು ಮಾರಾಟವಾದರೆ ಸಾಕು ಎಂದು ನಿಯಮ ಸಡಿಲಿಸಲಾಗಿದೆ.
ಭಾರೀ ಹಿಂಜರಿತ
ದೇಶದ ಆಟೊಮೊಬೈಲ್, ರಿಯಲ್ ಎಸ್ಟೇಟ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ದಿನ ಬಳಕೆಯ ಸರಕುಗಳ ವಲಯದಲ್ಲಿ ಭಾರೀ ಆರ್ಥಿಕ ಹಿಂಜರಿತ ಇದೆ. ದಿನೇ ದಿನೇ ಉತ್ಪಾದನೆ ಕುಂಠಿತಗೊಳ್ಳುತ್ತಿದ್ದ, ಉದ್ಯೋಗ ನಷ್ಟವಾಗುತ್ತಿದೆ.


Click it and Unblock the Notifications