ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣಾ ಕಾರ್ಯಸೂಚಿಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣಾ, ಬ್ಯಾಂಕುಗಳ ಬಲವರ್ಧನೆ ಕಾರ್ಯಸೂಚಿಯ ಭಾಗವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಪಿಎನ್ಬಿ + ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ + ಯುನೈಟೆಡ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್, ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ವಿಲೀನದ ನಂತರ ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎನಿಸಲಿದ್ದು, ಇದು ರೂ. ೧.೭೫ ಲಕ್ಷ ಕೋಟಿ ವಹಿವಾಟು ಹೊಂದಿದೆ. ಬ್ಯಾಂಕ್ ಒಟ್ಟು 11.437 ಶಾಖೆಗಳನ್ನು ಹೊಂದಲಿದೆ.
ಕೆನರಾ + ಸಿಂಡಿಕೇಟ್ ಬ್ಯಾಂಕ್
ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ವಿಲೀನಗೊಳ್ಳಲಿದ್ದು, ಇದು ರೂ. 15.20 ಲಕ್ಷ ಕೋಟಿ ವ್ಯವಹಾರದೊಂದಿಗೆ ನಾಲ್ಕನೇ ಅತಿದೊಡ್ಡ ಪಿಎಸ್‌ಬಿ ಆಗಿ ಹೊರಹೊಮ್ಮಲಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ + ಆಂಧ್ರ ಬ್ಯಾಂಕ್ + ಕಾರ್ಪೊರೇಷನ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ವಿಲೀನದೊಂದಿಗೆ ದೇಶದ ಐದನೇ ದೊಡ್ಡ ಬ್ಯಾಂಕ್ ಎನಿಸಲಿದೆ. ಇದು ರೂ. 14.59 ವ್ಯವಹಾರ ಹೊಂದಿದೆ.
ಇಂಡಿಯನ್ + ಅಲಹಾಬಾದ್ ಬ್ಯಾಂಕ್
ಇಂಡಿಯನ್ ಬ್ಯಾಂಕ್, ಅಲಹಾಬಾದ್ ಬ್ಯಾಂಕ್ ವಿಲೀನಗೊಂಡು ರೂ. 8.08 ಲಕ್ಷ ಕೋಟಿಗಳ ವ್ಯವಹಾರದೊಂದಿಗೆ 7 ನೇ ಅತಿದೊಡ್ಡ ಪಿಎಸ್‌ಬಿ ಆಗಲಿದೆ.
ಈ ಎಲ್ಲಾ ಪಿಎಸ್‌ಬಿ ವ್ಯವಹಾರಗಳಲ್ಲಿ ಶೇಕಡಾ 88ರಷ್ಟು ಈ ವಿಲೀನಗೊಂಡ ಬ್ಯಾಂಕುಗಳೊಂದಿಗೆ ಇರುತ್ತದೆ.
ಪ್ರಾದೇಶಿಕ ಉಪಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಯುಕೊ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ತಮ್ಮ ಪ್ರಬಲ ಪ್ರಾದೇಶಿಕ ಬ್ಯಾಂಕುಗಳ ಕಾರಣದಿಂದಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ.
ಬಂಡವಾಳದ ವಿಘಟನೆ
10 ಪಿಎಸ್‌ಬಿಗಳ ಒಟ್ಟು ರೂ. 55,250 ಕೋಟಿ ಒಡೆದು ಹೋದ ವಿವರ ಇಲ್ಲಿದೆ:
ಪಂಜಾಬ್ ನ್ಯಾಷನಲ್ ಬ್ಯಾಂಕ್ - ರೂ. 16,000 ಕೋಟಿ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ - ರೂ. 11,700 ಕೋಟಿ
ಬ್ಯಾಂಕ್ ಆಫ್ ಬರೋಡಾ - ರೂ. 7,000 ಕೋಟಿ
ಕೆನರಾ ಬ್ಯಾಂಕ್ - ರೂ. 6,500 ಕೋಟಿ
ಇಂಡಿಯನ್ ಬ್ಯಾಂಕ್ - ರೂ. 2,500 ಕೋಟಿ
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ - ರೂ. 3,800 ಕೋಟಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - ರೂ. 3,300 ಕೋಟಿ
ಯುಕೋ ಬ್ಯಾಂಕ್ - ರೂ. 2,100 ಕೋಟಿ
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ - ರೂ. 1,600 ಕೋಟಿ
ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ - ರೂ. 750 ಕೋಟಿ
ಬ್ಯಾಂಕುಗಳ ವಿಲೀನಕ್ಕಾಗಿ ದೇಶದ ಉನ್ನತ ಹತ್ತು ಸರ್ಕಾರಿ ಬ್ಯಾಂಕುಗಳ ಮುಖ್ಯ ಅಧಿಕಾರಿಗಳೊಂದಿಗೆ ಹಣಕಾಸು ಸಚಿವಾಲಯ ಸಭೆ ಕರೆದಿತ್ತು.. ಅಲಹಾಬಾದ್ ಬ್ಯಾಂಕ್, ಆಂಧ್ರ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಒಬಿಸಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು.


Click it and Unblock the Notifications