ಜಿಡಿಪಿ ಬೆಳವಣಿಗೆ ದರ ಶೇ. 5ಕ್ಕೆ ಕುಸಿತ
2019-20 ಸಾಲಿನ ಮೊದಲ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 5 ಕ್ಕಿಂತ ಕಡಿಮೆಯಾಗಿದೆ.
2019-20 ಸಾಲಿನ ಮೊದಲ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ. 5 ಕ್ಕಿಂತ ಕಡಿಮೆಯಾಗಿದೆ. ಇದು ಕಳೆದ ಆರುವರೆ ವರ್ಷದಲ್ಲಿಯೇ ಅತಿ ಕಡಿಮೆ ಮಟ್ಟ ತಲುಪಿದೆ.

ದುರ್ಬಲ ಹೂಡಿಕೆ ಮತ್ತು ನಿಧಾನಗತಿಯ ಬೇಡಿಕೆಯಿಂದ ಹಿಂದಿನ ತ್ರೈಮಾಸಿಕದಲ್ಲಿ ದಾಖಲಾದ ಜಿಡಿಪಿ ಬೆಳವಣಿಗೆ ದರ ಶೇಕಡಾ 5.8ಕ್ಕಿಂತ ಕುಸಿತ ಕಂಡಿದೆ.
ಕಳೆದ 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ದರವು ಶೇಕಡಾ 6.8 ರೊಂದಿಗೆ ಕೊನೆಗೊಂಡಿದೆ. 2018-19ನೇ ಸಾಲಿನ ನಾಲ್ಕನೇ ತ್ರೈಮಾಸಿಕದ (ಜನವರಿಯಿಂದ ಮಾರ್ಚ್) ಬೆಳವಣಿಗೆಯ ದರವು ಶೇಕಡಾ 5.8 ರಷ್ಟಿತ್ತು.
ಉತ್ಪಾದನಾ ವಲಯವು ಕೇವಲ ಶೇಕಡಾ 0.6ರಷ್ಟಿದ್ದರೆ, ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ವಲಯವು ಶೇಕಡಾ 2ರಷ್ಟಿದೆ. ಈ ಅವಧಿಯಲ್ಲಿ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ, ನಿರ್ಮಾಣ ಮತ್ತು ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು ಕ್ರಮವಾಗಿ 2.7%, 5.7% ಮತ್ತು 5.9% ಕ್ಕೆ ಏರಿದೆ.
ದುರ್ಬಲ ಹೂಡಿಕೆ ಮತ್ತು ನಿಧಾನಗತಿಯ ಬೇಡಿಕೆ, ಆರ್ಥಿಕ ಹಿಂಜರಿತ, ಆಟೊಮೊಬೈಲ್ ವಲಯದಲ್ಲಿನ ಕುಸಿತದಿಂದಾಗಿ ಇಳಿಕೆಯಾಗಿದೆ.


Click it and Unblock the Notifications